Site icon Vistara News

Suresh Gopi: ನಟ ಸುರೇಶ್ ಗೋಪಿ ಪುತ್ರಿ ಮದುವೆಯಲ್ಲಿ ನರೇಂದ್ರ ಮೋದಿ!

PM Modi at Suresh Gopi daughter wedding

ಬೆಂಗಳೂರು: ನಟ ಮತ್ತು ರಾಜ್ಯಸಭಾ ಸಂಸದ, ಸುರೇಶ್ ಗೋಪಿ (Suresh Gopi) ಅವರ ಪುತ್ರಿ ಭಾಗ್ಯ (ಜನವರಿ 17)ರಂದು ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಉದ್ಯಮಿ ಶ್ರೇಯಸ್ ಮೋಹನ್ ಅವರನ್ನು ವಿವಾಹವಾದರು. ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದರು. ಈ ವೇಳೆ ಮಾಲಿವುಡ್‌ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್, ಜಯರಾಮ್ ಮತ್ತು ದಿಲೀಪ್ ಕೂಡ ಭಾಗಿಯಾಗಿದ್ದರು.

ಜನವರಿ 17 ರಂದು ಸುರೇಶ್ ಗೋಪಿ ಅವರ ಪುತ್ರಿ ಭಾಗ್ಯ ಸುರೇಶ್ ಅವರು ಉದ್ಯಮಿ ಶ್ರೇಯಸ್ ಮೋಹನ್ ಅವರನ್ನು ವಿವಾಹವಾದರು. ಮಲಯಾಳಂ ಚಿತ್ರರಂಗದ ದಿಗ್ಗಜರಾದ ಮಮ್ಮುಟ್ಟಿ, ಮೋಹನ್‌ಲಾಲ್‌, ಜಯರಾಮ್‌ ಮತ್ತು ದಿಲೀಪ್‌ ಕೂಡ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತ್ತು.

ಗುರುವಾಯೂರ್ ಶ್ರೀಕೃಷ್ಣ ದೇಗುಲದಲ್ಲಿ ನಡೆದ ವಿವಾಹಕ್ಕೆ ಬಿಜು ಮೆನನ್, ಪಾರ್ವತಿ, ಖುಷ್ಬೂ, ಶಾಜಿ ಕೈಲಾಸ್, ಹರಿಹರನ್, ರಚನಾ ನಾರಾಯಣನ್ ಕುಟ್ಟಿ, ಸರಯೂ ಮೊದಲಾದವರು ಆಗಮಿಸಿದ್ದರು. ಸುರೇಶ್ ಗೋಪಿ ಮಲಯಾಳಂ ಸಿನಿಮಾ ರಂಗ ಕಂಡ ಅತ್ಯಂತ ಪ್ರತಿಭಾವಂತ ನಟ. ಸಮಾಜಸೇವೆಯಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: Actor Yash: ಮೃತ ಅಭಿಮಾನಿಗಳಿಗೆ 5 ಲಕ್ಷ ರೂ. ಪರಿಹಾರ ಕೊಟ್ಟ ಯಶ್‌!

ರಾಮ ಮಂದಿರ ಪ್ರಾಣಪತ್ರಿಷ್ಠೆಗೆ ಮೋದಿ ಕಟ್ಟುನಿಟ್ಟಿನ ಜೀವನ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಸಿದ್ಧತೆಗಳು ಬಹುತೇಕ ಅಂತಿಮ ಹಂತದಲ್ಲಿವೆ. ಪ್ರಾಣ ಪ್ರತಿಷ್ಠಾ ಆಚರಣೆಗಳು ಮಂಗಳವಾರ (ಜನವರಿ 16) ಆರಂಭವಾಗಿದ್ದು. ಜನವರಿ 22ರವರೆಗೆ ಮುಂದುವರಿಯಲಿದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅನುಷ್ಠಾನ ಕೈಗೊಂಡಿದ್ದಾರೆ. ಅನುಷ್ಠಾನ ಕೈಗೊಂಡಿರುವ ವ್ಯಕ್ತಿ ಶಿಸ್ತುಬದ್ಧ ಜೀವನ ನಡೆಸಬೇಕು. ಅಂತೆಯೇ ನರೇಂದ್ರ ಮೋದಿಯೂ ಅತ್ಯಂತ ಕಠಿಣ ನಿಷ್ಠೆಯನ್ನು ಅನುಸರಿಸುತ್ತಿದ್ದಾರೆ.

ಪಿಎಂ ಮೋದಿ ಸ್ವತಃ ಆಚರಣೆಗಳ ಬಗ್ಗೆ ಟ್ರಸ್ಟ್ ನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅವರು 11 ದಿನಗಳಿಂದ ಉಪವಾಸ ಕೈಗೊಂಡಿದ್ದಾರೆ. ಕಠಿಣ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಮಾಹಿತಿ ಪ್ರಕಾರ ಪ್ರಧಾನಿ ಮೋದಿ ಹಾಸಿಗೆಯ ಮೇಲೆ ಮಲಗುವುದನ್ನು ನಿಲ್ಲಿಸಿದ್ದಾರೆ. ನೆಲದ ಮೇಲೆ ಬಟ್ಟೆ ಹಾಸಿಕೊಂಡು ನಿದ್ದೆ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಿದ್ದಾರೆ. ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದಾರೆ.

150 ವಿದ್ವಾಂಸರು ಭಾಗಿ

ರಾಮ ದೇವಾಲಯದ ಪ್ರತಿಷ್ಠಾಪನಾ ಸಮಾರಂಭದ ವೇಳೆ ಯಜ್ಞ ಹವನ ನಡೆಸಲಿದ್ದಾರೆ. ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಸುಮಾರು 150 ವಿದ್ವಾಂಸರು ಭಾಗವಹಿಸಲಿದ್ದಾರೆ. ಈ ಪ್ರಾರ್ಥನೆ ಇಂದು ಪ್ರಾರಂಭವಾಗುತ್ತದೆ ಮತ್ತು ಜನವರಿ 22 ರ ಸಂಜೆಯವರೆಗೆ ನಡೆಯಲಿದೆ. ಪ್ರಾಯಶ್ಚಿತ, ವಿಷ್ಣು ಪೂಜೆ, ಗೋದಾನ ವಿಗ್ರಹ ಮತ್ತಿತರ ಕಾರ್ಯಕ್ರಮಗಳೂ ನಡೆಯಲಿವ ಎಂದು ಹೇಳಿದರು.


Exit mobile version