Suresh Gopi: ನಟ ಸುರೇಶ್ ಗೋಪಿ ಪುತ್ರಿ ಮದುವೆಯಲ್ಲಿ ನರೇಂದ್ರ ಮೋದಿ! - Vistara News

South Cinema

Suresh Gopi: ನಟ ಸುರೇಶ್ ಗೋಪಿ ಪುತ್ರಿ ಮದುವೆಯಲ್ಲಿ ನರೇಂದ್ರ ಮೋದಿ!

Suresh Gopi: ಜನವರಿ 17 ರಂದು ಸುರೇಶ್ ಗೋಪಿ ಅವರ ಪುತ್ರಿ ಭಾಗ್ಯ ಸುರೇಶ್ ಅವರು ಉದ್ಯಮಿ ಶ್ರೇಯಸ್ ಮೋಹನ್ ಅವರನ್ನು ವಿವಾಹವಾದರು. ಮಲಯಾಳಂ ಚಿತ್ರರಂಗದ ದಿಗ್ಗಜರಾದ ಮಮ್ಮುಟ್ಟಿ, ಮೋಹನ್‌ಲಾಲ್‌, ಜಯರಾಮ್‌ ಮತ್ತು ದಿಲೀಪ್‌ ಕೂಡ ಭಾಗಿಯಾಗಿದ್ದರು.

VISTARANEWS.COM


on

PM Modi at Suresh Gopi daughter wedding
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ ಮತ್ತು ರಾಜ್ಯಸಭಾ ಸಂಸದ, ಸುರೇಶ್ ಗೋಪಿ (Suresh Gopi) ಅವರ ಪುತ್ರಿ ಭಾಗ್ಯ (ಜನವರಿ 17)ರಂದು ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಉದ್ಯಮಿ ಶ್ರೇಯಸ್ ಮೋಹನ್ ಅವರನ್ನು ವಿವಾಹವಾದರು. ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದರು. ಈ ವೇಳೆ ಮಾಲಿವುಡ್‌ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್, ಜಯರಾಮ್ ಮತ್ತು ದಿಲೀಪ್ ಕೂಡ ಭಾಗಿಯಾಗಿದ್ದರು.

ಜನವರಿ 17 ರಂದು ಸುರೇಶ್ ಗೋಪಿ ಅವರ ಪುತ್ರಿ ಭಾಗ್ಯ ಸುರೇಶ್ ಅವರು ಉದ್ಯಮಿ ಶ್ರೇಯಸ್ ಮೋಹನ್ ಅವರನ್ನು ವಿವಾಹವಾದರು. ಮಲಯಾಳಂ ಚಿತ್ರರಂಗದ ದಿಗ್ಗಜರಾದ ಮಮ್ಮುಟ್ಟಿ, ಮೋಹನ್‌ಲಾಲ್‌, ಜಯರಾಮ್‌ ಮತ್ತು ದಿಲೀಪ್‌ ಕೂಡ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತ್ತು.

ಗುರುವಾಯೂರ್ ಶ್ರೀಕೃಷ್ಣ ದೇಗುಲದಲ್ಲಿ ನಡೆದ ವಿವಾಹಕ್ಕೆ ಬಿಜು ಮೆನನ್, ಪಾರ್ವತಿ, ಖುಷ್ಬೂ, ಶಾಜಿ ಕೈಲಾಸ್, ಹರಿಹರನ್, ರಚನಾ ನಾರಾಯಣನ್ ಕುಟ್ಟಿ, ಸರಯೂ ಮೊದಲಾದವರು ಆಗಮಿಸಿದ್ದರು. ಸುರೇಶ್ ಗೋಪಿ ಮಲಯಾಳಂ ಸಿನಿಮಾ ರಂಗ ಕಂಡ ಅತ್ಯಂತ ಪ್ರತಿಭಾವಂತ ನಟ. ಸಮಾಜಸೇವೆಯಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: Actor Yash: ಮೃತ ಅಭಿಮಾನಿಗಳಿಗೆ 5 ಲಕ್ಷ ರೂ. ಪರಿಹಾರ ಕೊಟ್ಟ ಯಶ್‌!

ರಾಮ ಮಂದಿರ ಪ್ರಾಣಪತ್ರಿಷ್ಠೆಗೆ ಮೋದಿ ಕಟ್ಟುನಿಟ್ಟಿನ ಜೀವನ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಸಿದ್ಧತೆಗಳು ಬಹುತೇಕ ಅಂತಿಮ ಹಂತದಲ್ಲಿವೆ. ಪ್ರಾಣ ಪ್ರತಿಷ್ಠಾ ಆಚರಣೆಗಳು ಮಂಗಳವಾರ (ಜನವರಿ 16) ಆರಂಭವಾಗಿದ್ದು. ಜನವರಿ 22ರವರೆಗೆ ಮುಂದುವರಿಯಲಿದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅನುಷ್ಠಾನ ಕೈಗೊಂಡಿದ್ದಾರೆ. ಅನುಷ್ಠಾನ ಕೈಗೊಂಡಿರುವ ವ್ಯಕ್ತಿ ಶಿಸ್ತುಬದ್ಧ ಜೀವನ ನಡೆಸಬೇಕು. ಅಂತೆಯೇ ನರೇಂದ್ರ ಮೋದಿಯೂ ಅತ್ಯಂತ ಕಠಿಣ ನಿಷ್ಠೆಯನ್ನು ಅನುಸರಿಸುತ್ತಿದ್ದಾರೆ.

