ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ (Mann Ki Baat) ರೇಡಿಯೊ ಕಾರ್ಯಕ್ರಮದ 100ನೇ ಆವೃತ್ತಿ (Mann Ki Baat 100)ಇಂದು ಬೆಳಗ್ಗೆ 11ಗಂಟೆಗೆ ಪ್ರಸಾರಗೊಂಡಿದೆ. 2014ರಿಂದಲೂ ಪ್ರಧಾನಿ ಮೋದಿಯವರು ತಪ್ಪದೆ ನಡೆಸಿಕೊಂಡು ಬರುತ್ತಿರುವ ಮನ್ ಕೀ ಬಾತ್ ಇಂದಿನ ಸಂಚಿಕೆ ಶತಕ ಪೂರೈಸಿದೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿಕೊಟ್ಟ ಮನ್ ಕೀ ಬಾತ್ನ ವಿಶೇಷ ಸಂಚಿಕೆಯಲ್ಲಿ ಏನೆಲ್ಲ ವಿಷಯಗಳನ್ನು ಮಾತನಾಡಿದ್ದಾರೆ ಎಂಬ ಬಗ್ಗೆ ಸಮಗ್ರ ಮಾಹಿತಿ (Mann Ki Baat Live Updates) ಇಲ್ಲಿದೆ.
ಮಣಿಪುರದಲ್ಲಿ ಬಿಜಯಶಾಂತಿ ಎಂಬ ಯುವತಿ ತಮ್ಮ ಗ್ರಾಮದಲ್ಲಿ ಕಮಲದ ನೂಲಿನಲ್ಲಿ ಜವಳಿ ಉತ್ಪನ್ನ ತಯಾರಿಸುವ ಘಟಕವನ್ನು ನಡೆಸುತ್ತಿದ್ದಾರೆ. ಅವರ ಜತೆಗೆ ಪ್ರಧಾನಿ ಮೋದಿ ಮಾತನಾಡಿ ಹುರಿದುಂಬಿಸಿದರು.
ಜಮ್ಮ ಕಾಶ್ಮೀರದ ಮಂಜೂರ್ ಅಹ್ಮದ್ ಅವರ ಜತೆಗೆ ಮನ್ ಕೀ ಬಾತ್‌ನಲ್ಲಿ ಮಾತನಾಡಿದ ಮೋದಿ. ಕಾಶ್ಮೀರದಲ್ಲಿ ಪೆನ್ಸಿಲ್ ಕಾರ್ಖಾನೆಯನ್ನು ಸ್ಥಾಪಿಸಿ ನೂರಾರು ಮಂದಿಗೆ ಮಂಜೂರ್ ಅವರು ಉದ್ಯೋಗ ನೀಡಿದ್ದಾರೆ.
ಹರಿಯಾಣದ ಸಾಮಾಜಿಕ ಹೋರಾಟಗಾರ, ಬಾಲಕಿಯರ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಸುನಿಲ್ ಜಗನ್ ಅವರ ಜತೆ ಪ್ರಧಾನಿ ಮಾತುಕತೆ. ಮಗಳ ಯೋಗ ಕ್ಷೇಮ ವಿಚಾರಿಸಿದ ಮೋದಿ.
ಮನ್ ಕಿ ಬಾತ್ ನನಗೆ ಒಂದು ವ್ರತ, ಪೂಜೆ ಆಗಿದೆ. ಜನತೆ ಈಶ್ವರನ ಪೂಜೆ ಮಾಡುವಂತೆ ನನಗೆ ಈಶ್ವರ ರೂಪಿ ಜನರ ಜತೆ ಮಾತನಾಡಲು ಇದರಿಂದ ಸಾಧ್ಯವಾಗಿದೆ.
ಮನ್ ಕಿ ಬಾತ್‌ನಿಂದ ಜನತೆಯ ಜತೆಗೆ ನಿಕಟ ಸಂವಹನ ನಡೆಸಲು ನನಗೆ ಸಾಧ್ಯವಾಗಿದೆ. 2014ರಲ್ಲಿ ದಿಲ್ಲಿಗೆ ಬಂದ ಬಳಿಕ ನನ್ನ ಕಾರ್ಯಚಟುವಟಿಕೆಗಳು ಅಗಾಧವಾಗಿ ಬದಲಾಗಿತ್ತು. ಅಂಥ ಸಂದರ್ಭದಲ್ಲಿ ಜನ ಸಾಮಾನ್ಯರೊಡನೆ ಬೆರೆಯಲು, ಭಾವನೆಗಳನ್ನು ಹಂಚಲು ಮನ್ ಕಿ ಬಾತ್ ಮೂಲಕ ಸಾಧ್ಯವಾಯಿತು.