ಗಾಂಧಿನಗರ: ಗುಜರಾತ್‌ನ ಗಾಂಧಿನಗರದಲ್ಲಿ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಕೆಲ ಕಾಲ ವಿದ್ಯಾರ್ಥಿಗಳ ಜತೆ ಬೆಂಚ್ ಮೇಲೆ ಕುಳಿತ ಪಾಠವನ್ನೂ ಆಲಿಸಿದರು. ರಾಜ್ಯ ಸರ್ಕಾರವು ಮಕ್ಕಳಿಗೆ ಗುಣಮಟ್ಟದ ಹಾಗೂ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಲು ೧೦ ಸಾವಿರ ಕೋಟಿ ರೂ. ವ್ಯಯಿಸಿ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ರೂಪಿಸಿದೆ. ಇದಕ್ಕೆ ಮೋದಿ ಚಾಲನೆ ನೀಡಿದ್ದಾರೆ.
ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವುದರಿಂದ ಮೋದಿ ವಿದ್ಯಾರ್ಥಿಗಳ ಪಕ್ಕದಲ್ಲಿಯೇ ಕುಳಿತು ಪಾಠ ಕೇಳಿದರು. ಹಾಗೆಯೇ, ಮಕ್ಕಳು ಹೇಗೆ ತಂತ್ರಜ್ಞಾನ ಬಳಸುತ್ತಾರೆ, ಅವರ ಕಲಿಕಾ ಸಾಮರ್ಥ್ಯ ಹೇಗಿದೆ ಎಂ ಬುದು ಸೇರಿ ಹಲವು ವಿಷಯಗಳನ್ನು ಪರಿಶೀಲಿಸಿದರು.
ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, “ದೇಶದಲ್ಲಿ ೫ಜಿ ತಂತ್ರಜ್ಞಾನವು ಶಿಕ್ಷಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ. ಇಂಟರ್‌ನೆಟ್ ಸೌಲಭ್ಯದಿಂದಾಗಿ ಮಕ್ಕಳು ಗುಣಮಟ್ಟದ ಹಾಗೂ ತಂತ್ರಜ್ಞಾನ ಆಧಾರಿತ ಶಿಕ್ಷಣ ಪಡೆಯಲಿದ್ದಾರೆ” ಎಂದು ಹೇಳಿದರು. ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಅಡಿಯಲ್ಲಿ ಸ್ಮಾರ್ಟ್ ಕ್ಲಾಸ್‌ರೂಮ್ ನಿರ್ಮಿಸಿ ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಲಾಗುತ್ತದೆ. ಕಂಪ್ಯೂಟರ್ ಕಲಿಕೆ ಸೇರಿ ಪ್ರಾಯೋಗಿಕ ಶಿಕ್ಷಣಕ್ಕೂ ಆದ್ಯತೆ ನೀಡಲಾಗುತ್ತದೆ.
ಇದನ್ನೂ ಓದಿ | Narendra Modi | ಇಂಗ್ಲಿಷ್ ಮಾಧ್ಯಮ ಅಷ್ಟೆ, ಅದು ಬೌದ್ಧಿಕ ಸಾಮರ್ಥ್ಯದ ಅಳತೆಗೋಲು ಅಲ್ಲ ಎಂದ ಮೋದಿ