ಪಿಎಂ ಮೋದಿ ಸ್ವತಃ ಆಚರಣೆಗಳ ಬಗ್ಗೆ ಟ್ರಸ್ಟ್ ನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅವರು 11 ದಿನಗಳಿಂದ ಉಪವಾಸ ಕೈಗೊಂಡಿದ್ದಾರೆ. ಕಠಿಣ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಮಾಹಿತಿ ಪ್ರಕಾರ ಪ್ರಧಾನಿ ಮೋದಿ ಹಾಸಿಗೆಯ ಮೇಲೆ ಮಲಗುವುದನ್ನು ನಿಲ್ಲಿಸಿದ್ದಾರೆ. ನೆಲದ ಮೇಲೆ ಬಟ್ಟೆ ಹಾಸಿಕೊಂಡು ನಿದ್ದೆ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಿದ್ದಾರೆ. ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದಾರೆ.

150 ವಿದ್ವಾಂಸರು ಭಾಗಿ

ರಾಮ ದೇವಾಲಯದ ಪ್ರತಿಷ್ಠಾಪನಾ ಸಮಾರಂಭದ ವೇಳೆ ಯಜ್ಞ ಹವನ ನಡೆಸಲಿದ್ದಾರೆ. ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಸುಮಾರು 150 ವಿದ್ವಾಂಸರು ಭಾಗವಹಿಸಲಿದ್ದಾರೆ. ಈ ಪ್ರಾರ್ಥನೆ ಇಂದು ಪ್ರಾರಂಭವಾಗುತ್ತದೆ ಮತ್ತು ಜನವರಿ 22 ರ ಸಂಜೆಯವರೆಗೆ ನಡೆಯಲಿದೆ. ಪ್ರಾಯಶ್ಚಿತ, ವಿಷ್ಣು ಪೂಜೆ, ಗೋದಾನ ವಿಗ್ರಹ ಮತ್ತಿತರ ಕಾರ್ಯಕ್ರಮಗಳೂ ನಡೆಯಲಿವ ಎಂದು ಹೇಳಿದರು.


ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Ram Pothineni: ರಾಮ್ ಪೋತಿನೇನಿ ಅಭಿನಯದ ʻಡಬಲ್ ಇಸ್ಮಾರ್ಟ್ʼ ಬಿಡುಗಡೆಗೆ‌ ಮುಹೂರ್ತ ಫಿಕ್ಸ್!

Ram Pothineni: ಈ‌ ಮೊದಲ ಬಂದ ಈ ಚಿತ್ರದ ಮೊದಲ ಸರಣಿ ಸಿನಿಮಾ 2019 ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರ್ತಿದೆ.

VISTARANEWS.COM


on

Double iSmart to release on August 15
Koo

ಬೆಂಗಳೂರು: ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಟ ರಾಮ್ ಪೋತಿನೇನಿ (Ram Pothineni) ಕಾಂಬಿನೇಷನ್ ಮೇಲೆ ಸಿನಿಪ್ರಿಯರಿಗೆ ಭಾರಿ ನಿರೀಕ್ಷೆ ಇದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆಯೇ ‘ಡಬಲ್ ಇಸ್ಮಾರ್ಟ್’ ಚಿತ್ರದ ಟೀಸರ್​ ಮೂಡಿಬಂದಿದೆ. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಆಗಸ್ಟ್ 15ಕ್ಕೆ ಡಬಲ್ ಇಸ್ಮಾರ್ಟ್ ಚಿತ್ರ ತೆರೆಗೆ ಬರಲಿದೆ.

ಸೌತ್​ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್​ ಇಸ್ಮಾರ್ಟ್​’ ಚಿತ್ರದಲ್ಲೂ ವಿಲನ್​ ಆಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಕಾವ್ಯಾ ಥಾಪರ್ ನಟಿಸಿದ್ದಾರೆ.

ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್​ ಇಸ್ಮಾರ್ಟ್​’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಪುರಿ ಕನೆಕ್ಟ್ಸ್​’ ಬ್ಯಾನರ್ ಮೂಲಕ ಪುರಿ ಜಗನ್ನಾಥ್, ಚಾರ್ಮಿ ಕೌರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಈ‌ ಮೊದಲ ಬಂದ ಈ ಚಿತ್ರದ ಮೊದಲ ಸರಣಿ ಸಿನಿಮಾ 2019 ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರ್ತಿದೆ. ಟಾಲಿವುಡ್‌ನಲ್ಲಿ ಈಗಲೇ ಒಂದು ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ ಅಂತ ಹೇಳಬಹುದು.

