- PM CARES for children ಅಡಿಯಲ್ಲಿ ಅನಾಥ ಮಕ್ಕಳಿಗೆ ಸೌಲಭ್ಯ
- ಎಲ್ಲ ಮಕ್ಕಳಿಗೆ 10 ಲಕ್ಷ ರೂ. ಆರ್ಥಿಕ ನೆರವು
- ಪುನರ್ವಸತಿ, ಶಾಲಾ ಶಿಕ್ಷಣಕ್ಕೆ ನೆರವು
- ಶಾಲಾ ಶಿಕ್ಷಣಕ್ಕೆ 20,000 ರೂ. ಸ್ಕಾಲರ್ ಶಿಪ್
- ಉನ್ನತ ಶಿಕ್ಷಣಕ್ಕೆ ಸಾಲದ ನೆರವು
- 5 ಲಕ್ಷ ರೂ.ಗಳ ಆರೋಗ್ಯ ವಿಮೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್- 19 ಬಿಕ್ಕಟ್ಟಿನಿಂದ ಅನಾಥರಾಗಿರುವ ಮಕ್ಕಳ ಆರೈಕೆಗೆ ನೆರವಾಗುವ ಉದ್ದೇಶದಿಂದ ಪಿಎಂ ಕೇರ್ಸ್ ಮಕ್ಕಳ ಯೋಜನೆಗೆ ಸೋಮವಾರ ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 10.30ಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿಯವರು ಮಕ್ಕಳಿಗೆ ಸೌಲಭ್ಯಗಳನ್ನು ವಿತರಿಸಲಿದ್ದಾರೆ. ಶಾಲೆಗೆ ಹೋಗುವ ಮಕ್ಕಳಿಗೆ ಸ್ಕಾಲರ್ ಶಿಪ್ ವರ್ಗಾಯಿಸಲಿದ್ದಾರೆ. ಪಿಎಂ ಕೇರ್ಸ್ ಯೋಜನೆಯಡಿಯಲ್ಲಿ ಪಾಸ್ ಬುಕ್, ಹೆಲ್ತ್ ಕಾರ್ಡ್ ನೀಡಲಿದ್ದಾರೆ.
ಹೆತ್ತವರು, ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಪಿಎಂ ಕೇರ್ಸ್ ( PM CARES for children) ಅಡಿಯಲ್ಲಿ ಸೌಲಭ್ಯಗಳು ದೊರೆಯಲಿದೆ. 2021ರ ಮೇ 29ರಂದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಕೋವಿಡ್ ಬಿಕ್ಕಟ್ಟಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಇದು ಸಹಕಾರಿಯಾಗಲಿದೆ.
ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಸರ್ವಾಂಗೀಣ ರಕ್ಷಣೆ, ಪುನರ್ವಸತಿ, ಶಿಕ್ಷಣಕ್ಕೆ ನೆರವು, ಶಾಲಾ ಮಕ್ಕಳಿಗೆ 20,000 ರೂ. ಸ್ಕಾಲರ್ ಶಿಪ್, ಉನ್ನತ ಶಿಕ್ಷಣಕ್ಕೆ ಸಾಲ, ಅವರು 23 ವರ್ಷ ವಯಸ್ಸಾಗುವಾಗ 10 ಲಕ್ಷ ರೂ.ಗಳ ಆರ್ಥಿಕ ನೆರವು, ಆರೋಗ್ಯ ವಿಮೆ ವಿತರಣೆಯ ಉದ್ದೇಶವನ್ನು ಯೋಜನೆ ಹೊಂದಿದೆ. ಈ ನಿಟ್ಟಿನಲ್ಲಿ pmcaresforchildren.in ಎಂಬ ವೆಬ್ ಪೋರ್ಟಲ್ ಅನ್ನು ತೆರೆಯಲಾಗಿದೆ. 611 ಜಿಲ್ಲೆಗಳಿಂದ 9042 ಅರ್ಜಿಗಳನ್ನು ಇದುವರೆಗೆ ಸ್ವೀಕರಿಸಲಾಗಿದೆ. 4345 ಅರ್ಜಿಗಳನ್ನು ಅನುಮೋದಿಸಲಾಗಿದೆ.