Site icon Vistara News

PM Kisan: 8.5 ಕೋಟಿ ರೈತರ ಖಾತೆಗಳಿಗೆ ಮುಂದಿನ ವಾರ ಈ ದಿನಾಂಕದಂದು ಜಮೆ ಆಗಲಿದೆ 2,000 ರೂ.

Narendra Modi With Farmers

Central Government increases MSP of 6 rabi crops; Rs 150 hike for wheat

ನವದೆಹಲಿ: ದೇಶದ ಕೋಟ್ಯಂತರ ರೈತರಿಗೆ ಅನುಕೂಲವಾಗಲಿ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ (PM Kisan) ಯೋಜನೆ ಜಾರಿಗೆ ತಂದಿದೆ. ಅದರಂತೆ, ವರ್ಷದಲ್ಲಿ ಮೂರು ಬಾರಿ ಅಂದರೆ, ನಾಲ್ಕು ತಿಂಗಳಿಗೊಮ್ಮೆ ತಲಾ 2 ಸಾವಿರ ರೂಪಾಯಿಯನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಅದರಂತೆ, ಕಿಸಾನ್‌ ಸಮ್ಮಾನ್‌ ಯೋಜನೆಯ 14ನೇ ಕಂತಿನ ಹಣವನ್ನು ಜುಲೈ 27ರಂದು ಕರ್ನಾಟಕವೂ ಸೇರಿ ದೇಶದ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ. ಜಮೆಯಾಗಲಿದೆ.

ರೈತರ ಖಾತೆಗಳಿಗೆ ಹಣ ಜಮೆ ಮಾಡುವ ಕುರಿತು ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಟ್ವಿಟರ್‌ ಖಾತೆಯಲ್ಲಿ ಅಪ್‌ಡೇಟ್‌ ಹಂಚಿಕೊಂಡಿದೆ. “ಪಿಎಂ ಕಿಸಾನ್‌ ಯೋಜನೆಯ 14ನೇ ಕಂತಿನ ಹಣವನ್ನು ದೇಶದ 8.5 ಕೋಟಿ ರೈತರಿಗೆ ಜುಲೈ 27ರಂದು ಜಮೆ ಮಾಡಲಾಗುತ್ತದೆ” ಎಂದು ಮಾಹಿತಿ ನೀಡಿದೆ. ಕರ್ನಾಟಕದ ಲಕ್ಷಾಂತರ ರೈತರು ಕೂಡ ಇದೇ ದಿನದಂದು ಹಣ ಪಡೆಯಲಿದ್ದಾರೆ. ವಾರ್ಷಿಕವಾಗಿ ರೈತರ ಖಾತೆಗಳಿಗೆ 6 ಸಾವಿರ ರೂ. ಜಮೆ ಮಾಡಲು ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಗೆ ತರಲಾಗಿದೆ.

ಪಿಎಂ ಕಿಸಾನ್‌ ಫಲಾನುಭವಿಗಳ ಸ್ಟೇಟಸ್‌ ತಿಳಿಯುವುದು ಹೇಗೆ?

ಇದನ್ನೂ ಓದಿ: PM KISAN SAMMAN| ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂಪಾಯಿ ವರ್ಗಾವಣೆ

ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?

ಯಾವುದೇ ಸರ್ಕಾರದ ಯೋಜನೆಯಲ್ಲಿ ಫಲ ಪಡೆಯಲು ನಿರ್ದಿಷ್ಟ ಅರ್ಹತೆ ಇರುತ್ತದೆ. ಅದರ ಆಧಾರದಲ್ಲಿ ಸೌಲಭ್ಯ ಬಿಡುಗಡೆಯಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಸಣ್ಣ ಮತ್ತು ಮಧ್ಯಮ ರೈತರು ಪ್ರಯೋಜನ ಪಡೆಯಬಹುದು.

ಬೇಕಾಗುವ ದಾಖಲೆಗಳು

ಪಿಎಂ ಕಿಸಾನ್‌ ಯೋಜನೆಯ ಸೌಲಭ್ಯಗಳನ್ನು ಪಡೆಯಲು ರೈತರು ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಹೆಸರು, ವಯಸ್ಸು, ಲಿಂಗ ಮತ್ತು ಎಸ್‌ಸಿ/ಎಸ್‌ಟಿ ಕೆಟಗರಿ ಕುರಿತ ದಾಖಲೆಗಳನ್ನು ನೀಡಬೇಕಾಗುತ್ತದೆ. ಆಧಾರ್‌ ಸಂಖ್ಯೆಯನ್ನೂ ಕೊಡಬೇಕಾಗುತ್ತದೆ. ಭೂಮಿಯ ಮಾಲಿಕತ್ವ ದಾಖಲೆ, ಬ್ಯಾಂಕ್‌ ಖಾತೆ ವಿವರಗಳನ್ನೂ ನೀಡಬೇಕಾಗುತ್ತದೆ.

Exit mobile version