ಇದನ್ನೂ ಓದಿ: Ram Pothineni: ಡೈನಾಮಿಕ್ ಸ್ಟಾರ್ ರಾಮ್‌ – ಸಂಜಯ್ ದತ್ ಭರ್ಜರಿ ಜುಗಲ್ಬಂದಿ: `ಡಬಲ್ ಇಸ್ಮಾರ್ಟ್‘ ಟೀಸರ್‌ ಔಟ್‌!

ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದು, ಸಂಜಯ್ ದತ್ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿ ಬರುತ್ತಿದೆ. ಮಣಿ ಶರ್ಮಾ ಸಂಗೀತ ಚಿತ್ರಕ್ಕಿದೆ. ಕ್ರೇಜಿ ಪ್ಯಾನ್ ಇಂಡಿಯನ್ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ ಬ್ಯಾನರ್ ನಡಿ ಪೂರಿ ಜಗನ್ನಾಥ್, ಚಾರ್ಮಿ ಕೌರ್ ನಿರ್ಮಾಣದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬರುತ್ತಿದೆ.

Continue Reading

ಸ್ಯಾಂಡಲ್ ವುಡ್

V Cinemas: ರಮೇಶ್ ಅರವಿಂದ್ – ಡಾಲಿ ಧನಂಜಯರಿಂದ ‘ವಿ ಸಿನಿಮಾಸ್’ ಮಲ್ಟಿಪ್ಲೆಕ್ಸ್ ಉದ್ಘಾಟನೆ

V Cinemas: ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ವಿತರಕ ಮಾರ್ಸ್ ಸುರೇಶ್ , ʻʻಅಜಿತ್ ಅವರು ರಾಮಮೂರ್ತಿ ನಗರದಲ್ಲಿ ಸುಸಜ್ಜಿತ ಚಿತ್ರಮಂದಿರವನ್ನು‌ ನಿರ್ಮಿಸಿದ್ದಾರೆ. ಈ ಚಿತ್ರಮಂದಿರ ನೋಡಿಕೊಳ್ಳುವ ಉಸ್ತುವಾರಿಯನ್ನು ನನಗೆ ನೀಡಿದ್ದಾರೆ. ನೂರರ ಆಸುಪಾಸಿ‌ನ ಆಸನದ ವ್ಯವಸ್ಥೆಯುಳ್ಳ ನಾಲ್ಕು ಆಡಿಗಳು ಇಲ್ಲಿದೆ. ಈಗಿನ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಯಾವುದೇ ಮೂಲೆಯಲ್ಲಿ ಕುಳಿತುಕೊಂಡು ನೋಡಿದರೂ, ಪರದೆಯಲ್ಲಿ ಸಿನಿಮಾ ಚೆನ್ನಾಗಿ ಕಾಣಬೇಕು ಆ ರೀತಿ ಆಸನದ ವ್ಯವಸ್ಥೆ ಮಾಡಲಾಗಿದೆ.

VISTARANEWS.COM


on

V Cinemas multiplex inauguration by dolly dhanjay Ramesh arvind
Koo

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇದೊಂದು ಉತ್ತಮ (V Cinemas) ಬೆಳವಣಿಗೆ ಎಂದರೆ ತಪ್ಪಾಗಲಾರದು. ಚಿತ್ರಮಂದಿರಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ನೂತನ ಚಿತ್ರಮಂದಿರ ಪ್ರಾರಂಭವಾಗಿರುವುದು ನಿಜಕ್ಕೂ ಖುಷಿಯ ವಿಚಾರ. ಹೌದು. ಇತ್ತೀಚಿಗೆ ಹೊಯ್ಸಳ ನಗರ, ರಾಮಮೂರ್ತಿ ನಗರದ ಮುಖ್ಯರಸ್ತೆಯಲ್ಲಿ “ವಿ ಸಿನಿಮಾಸ್” ಎಂಬ ನಾಲ್ಕು ಆಡಿಗಳ ಸುಸಜ್ಜಿತ ಮಲ್ಟಿಪ್ಲೆಕ್ಸ್ ಆರಂಭವಾಯಿತು.‌ ರಮೇಶ್ ಅರವಿಂದ್ ಚಿತ್ರಮಂದಿರವನ್ನು ಉದ್ಘಾಟಿಸಿ ಮೊದಲ ಶೋ ಗೆ ಟಿಕೇಟ್ ಪಡೆದರು. ಡಾಲಿ ಧನಂಜಯ ಪ್ರೊಜೆಕ್ಟರ್ ಚಾಲನೆ ಮಾಡಿದರು. ಹಿರಿಯ ವಿತರಕ ಮಾರ್ಸ್ ಸುರೇಶ್, ಮಾಲೀಕರಾದ ಅಜಿತ್ ಜಗದೀಶ್ ಹಾಗೂ ತಂತ್ರಜ್ಞ ಮ್ಯಾಥ್ಯೂ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ವಿತರಕ ಮಾರ್ಸ್ ಸುರೇಶ್ , ʻʻಅಜಿತ್ ಅವರು ರಾಮಮೂರ್ತಿ ನಗರದಲ್ಲಿ ಸುಸಜ್ಜಿತ ಚಿತ್ರಮಂದಿರವನ್ನು‌ ನಿರ್ಮಿಸಿದ್ದಾರೆ. ಈ ಚಿತ್ರಮಂದಿರ ನೋಡಿಕೊಳ್ಳುವ ಉಸ್ತುವಾರಿಯನ್ನು ನನಗೆ ನೀಡಿದ್ದಾರೆ. ನೂರರ ಆಸುಪಾಸಿ‌ನ ಆಸನದ ವ್ಯವಸ್ಥೆಯುಳ್ಳ ನಾಲ್ಕು ಆಡಿಗಳು ಇಲ್ಲಿದೆ. ಈಗಿನ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಯಾವುದೇ ಮೂಲೆಯಲ್ಲಿ ಕುಳಿತುಕೊಂಡು ನೋಡಿದರೂ, ಪರದೆಯಲ್ಲಿ ಸಿನಿಮಾ ಚೆನ್ನಾಗಿ ಕಾಣಬೇಕು ಆ ರೀತಿ ಆಸನದ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ದರ ಕೂಡ ಬೇರೆ ಮಲ್ಟಿಪ್ಲೆಕ್ಸ್ ಗಳಿಗಿಂತ ತುಂಬಾ ಕಡಿಮೆ ಇರುತ್ತದೆ. ಮೊದಲ ಪ್ರಾಧಾನ್ಯತೆ ಕನ್ನಡ ಚಿತ್ರಗಳಿಗಿರುತ್ತದೆ. ಇಂದು ಮೊದಲ ಚಿತ್ರವಾಗಿ ಡಾಲಿ ಧನಂಜಯ ಅಭಿನಯದ “ಕೋಟಿ” ಚಿತ್ರ ಪ್ರದರ್ಶನವಾಗಿದೆʼʼ ಎಂದರು.

ಇದನ್ನೂ ಓದಿ: Kannada New Movie: ರಾಜವರ್ಧನ್ ನಟನೆಯ ‘ಹಿರಣ್ಯ’ ಸಿನಿಮಾದ ಮೆಲೋಡಿ ಹಾಡು ರಿಲೀಸ್

ಇದನ್ನೂ ಓದಿ: Kannada New Movie: ರಾಜವರ್ಧನ್ ನಟನೆಯ ‘ಹಿರಣ್ಯ’ ಸಿನಿಮಾದ ಮೆಲೋಡಿ ಹಾಡು ರಿಲೀಸ್

ಏನೇ ಆಧುನಿಕ ತಂತ್ರಜ್ಞಾನ ಬಂದರೂ ಥಿಯೇಟರ್ ನಲ್ಲಿ ಸಾವಿರಾರು ಜನರ ಮಧ್ಯೆ ಕುಳಿತು ಸಿನಿಮಾ ನೋಡುವ ಅನುಭವವೇ ಬೇರೆ. ಎಲ್ಲರೂ ಚಿತ್ರಮಂದಿರಗಳಲ್ಲೇ ಚಿತ್ರ ನೋಡಿ. ಚಿತ್ರಮಂದಿರ ಪ್ರಾರಂಭ ಮಾಡಿರುವ ಮಾಲೀಕರಿಗೆ ಹಾಗೂ ಮಾರ್ಸ್ ಸುರೇಶ್ ಅವರಿಗೆ ಅಭಿನಂದನೆಗಳು ಎಂದರು ರಮೇಶ್ ಅರವಿಂದ್.

ಚಿತ್ರಮಂದಿರಲ್ಲಿ ಸಿನಿಮಾ ನೋಡುವ ಖುಷಿ ಮನೆಯಲ್ಲಿ ನೋಡಿದರೆ ಬರುವುದಿಲ್ಲ.. ಎಲ್ಲರೂ ಚಿತ್ರಮಂದಿರಗಳಲ್ಲೇ ಚಿತ್ರವನ್ನು ನೋಡಿ ಆನಂದಿಸಿದಾಗ, ನಮ್ಮಂತಹ ನಟರಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಎಲ್ಲರೂ ಚಿತ್ರಮಂದಿರಗಳಲ್ಲೇ ಚಿತ್ರಗಳನ್ನು ನೋಡಿ ಎಂದು ತಿಳಿಸಿದ ಡಾಲಿ ಧನಂಜಯ, “ವಿ ಸಿನಿಮಾಸ್” ಗೆ ಶುಭ ಹಾರೈಸಿದರು.

Continue Reading

ಸ್ಯಾಂಡಲ್ ವುಡ್

Darshan Arrested: ಬಡ್ಡಿ ಕಟ್ಟದವರಿಗೆ ‘ನರಕ’ ಆಗಿತ್ತೇ ಈ ಶೆಡ್? ಇಲ್ಲಿ ನಡೆದಿವೆಯೇ ಇನ್ನಷ್ಟು ಕೊಲೆಗಳು?

