ನವ ದೆಹಲಿ: ಈ ಸಲ ಗಣರಾಜ್ಯೋತ್ಸವದಿನದಂದು ಹಲವಾರು ಪ್ರಥಮಗಳ ಸಾಧನೆಯನ್ನು (Mann Ki Baat) ದಾಖಲಿಸಲಾಯಿತು. ಕರ್ತವ್ಯಪಥದಲ್ಲಿ ಸಿಆರ್‌ಪಿಎಫ್‌ನ ಒಂಟೆಗಳ ತುಕಡಿಯನ್ನು ಮಹಿಳಾ ಅಧಿಕಾರಿಗಳು ವಹಿಸಿದ್ದರು. ಈ ಸಲದ ಪದ್ಮ ಪ್ರಶಸ್ತಿಯನ್ನು ನಾನಾ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಗಣ್ಯರಿಗೆ ನೀಡಲಾಗಿದೆ. ತಳ ಸಮುದಾಯದಲ್ಲಿ ಸಮಾಜದ ಅಭಿವೃದ್ಧಿಗೆ, ಕಲೆ, ಸಂಸ್ಕೃತಿಗೆ ಕೊಡುಗೆ ಸಲ್ಲಿಸಿದವರಿಗೆ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಮಾಜ ಸುಧಾರಣೆಗೆ ಯತ್ನಿಸಿದವರಿಗೂ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೆಚ್ಚಿನ ಮನ್ ಕಿ ಬಾತ್‌ನಲ್ಲಿ ಹೇಳಿದರು.
ಪಾರಂಪರಿಕ ವಾದ್ಯಗಳಲ್ಲಿ ಅಗಾಧ ಸಾಧನೆ ಮಾಡಿದ ಮುನಿ ವೆಂಕಟಪ್ಪ ಸೇರಿದಂತೆ ಗಣ್ಯರನ್ನು ಪದ್ಮ ಪ್ರಶಸ್ತಿ ಮೂಲಕ ಗೌರವಿಸಲಾಗುತ್ತಿದೆ. ಈ ಮೂಲಕ ದೇಶದ ಜನತೆ ಅಭಿಮಾನಪಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ತಮಟೆ ವಾದಕ ಮುನಿ ವೆಂಕಟಪ್ಪ (72) ಅವರಿಗೆ ಪದ್ಮಶ್ರೀ ಒಲಿದಿದೆ.
ಈ ಸಲ ಗಣರಾಜ್ಯೋತ್ಸವದಿನದಂದು ಹಲವಾರು ಪ್ರಥಮಗಳ ಸಾಧನೆಯನ್ನು ದಾಖಲಿಸಲಾಯಿತು. ಕರ್ತವ್ಯಪಥದಲ್ಲಿ ಸಿಆರ್‌ಪಿಎಫ್‌ನ ಒಂಟೆಗಳ ತುಕಡಿಯನ್ನು ಮಹಿಳಾ ಅಧಿಕಾರಿಗಳು ವಹಿಸಿದ್ದರು ಎಂದು ಸ್ಮರಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ಮೊದಲ ಹಾಗೂ 97ನೇ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮವನ್ನು ಇಂದು ನಡೆಸಿದರು. ಬೀದರ್‌ನ ಹುಲಸೂರು ಮಹಿಳಾ ರೈತರ ಉತ್ಪಾದಕ ಸಂಸ್ಥೆಯು ಕಿರು ಧಾನ್ಯಗಳ ಮಾರಾಟದಲ್ಲಿ ಮಾಡಿರುವ ಸಾಧನೆಯನ್ನು ಪ್ರಧಾನಿ ಬಣ್ಣಿಸಿದರು.