Site icon Vistara News

Independence Day | ಕನ್ನಡದ ಸಾಧಕರ ವಂದೇ ಮಾತರಂಗೆ ಮನಸೋತ ಪ್ರಧಾನಿ ಮೋದಿ

independence day

ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕರ್ನಾಟದಕ ಸಾಧಕರನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ಮಿಸಿದ್ದ ವಂದೇ ಮಾತರಂ ವಿಡಿಯೊಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು ಕನ್ನಡದಲ್ಲೇ ಶಹಬ್ಬಾಸ್‌ಗಿರಿ ನೀಡಿದ್ದಾರೆ.

“ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ಕರ್ನಾಟಕದ ಅಪ್ರತಿಮ ಸಾಧಕರ ಅತ್ಯುತ್ತಮ ಪ್ರಯತ್ನ,’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

ಏನಿದೆ ವಿಡಿಯೊದಲ್ಲಿ

ಈ ವಿಡಿಯೊದಲ್ಲಿ ಕರ್ನಾಟಕದ ಸಾಧಕರನ್ನು ಭಿನ್ನ ಭೂಮಿಕೆಯಲ್ಲಿ ಚಿತ್ರಿಸಲಾಗಿದೆ. ಪ್ರಮುಖವಾಗಿ ಕನ್ನಡ ಚಿತ್ರರಂಗದ ನಾಯಕರನ್ನೇ ತೋರಿಸಲಾಗಿದೆ. ಕಿಚ್ಚ ಸುದೀಪ್‌, ರವಿಚಂದ್ರನ್‌, ಅನಂತ್‌ನಾಗ್‌, ಶಿವರಾಜ್‌ ಕುಮಾರ್, ನಟ ಹಾಗೂ ರಾಜ್ಯ ಸಭೆ ಸದಸ್ಯ ಜಗ್ಗೇಶ್‌, ರಮೇಶ್ ಅರವಿಂದ್‌, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಮುರಳಿ ವಿಜಯ್‌, ಡಾಲಿ ಧನಂಜಯ್‌ ಅವರು ನಾನಾ ಪಾತ್ರಗಳಲ್ಲಿಮಿಂಚಿದ್ದಾರೆ. ಸಾಲು ಮರದ ತಿಮ್ಮಕ್ಕ ಅವರು “ಸಸ್ಯ ಶ್ಯಾಮಲ ಮಾತರಂ,’ ಎಂಬ ಸಾಲು ಬರುವಲ್ಲಿ ತೋರಿಸಲಾಗಿದೆ. ವಿಜಯ್‌ ಪ್ರಕಾಶ್‌ ಅವರ ಧ್ವನಿಯಲ್ಲಿ ಹಾಡು ಮೂಡಿ ಬಂದಿದೆ. ಬೊಮ್ಮಾಯಿ ಅವರು ಟ್ವೀಟ್‌ನಲ್ಲಿ ವಂದೇ ಮಾತರಂ ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ

ಇದನ್ನೂ ಓದಿ | Independence day| ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ್‌, ಜೈ ಅನುಸಂಧಾನ್‌: ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಘೋಷ

Exit mobile version