Darshan Arrested: ಪಟ್ಟಣಗೆರೆ ವಿನಯ್ ಶೆಡ್‌ನಲ್ಲಿ ಇಂದು ಕೂಡ ಪೊಲೀಸರು ಮಾಹಿತಿಕಲೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆನ್ನಲೆ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾಹಿತಿ ಪ್ರಕಾರ ದರ್ಶನ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಅದೇಷ್ಟೋ ಜನರಿಗೆ ಈ ಶೆಡ್‌ನಲ್ಲಿಯೇ ಚಿತ್ರಹಿಂಸೆ ನೀಡಲಾಗಿತ್ತು ಎನ್ನಲಾಗಿದೆ. ಇಂದಿನಿಂದ ಮತ್ತೊಂದು ಹಂತದ ತನಿಖೆಗೆ ಮುಂದಾಗಿದ್ದಾರೆ ಪೊಲೀಸರು. ಎವಿಡೆನ್ಸ್‌ಗಳನ್ನು ಮುಂದಿಟ್ಟುಕೊಂಡು ವಿಚಾರಣೆ ಪೊಲೀಸರು ನಡೆಸುತ್ತಿದ್ದಾರೆ . ಆರೋಪಿಗಳ ಬಳಿ ಇದ್ದ ಹತ್ತು ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

VISTARANEWS.COM


on

Darshan Arrested renuka shed like hell more murders here
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿರುವ ನಟ ದರ್ಶನ್‌ (Actor Darshan) ಹಾಗೂ ಆತನ ಗ್ಯಾಂಗ್‌ನ ಹಲವು ಆರೋಪಿಗಳನ್ನು ನ್ಯಾಯಾಲಯವು ಮತ್ತೆ ಐದು ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ (Police Custody) ನೀಡಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ‌ ಮಾಡಿದ ಶೆಡ್ ಮೇಲೆ ಕೂಡ ನೂರೆಂಟು ಅನುಮಾನ ಹುಟ್ಟಿಕೊಂಡಿದ್ದು, ರೇಣುಕಾಸ್ವಾಮಿ ಕೊಲೆ ಮಾಡಿದ ಶೆಡ್ ಇಂದು ಕೂಡಾ ಪೊಲೀಸ್ ವಶಕ್ಕೆ ಇರಲಿದೆ.

ಪಟ್ಟಣಗೆರೆ ವಿನಯ್ ಶೆಡ್‌ನಲ್ಲಿ ಇಂದು ಕೂಡ ಪೊಲೀಸರು ಮಾಹಿತಿಕಲೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆನ್ನಲೆ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾಹಿತಿ ಪ್ರಕಾರ ದರ್ಶನ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಅದೇಷ್ಟೋ ಜನರಿಗೆ ಈ ಶೆಡ್‌ನಲ್ಲಿಯೇ ಚಿತ್ರಹಿಂಸೆ ನೀಡಲಾಗಿತ್ತು ಎನ್ನಲಾಗಿದೆ. ದರ್ಶನ್ ವಿರುದ್ಧ ಮಾತನಾಡಿದವರಿಗೆ ಇದೇ ಶೆಡ್ ನಲ್ಲಿ ಕರೆತಂದು ʻಡಿ ಗ್ಯಾಂಗ್ʼ ಹೊಡೆಯುತ್ತಿದ್ದರು ಎನ್ನಲಾಗಿದೆ. ಬಡ್ಡಿ ದುಡ್ಡು ಕಟ್ಟದ, ಲೋನ್ ಪಾವತಿ ಮಾಡದವರಿಗೆ ಕೂಡ ಇದೇ ಶೆಡ್‌ನಲ್ಲಿ ʻಡಿ ಗ್ಯಾಂಗ್ʼ ನರಕ ತೋರಿಸುತ್ತಿತ್ತು ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಬೆನ್ನಲೆ ಮತ್ತಷ್ಟು ಕೇಸ್‌ಗಳು ರಿವೀಲ್‌ ಆಗಬಹುದು ಎನ್ನಲಾಗಿದೆ. ಪೊಲೀಸರು ವಶಪಡಿಸಿಕೊಂಡ ಸಿಸಿ ಕ್ಯಾಮರೆ ದೃಶ್ಯಗಳ ಪರಿಶೀಲನೆ ಆಗುತ್ತಿದೆ. ಆರೋಪಿ ವಿನಯ್ ಸೇರಿದಂತೆ ಇತರೆ ಆರೋಪಿಗಳನ್ನು ಮತಷ್ಟು ತೀವ್ರವಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಮಾದರಿಯಲ್ಲಿಯೇ ಹಲವು ಜನರಿಗೆ ಗ್ಯಾಂಗ್‌ ಚಿತ್ರಹಿಂಸೆ ನೀಡಿತ್ತಾ ಎಂಬುದುರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಪೊಲೀಸರು.

ಇದನ್ನೂ ಓದಿ: Darshan Arrested: `ಅಪ್ಪ, ನೀವೇ ನನ್ನ ಹೀರೊʼಎಂದ ದರ್ಶನ್‌ ಪುತ್ರ; ಫಾದರ್ಸ್‌ ಡೇಗೆ ಭಾವುಕ ಪೋಸ್ಟ್‌!

