ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯ 13ನೇ ಕಂತು (PM-KISAN 13th Installment:) ಇಂದು(ಫೆಬ್ರವರಿ 27) ಬಿಡುಗಡೆಯಾಗಲಿದೆ. ಕರ್ನಾಟಕದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಯ ಕಂತಿನ ಬಿಡುಗಡೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಣ ಬಿಡುಗಡೆಯಾದರೆ, ಅರ್ಹ ರೈತರ ಖಾತೆಗೆ 2 ಸಾವಿರ ರೂ. ಜಮೆಯಾಗಲಿದೆ.
ಈ ಯೋಜನೆಯಡಿ ಕೇಂದ್ರ ಸರ್ಕಾರವು ಸುಮಾರು 16,000 ಕೋಟಿ ರೂ. ಬಿಡುಗಡೆ ಮಾಡುತ್ತಿದೆ. ಸುಮಾರು 8 ಕೋಟಿ ಅರ್ಹ ಫಲಾನುಭವಿಗಳಿಗೆ ಈ ದೊರೆಯಲಿದೆ. ಪ್ರತಿ ವಿತ್ತ ವರ್ಷದಲ್ಲಿ ಕೇಂದ್ರ ಸರ್ಕಾರ ಅರ್ಹ ರೈತರಿಗೆ 6,000 ಅನುದಾನವನ್ನು ಒದಗಿಸುತ್ತದೆ. ಈ ಹಣ ನೇರ ನಗದು ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ.
ಇದನ್ನೂ ಓದಿ: PM KISAN SAMMAN| ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂಪಾಯಿ ವರ್ಗಾವಣೆ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಕಂತಿನ ಸ್ಟೇಟಸ್ ಹೇಗೆ ಚೆಕ್ ಮಾಡುವುದು?
ಮೊದಲಿಗೆ https://pmkisan.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ. ಪೇಮೆಂಟ್ ಸಕ್ಸೆಸ್ ಟ್ಯಾಬ್‌ನಲ್ಲಿ ನಿಮೆಗ ಭಾರತೀಯ ನಕಾಸೆ ದೊರೆಯುವುದು. ಬಲಗಡೆಗೆ ಯೆಲ್ಲೋ ಬಣ್ಣದ ಡ್ಯಾಶ್ ಬೋರ್ಡ್ ಟ್ಯಾ ಇದೆ. ಆ ಡ್ಯಾಶ್‌ಬೋರ್ಡ್ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ಮುಂದೆ ಹೊಸ ಪೇಜ್ ತೆರೆದುಕೊಳ್ಳುವುದು. ಅಲ್ಲಿ ವಿಲೇಜ್ ಡ್ಯಾಶ್‌ಬೋರ್ಡ್ ಕಾಣಿಸುತ್ತದೆ. ಅಲ್ಲಿ ಕೇಳುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕು. ಬಳಿಕ ರಾಜ್ಯ, ಡಿಸ್ಟ್ರಿಕ್ಟ್, ಸಬ್ ಡಿಸ್ಟ್ರಿಕ್ಟ್ ಮತ್ತು ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳಿ. ಕೊನೆಗೆ ಶೋ ಬಟನ್ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮಗೆ ಹಣ ಬಂದಿದೆಯೋ ಇಲ್ಲವೇ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದು.