ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದೇಶಾದ್ಯಂತ ಬಿಜೆಪಿಯು ಹಲವು ಸೇವಾ ಕಾರ್ಯಕ್ರಮಗಳ ಮೂಲಕ ಮೋದಿ ಜನ್ಮದಿನವನ್ನು ಆಚರಿಸುತ್ತಿದೆ. ಮಕ್ಕಳು, ಕಲಾವಿದರು ಕೂಡ ಪ್ರಧಾನಿ ಜನ್ಮದಿನ ಆಚರಿಸಿದ್ದಾರೆ. ಇದರ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ, ಕೇಂದ್ರ ಸಚಿವ ಅಮಿತ್ ಶಾ ಸೇರಿ ಹಲವು ಗಣ್ಯರು ಪ್ರಧಾನಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
“ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ನಾಯಕತ್ವ ಹಾಗೂ ದೂರದೃಷ್ಟಿಯಿಂದ ದೇಶವು ಇನ್ನಷ್ಟು ಅಭಿವೃದ್ಧಿ ಹೊಂದಲಿ. ಅಭಿವೃದ್ಧಿಯ ಅಮೃತಕಾಲ ತಲುಪಲಿ. ನಿಮ್ಮ ನಾಯಕತ್ವದಲ್ಲಿ ದೇಶದ ಜನರಿಗೆ ಮತ್ತಷ್ಟು ಮಗದಷ್ಟು ಒಳಿತಾಗಲಿ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
भारत के प्रधानमंत्री श्री @narendramodi जी को जन्मदिन की हार्दिक बधाई और शुभकामनाएं। मेरी शुभेच्छा है कि अपनी दूरगामी दृष्टि तथा सुदृढ़ नेतृत्व से आप ‘अमृत काल’ में भारत के समग्र विकास का मार्ग प्रशस्त करें। मेरी ईश्वर से प्रार्थना है कि आप सदा स्वस्थ और सानंद रहें तथा देशवासियों…
— President of India (@rashtrapatibhvn) September 17, 2023
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಎಕ್ಸ್ ಪೋಸ್ಟ್ ಮೂಲಕ ಮೋದಿ ಅವರಿಗೆ ಶುಭ ಕೋರಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಕಾಮನೆಗಳು. ಉತ್ತಮ ಆರೋಗ್ಯ, ಆಯಸ್ಸು ನಿಮ್ಮದಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, “ಪಿಎಂ ಮೋದಿ ಅವರಿಗೆ ಜನ್ಮದಿನದ ಶುಭಾಶಯ” ಎಂದು ಪೋಸ್ಟ್ ಮಾಡಿದ್ದಾರೆ.
My best wishes to PM Shri Narendra Modi ji on his birthday. May he be blessed with good health and long life. @narendramodi
— Mallikarjun Kharge (@kharge) September 17, 2023
ನಾಯಕತ್ವ ಬಣ್ಣಿಸಿದ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸುವ ಜತೆಗೆ ಅವರ ನಾಯಕತ್ವವನ್ನು ಬಣ್ಣಿಸಿದ್ದಾರೆ. “ನಾಯಕತ್ವ, ಸೂಕ್ಷ್ಮದರ್ಶಿತ್ವ ಹಾಗೂ ಪರಿಶ್ರಮದ ವಿರಳ ಸಮ್ಮಿಳಿತವೇ ನರೇಂದ್ರ ಮೋದಿ. ಇವರು ದೇಶದ ಅಭಿವೃದ್ಧಿಯ ದಿಸೆ, ಲೆಕ್ಕಾಚಾರ, ದೃಷ್ಟಿಕೋನವನ್ನೇ ಬದಲಾಯಿಸಿದ್ದಾರೆ” ಎಂದು ಅಮಿತ್ ಶಾ ಪೋಸ್ಟ್ ಮಾಡಿದ್ದಾರೆ.
मोदी जी में नेतृत्व, संवेदनशीलता और परिश्रम का दुर्लभ संयोजन देखने को मिलता है।@narendramodi जी ने देश के सोचने के स्केल और साइज को बदला है, जिससे चाहे कोरोना की वैक्सीन बनाना हो या चंद्रयान-3 की सफलता, आज हमारा तिरंगा पूरे विश्व में शान से लहरा रहा है।#HappyBdayModiji
— Amit Shah (@AmitShah) September 17, 2023
ಇದನ್ನೂ ಓದಿ: PM Modi Birthday: 73ರಲ್ಲೂ 23ರ ರಣೋತ್ಸಾಹ; ಇಲ್ಲಿದೆ ಮೋದಿ ಆರೋಗ್ಯದ ಗುಟ್ಟು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶುಭಾಶಯ ತಿಳಿಸುವ ಜತೆಗೆ ಮೋದಿ ಅವರನ್ನು “ಜಗತ್ತಿನ ಜನಪ್ರಿಯ ನಾಯಕ” ಎಂದಿದ್ದಾರೆ. ಹಾಗೆಯೇ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಮಾಜಿ ಕ್ರಿಕೆಟಿಗ ದನೀಶ್ ಕನೇರಿಯಾ, ಭಾರತದ ಕ್ರಿಕೆಟಿಗ ಚೇತೇಶ್ವರ ಪೂಜಾರ ಸೇರಿ ಎಲ್ಲ ಕ್ಷೇತ್ರಗಳ ಗಣ್ಯರು ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.