ಇಂದಿನಿಂದ ಮತ್ತೊಂದು ಹಂತದ ತನಿಖೆಗೆ ಮುಂದಾಗಿದ್ದಾರೆ ಪೊಲೀಸರು. ಎವಿಡೆನ್ಸ್‌ಗಳನ್ನು ಮುಂದಿಟ್ಟುಕೊಂಡು ವಿಚಾರಣೆ ಪೊಲೀಸರು ನಡೆಸುತ್ತಿದ್ದಾರೆ . ಆರೋಪಿಗಳ ಬಳಿ ಇದ್ದ ಹತ್ತು ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮೊಬೈಲ್‌ನಲ್ಲಿ ಕೆಲ ಸ್ಫೋಟಕ ವಿಚಾರಗಳು ಪತ್ತೆಯಾಗಿವೆ. ವೆಪನ್ ಗಳು, 30 ಲಕ್ಷ ರೂ. ಹಣ, ಕಾರುಗಳು ಸೇರಿ ಹಲವು ವಸ್ತುಗಳು ಜಪ್ತಿಯಾಗಿವೆ. ಈಗಾಗಲೇ ಆರೋಪಿಗಳನ್ನು ವಿಚಾರಣೆ ಮಾಡಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಪ್ರಶ್ನೆಗಳ ಸುರಿಮಳೆ

ಶರಣಾಗಿರುವ ಆರೋಪಿಗಳನ್ನು ಡ್ರಿಲ್‌ ಮಾಡುತ್ತಿರುವ ಪೊಲೀಸರು, ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಪ್ರಕರಣದ ಸಂಬಂಧ ನೀವೇನಾದರೂ ಹಣ ಪಡೆದಿದ್ರಾ? ನಿಮ್ಮನ್ನು ಸಂಪರ್ಕಿಸಿದವರು ಯಾರು? ಯಾರ ಮಾತನ್ನು ನೀವು ಕೇಳಿ ನೀವು ಪ್ರಕರಣದಲ್ಲಿ ಭಾಗಿಯಾದಿರಿ? ದರ್ಶನ ಜತೆ ನೀವೇನಾದರೂ ನೇರವಾಗಿ ಸಂಪರ್ಕದಲ್ಲಿ ಇದ್ರಾ? ಆರೋಪಿ ರಘು ನಿಮ್ಮನ್ನು ಭೇಟಿಯಾಗಿ ಹೇಳಿದ್ದೇನು? ಶೆಡ್‌ ಒಳಗೆ ಯಾರೆಲ್ಲ ಹೋದರು? ನೀವೂ ಹೋಗಿದ್ರಾ ಎಂಬುದು ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.

Continue Reading

ಸ್ಯಾಂಡಲ್ ವುಡ್

Darshan Arrested: `ಅಪ್ಪ, ನೀವೇ ನನ್ನ ಹೀರೊʼಎಂದ ದರ್ಶನ್‌ ಪುತ್ರ; ಫಾದರ್ಸ್‌ ಡೇಗೆ ಭಾವುಕ ಪೋಸ್ಟ್‌!

Darshan Arrested: ತಂದೆ ಜತೆಗಿನ ಒಂದಷ್ಟು ಫೋಟೊಗಳನ್ನು ಕೊಲಾಜ್ ಮಾಡಿ ಹಾಕಿಕೊಂಡಿದ್ದಾನೆ. 15 ವರ್ಷ ವಯಸ್ಸಿನ ವಿನೀಶ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾನೆ. ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ತಂದೆಗೆ ವಿನೀಶ್ ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರುವಂತಾಗಿದೆ.ಗೆಳತಿ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ರೇಣುಕಾಚಾರ್ಯ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan), ಪವಿತ್ರಾ ಗೌಡ ಸೇರಿ ಹಲವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

VISTARANEWS.COM


on

Darshan Arrested vinish write special message for darshan fathers day
Koo

ಬೆಂಗಳೂರು: ತಂದೆ – ತಾಯಿ ಪ್ರತಿಯೊಬ್ಬರ ಜೀವನದಲ್ಲಿ ಬಹಳ ಅಮೂಲ್ಯವಾದವರು. ಅವರಲ್ಲಿ ನಾವು ಯಾರನ್ನೇ ಕಳೆದುಕೊಂಡರೂ (Darshan Arrested) ಆಘಾತದ ಸಿಡಿಲು ಬಡಿಯುವುದಂತೂ ಖಂಡಿತ. ಹಾಗಾಗಿ ತಂದೆ ತಾಯಿಯ ಋಣ, ಪ್ರೀತಿ, ಮಮತೆ ಯಾವತ್ತೂ ಮರೆಯಲಾಗದು.  ಇವತ್ತು(ಜೂನ್ 16) ವಿಶ್ವ ತಂದೆಯಂದಿರ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದರ್ಶನ್ ಪುತ್ರ ವಿನೀಶ್ ಸೋಶಿಯಲ್ ಮೀಡಿಯಾದಲ್ಲಿ ತಂದೆಯಂದಿರ ದಿನದ ಶುಭ ಕೋರಿದ್ದಾನೆ. ದರ್ಶನ್‌ಗೆ ಒಬ್ಬನೇ ಮಗ ವಿನೀಶ್.”ಹ್ಯಾಪಿ ಫಾದರ್ಸ್ ಡೇ ಅಪ್ಪ. ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ತಿದ್ದೀನಿ. ಐ ಲವ್ ಯು. ಯಾವಾಗಲೂ ನೀವೇ ನನ್ನ ಹೀರೊ” ಎಂದು ವಿನೀಶ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾನೆ.

