Site icon Vistara News

Naatu Naatu Song: ದಕ್ಷಿಣ ಕೊರಿಯಾ ರಾಯಭಾರಿ ಕಚೇರಿ ಸಿಬ್ಬಂದಿಯ ‘ನಾಟು ನಾಟು’ ಡ್ಯಾನ್ಸ್​ಗೆ ಪ್ರಧಾನಿ ಮೋದಿ ಶ್ಲಾಘನೆ

PM Modi laud Naatu Naatu Dance of South Korean embassy staff

#image_title

ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಸಿನಿಮಾದ ‘ನಾಟು..ನಾಟು’ ಹಾಡು ಸಿಕ್ಕಾಪಟೆ ಫೇಮಸ್ ಆಗಿದೆ. ಈಗಾಗಲೇ ಆಸ್ಕರ್​ ಪ್ರಶಸ್ತಿಗೂ ನಾಮ ನಿರ್ದೇಶನಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಖತ್​ ಫೇಮಸ್​ ಹಾಗಿರುವ ನಾಟು..ನಾಟು ಹಾಡಿಗೆ ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರಿ ಕಚೇರಿ ಸಿಬ್ಬಂದಿ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೊವನ್ನು Korea Embassy India ಟ್ವಿಟರ್​ ಅಕೌಂಟ್​ನಲ್ಲಿ ಶೇರ್ ಕೂಡ ಮಾಡಿಕೊಂಡಿದ್ದರು. ಈ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್​ ಖಾತೆಯಲ್ಲಿ ರೀಶೇರ್​ ಮಾಡಿಕೊಂಡಿದ್ದಾರೆ. ಕೊರಿಯನ್ ರಾಯಭಾರಿ ಕಚೇರಿ ಸಿಬ್ಬಂದಿಯ ಉತ್ಸಾಹ ಮತ್ತು ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಸಿನಿಮಾದಲ್ಲಿ ನಟರಾದ ರಾಮ್​ಚರಣ್​ ಮತ್ತು ಜ್ಯೂನಿಯರ್ ಎನ್​ಟಿಆರ್ ಈ ಹಾಡಿಗೆ ಹಾಕಿದ ಸ್ಟೆಪ್​ನಂತೆಯೇ ದಕ್ಷಿಣ ಕೊರಿಯಾ ರಾಯಭಾರಿ ಕಚೇರಿ ಸಿಬ್ಬಂದಿ ಡ್ಯಾನ್ಸ್ ಮಾಡಿದ್ದು, ಅದನ್ನು ನೋಡಿದ್ದ ನೆಟ್ಟಿಗರು ಹೊಗಳಿದ್ದರು. ಅನೇಕರು ರೀಟ್ವೀಟ್ ಮಾಡಿಕೊಂಡಿದ್ದರು. ಆ ವಿಡಿಯೊ ಪ್ರಧಾನಿ ನರೇಂದ್ರ ಮೋದಿಯವರ ಗಮನವನ್ನೂ ಸೆಳೆದಿದ್ದು ವಿಶೇಷವಾಗಿದೆ.

ಇದನ್ನೂ ಓದಿ: Naatu Naatu Song: ದಕ್ಷಿಣ ಕೊರಿಯಾದ ರಾಯಭಾರ ಕಚೇರಿ ಸಿಬ್ಬಂದಿಯಿಂದ ‘ನಾಟು ನಾಟು’ ಸಖತ್‌ ಸ್ಟೆಪ್ಸ್‌: ವಿಡಿಯೊ ವೈರಲ್‌!

Exit mobile version