Site icon Vistara News

Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿಯೇ ಮುಖ್ಯ ‘ಯಜಮಾನ’

PM Modi is main yajman to ram temple pran pratishta event

ವಾರಾಣಸಿ: ಜನವರಿ 22ರಂದು ನಡೆಯುವ ರಾಮ ಮಂದಿರದಲ್ಲಿ (Ram Mandir) ರಾಮ ಲಲ್ಲಾ (Ram Lalla) ಪ್ರಾಣ ಪ್ರತಿಷ್ಠಾಪನೆಗೆ (Pran Pratishta) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೇ ಪ್ರಧಾನ ಯಜಮಾನರಾಗಿರುತ್ತಾರೆ (Main Yajman) ಎಂದು ಕಾಶಿಯ ಹಿರಿಯ ವೈದಿಕ ಕರ್ಮಕಾಂಡ ವಿದ್ವಾಂಸ, ಪಂಡಿತ ಲಕ್ಷ್ಮೀಕಾಂತ್ ಮಥುರಾನಾಥ ದೀಕ್ಷಿತ್ ಅವರು ಹೇಳಿದ್ದಾರೆ. ಇವರು ರಾಮಲಲ್ಲಾ ವಿಗ್ರಹವನ್ನು ಪ್ರಾಣ ಪ್ರತಿಷ್ಠಾಪನೆಯ ವೈದಿಕ ವಿದ್ವಾಂಸರು ಮತ್ತು ಪುರೋಹಿತರ ತಂಡವನ್ನು ಮುನ್ನಡೆಸುತ್ತಿದ್ದಾರೆ.

ದೀಕ್ಷಿತ್ ಅವರು ‘ಪ್ರಾಣ ಪ್ರತಿಷ್ಠಾಪನೆ’ಯ ಪ್ರಧಾನ ಆಚಾರ್ಯರಾಗಿದ್ದಾರೆ. ಕಾಶಿ ವಿದ್ವಾಂಸ ಮತ್ತು ಪುರೋಹಿತ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು 121 ಆಚಾರ್ಯರ ತಂಡದೊಂದಿಗೆ ನಡೆಸುವ ವಿಧಿವಿಧಾನಗಳ ಮೇಲ್ವಿಚಾರಣೆ ಮತ್ತು ಸಮನ್ವಯತೆಯನ್ನು ನೋಡಿಕೊಳ್ಳಲಿದ್ದಾರೆ.

ಮಂಗಳವಾರದಿಂದ ಆರಂಭವಾದ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಪ್ರಧಾನಮಂತ್ರಿ ಅವರು ಲಭ್ಯವಾಗುವುದಿಲ್ಲ. ಹಾಗಾಗಿ, ಲಕ್ಷ್ಮೀಕಾಂತ್ ಮಥುರಾನಾಥ ದೀಕ್ಷಿತ್ ಅವರು ಯಜಮಾನನಂತೆ ಇತರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ.

86 ವಯಸ್ಸಿನ ದೀಕ್ಷಿತ್ ಅವರು ಮಂಗಳವಾರ ತಮ್ಮ ನಿವಾಸದಿಂದ ಹೊರಬರುತ್ತಿದ್ದಂತೆ ಅವರ ಮೇಲೆ ಜನರು ಪುಷ್ಪವೃಷ್ಟಿ ಮಾಡಿದರು. ಗೋಲ್ಘರ್ ತಲುಪುವವರೆಗೂ ಜನರು ಅವರ ಮೇಲೆ ಹೂವು ಸುರಿದರು. ನಗರ ದಕ್ಷಿಣದ ಬಿಜೆಪಿ ಶಾಸಕ ನೀಲಕಂಠ ತಿವಾರಿ ನೂರಾರು ಜನರೊಂದಿಗೆ ‘ಹರ್ ಹರ್ ಮಹಾದೇವ್’ ಮತ್ತು ‘ಜೈ ಶ್ರೀ ರಾಮ್’ ಘೋಷಣೆಗಳು ಕೂಗುತ್ತಾ ಮತ್ತು ಶಂಖ ಊದುವ ನಡುವೆ ಅವರನ್ನು ಬೀಳ್ಕೊಟ್ಟರು.

ಅಯೋಧ್ಯೆಯ ದೇವಸ್ಥಾನದಲ್ಲಿ ಪವಿತ್ರೀಕರಣದ ಮೊದಲು ಧಾರ್ಮಿಕ ಕ್ರಿಯೆಗಳು ಪ್ರಾರಂಭವಾಗಿದ್ದವು ಮತ್ತು ‘ಜಲಯಾತ್ರೆ’ ಪ್ರಗತಿಯಲ್ಲಿದೆ. ನಾನು ವೇದ ವಿದ್ವಾಂಸರು ಮತ್ತು ಕರ್ಮಕಾಂಡಿಗಳ (ಆಚರಣಾ ಪುರೋಹಿತರ) ತಂಡವನ್ನು ಸೇರುತ್ತೇನೆ ಮತ್ತು ‘ಯಜಮಾನ್ ಪ್ರಾಯಶ್ಚಿತ್’ ವಿಧಿ ಬುಧವಾರ ನಡೆಯಲಿದೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ: Ram Mandir: ದೇವರನ್ನು ಆಟಿಕೆ ಎನ್ನುವ ಕಾಂಗ್ರೆಸ್‌ಗೆ ಈ ಹೇಳಿಕೆ ಅವನತಿಯ ಅಡಿಗಲ್ಲು: ಆರ್‌. ಅಶೋಕ್‌

Exit mobile version