ತಂದೆ ಜತೆಗಿನ ಒಂದಷ್ಟು ಫೋಟೊಗಳನ್ನು ಕೊಲಾಜ್ ಮಾಡಿ ಹಾಕಿಕೊಂಡಿದ್ದಾನೆ. 15 ವರ್ಷ ವಯಸ್ಸಿನ ವಿನೀಶ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾನೆ. ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ತಂದೆಗೆ ವಿನೀಶ್ ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರುವಂತಾಗಿದೆ.

ಅಪ್ಪನನ್ನು ಬೈದಿದ್ದಕ್ಕೆ ಥ್ಯಾಂಕ್ಸ್‌ ಎಂದಿದ್ದ ದರ್ಶನ್‌ ಪುತ್ರ ವಿನೀಶ್

ಗೆಳತಿ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ರೇಣುಕಾಚಾರ್ಯ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan), ಪವಿತ್ರಾ ಗೌಡ ಸೇರಿ ಹಲವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಟನ ವಿರುದ್ಧ ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆಯೇ, ದರ್ಶನ್‌ ಪುತ್ರ ವಿನೀಶ್‌ ತೂಗುದೀಪ (Vineesh Thoogudeepa) ಭಾವನಾತ್ಮಕ ಪೋಸ್ಟ್‌ ಮಾಡಿದ್ದ.

ಇದನ್ನೂ ಓದಿ: Darshan Arrested : ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಬೀಗರೂಟವೇ? ಶಾಮಿಯಾನ ಹಾಕಿದ ಪೊಲೀಸರ ನಡೆ ಫುಲ್ ಟ್ರೋಲ್​!

“ನನ್ನ ತಂದೆಯ ಬಗ್ಗೆ ಕೆಟ್ಟ ಕಮೆಂಟ್‌ಗಳನ್ನು ಮಾಡಿ, ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. ನಾನು 15 ವರ್ಷದ ಬಾಲಕ, ನನಗೂ ಭಾವನೆಗಳಿವೆ ಎಂಬುದನ್ನು ನೀವು ಪರಿಗಣಿಸಲೇ ಇಲ್ಲ. ಇಂತಹ ಕೆಟ್ಟ ಸಮಯದಲ್ಲಿ ನನ್ನ ತಾಯಿ ಹಾಗೂ ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. ನೀವು ನನಗೆ ಶಾಪ ಹಾಕುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ” ಎಂದು ತಂದೆಯ ಬಂಧನ, ಜನರ ಆಕ್ರೋಶ, ಕೆಟ್ಟ ಕಮೆಂಟ್‌ಗಳ ಬಗ್ಗೆ ವಿನೀಶ್‌ ತೂಗುದೀಪ ಬೇಸರದ ಪೋಸ್ಟ್‌ ಮಾಡಿದ್ದ.

ಮೈಸೂರಲ್ಲಿ ಕೂತು ಕೇಸ್‌ ಮುಚ್ಚಿಹಾಕಲು ದರ್ಶನ್‌ ಯತ್ನ

ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣಕ್ಕೆ ಸಂಬಂಧಿಸಿಂದತೆ ಬಗೆದಷ್ಟೂ ಮಾಹಿತಿ ಬಹಿರಂಗವಾಗುತ್ತಿದೆ. ದರ್ಶನ್‌ ಹಾಗೂ ಗ್ಯಾಂಗ್‌ನನ್ನು ಮತ್ತೆ 5 ದಿನ ಕಸ್ಟಡಿಗೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಭಾನುವಾರ ಮೈಸೂರಿನಲ್ಲಿ (Mysore) ಸ್ಥಳ ಮಹಜರು ನಡೆಸಲಿದ್ದಾರೆ.

ಡೆವಿಲ್‌ ಸಿನಿಮಾದ ಚಿತ್ರೀಕರಣದ ಹಿನ್ನೆಲೆಯಲ್ಲಿ ದರ್ಶನ್‌ ಮೈಸೂರಿನಲ್ಲಿಯೇ ಬೀಡುಬಿಟ್ಟಿದ್ದರು. ರೇಣುಕಾಸ್ವಾಮಿ ಕೊಲೆಯ ಬಳಿಕವೂ ಮೈಸೂರಿಗೆ ತೆರಳಿದ ದರ್ಶನ್‌, ಅಲ್ಲಿಂದಲೇ ಗಣ್ಯರು ಹಾಗೂ ಆಪ್ತರಿಗೆ ಕರೆ ಮಾಡಿ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ನಟ, ಜಿಮ್‌ನಲ್ಲಿ ವರ್ಕೌಟ್‌ ಮಾಡುವ ಮೂಲಕ ಏನೂ ನಡೆದೇ ಇಲ್ಲ ಎಂಬಂತೆ ತೋರಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಇದೆಲ್ಲದರ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ.

ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ರ‍್ಯಾಡಿಷನ್‌ ಹೋಟೆಲ್‌, ಕುವೆಂಪು ನಗರದ ಗೋಲ್ಡ್‌ ಜಿಮ್‌ ಸೇರಿದಂತೆ ಪೊಲೀಸರು ಹಲವು ಸ್ಥಳಗಳನ್ನು ಮಹಜರು ಮಾಡಲಿದ್ದಾರೆ. ನಟ ದರ್ಶನ್‌ ಸೇರಿ ಹಲವು ಆರೋಪಿಗಳನ್ನು ಕರೆದುಕೊಂಡು ಹೋಗಿ ಮಹಜರು ಮಾಡಲಿದ್ದಾರೆ. ಮೈಸೂರಿನಲ್ಲಿ ದರ್ಶನ್‌ ಯಾರಿಗೆ ಕರೆ ಮಾಡಿದ್ದರು? ಯಾರ ಮೂಲಕ ಪ್ರಭಾವ ಬೀರಲು ಪ್ರಯತ್ನಿಸಿದರು ಎಂಬುದು ಸೇರಿ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Continue Reading
Advertisement
Auto Launches
ಆಟೋಮೊಬೈಲ್16 seconds ago

Auto Launches: ಸ್ಕೋಡಾ ಕುಶಾಕ್‌, ಬಿಎಂಡಬ್ಲ್ಯು ಆರ್ 1300 ಸೇರಿ ಇನ್ನೂ ಹಲವು ವಾಹನ ಈ ವಾರ ಮಾರುಕಟ್ಟೆಗೆ!

Irregular Periods problem Here are some simple home remedies
ಆರೋಗ್ಯ16 mins ago

Irregular Periods: ಏರುಪೇರಾದ ಋತುಚಕ್ರದ ಸಮಸ್ಯೆಯೇ? ಇಲ್ಲಿವೆ ಸರಳ ಮನೆಮದ್ದುಗಳು!

Drowned in river
ಕ್ರೈಂ34 mins ago

Drowned: ಈಜಲು ಹೋಗಿ ಬಾಲಕರು ನೀರುಪಾಲು; ಕಮಲ ಕೊಯ್ಯಲು ಹೋಗಿ ಕೆಸರಿನಲ್ಲಿ ವ್ಯಕ್ತಿ ಸಮಾಧಿ

Himanta Biswa Sarma
ದೇಶ48 mins ago

ಅಸ್ಸಾಂನಲ್ಲಿ ʼವಿಐಪಿ ಸಂಸ್ಕೃತಿʼಗೆ ಬ್ರೇಕ್‌ ಹಾಕಲು ಮುಂದಾದ ಸಿಎಂ ಹಿಮಂತ ಬಿಸ್ವಾ; ತಮ್ಮ ವಿದ್ಯುತ್‌ ಬಿಲ್‌ ತಾವೇ ಪಾವತಿಸುವುದಾಗಿ ಘೋಷಣೆ

Actor Darshan Renukaswamy Send His Photos To Pavitra Gowda
ಕ್ರೈಂ1 hour ago

Actor Darshan: ಹತ್ಯೆಯಾದ ರೇಣುಕಾಸ್ವಾಮಿ ಮೊಬೈಲ್‌ ಹೋಯಿತೆಲ್ಲಿ?

bakrid 2024
ಧಾರ್ಮಿಕ2 hours ago

Bakrid 2024: ತ್ಯಾಗ, ಬಲಿದಾನವನ್ನು ಸ್ಮರಿಸುವ ಈದುಲ್ ಅಝ್ಹಾ

Karnataka weather Forecast
ಮಳೆ2 hours ago

Karnataka weather : ಇಂದು ಕರಾವಳಿ, ಮಲೆನಾಡಿನಲ್ಲಿ ಹಗುರ, ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ

Dina Bhavishya
ಭವಿಷ್ಯ4 hours ago

Dina Bhavishya : ಗೌಪ್ಯ ವಿಷಯವನ್ನು ಹಂಚಿಕೊಂಡರೆ ಈ ರಾಶಿಯವರಿಗೆ ಅಪಾಯ ಗ್ಯಾರಂಟಿ!

World War 3
ಪ್ರಮುಖ ಸುದ್ದಿ10 hours ago

World War 3: ಜೂನ್ 18ರಿಂದ 3ನೇ ಮಹಾಯುದ್ಧ ಶುರು; ಖ್ಯಾತ ಜ್ಯೋತಿಷಿಯ ಭವಿಷ್ಯವಾಣಿ ಸಂಚಲನ

Cholera outbreak
ಕರ್ನಾಟಕ12 hours ago

Cholera outbreak: ಕಲುಷಿತ ನೀರು ಸೇವನೆ; ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ವ್ಯಕ್ತಿಗೆ ಕಾಲರಾ ದೃಢ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ14 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ15 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ20 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