ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ (Mann Ki Baat) ರೇಡಿಯೊ ಕಾರ್ಯಕ್ರಮದ 100ನೇ ಆವೃತ್ತಿ (Mann Ki Baat 100)ಇಂದು ಬೆಳಗ್ಗೆ 11ಗಂಟೆಗೆ ಪ್ರಸಾರಗೊಂಡಿದೆ. 2014ರಿಂದಲೂ ಪ್ರಧಾನಿ ಮೋದಿಯವರು ತಪ್ಪದೆ ನಡೆಸಿಕೊಂಡು ಬರುತ್ತಿರುವ ಮನ್ ಕೀ ಬಾತ್ ಇಂದಿನ ಸಂಚಿಕೆ ಶತಕ ಪೂರೈಸಿದೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿಕೊಟ್ಟ ಮನ್ ಕೀ ಬಾತ್‌ನ ವಿಶೇಷ ಸಂಚಿಕೆಯಲ್ಲಿ ಏನೆಲ್ಲ ವಿಷಯಗಳನ್ನು ಮಾತನಾಡಿದ್ದಾರೆ ಎಂಬ ಬಗ್ಗೆ ಸಮಗ್ರ ಮಾಹಿತಿ (Mann Ki Baat Live Updates) ಇಲ್ಲಿದೆ.
ನಿಮ್ಮ ಪತ್ರಗಳನ್ನು ಕಂಡಾಗ ನಾನು ಭಾವುಕನಾಗಿದ್ದೇನೆ. ಮನ್ ಕಿ ಬಾತ್ ಕೋಟ್ಯಂತರ ಭಾರತೀಯರ ಮನದಾಳದ ಭಾವನೆಗಳ ಅಭಿವ್ಯಕ್ತಿಯಾಗಿದೆ. ಭಾರತೀಯರ ಸಕಾರಾತ್ಮಕ ಭಾವನೆಗಳ ದ್ಯೋತಕ ಇದಾಗಿದೆ ಎಂದ ಪ್ರಧಾನಿ ಮೋದಿ
ಮನ್ ಕಿ ಬಾತ್‌ನ ಮೊದಲ ಸಂಚಿಕೆ 2014ರ ಅಕ್ಟೋಬರ್ 3ರಂದು ಪ್ರಸಾರವಾಗಿತ್ತು. ಬೆಳಗ್ಗೆ 11 ಗಂಟೆಗೆ ಈ ಬಾನುಲಿ ಕಾರ್ಯಕ್ರಮವನ್ನು ಆಲಿಸುವಂತೆ ಜನತೆಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ಎಲ್ಲೆಲ್ಲಿ ಪ್ರಸಾರವಾಗಲಿದೆ
ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ನೆಟ್ವರ್ಕ್ನ ಎಲ್ಲ ಚಾನೆಲ್ಗಳೂ ಪ್ರಸಾರ ಮಾಡುತ್ತವೆ. ಅಷ್ಟೇ ಅಲ್ಲದೆ ಆಲ್ ಇಂಡಿಯಾ ರೇಡಿಯೋದ ವೆಬ್ಸೈಟ್, ನ್ಯೂಸ್ ಆನ್ ಏರ್ ಮೊಬೈಲ್ ಆ್ಯಪ್ (NewsonAir) ಮೂಲಕವೂ ನೀವು ಮನ್ ಕೀ ಬಾತ್ ಆಲಿಸಬಹುದು. ಎಐಆರ್ ನ್ಯೂಸ್, ಡಿಡಿ ನ್ಯೂಸ್, ಪ್ರಧಾನಿ ಕಾರ್ಯಾಲಯ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ಗಳಲ್ಲಿ ಮನ್ ಕೀ ಬಾತ್ ಪ್ರಸಾರಗೊಳ್ಳಲಿದೆ. ಖಾಸಗಿ ರೇಡಿಯೊ ಸ್ಟೇಶನ್ಗಳೂ ಸೇರಿ ಒಟ್ಟು 1000 ರೇಡಿಯೋ ಸ್ಟೇಶನ್ಗಳಿಂದ ಮನ್ ಕೀ ಬಾತ್ ಪ್ರಸಾರವಾಗಲಿದೆ.
ವಿಶೇಷ ಪಯಣ
ಮನ್ ಕೀ ಬಾತ್ 100ನೇ ಆವೃತ್ತಿ ಪ್ರಸಾರಕ್ಕೂ ಮೊದಲು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್ ಎಂಬುದು ನಿಜವಾಗಿಯೂ ಒಂದು ವಿಶೇಷವಾದ ಪಯಣ. ಮನ್ ಕೀ ಬಾತ್ ಮೂಲಕ ನಾವು ಭಾರತದ ಜನರ ಸಾಮೂಹಿಕ ಉತ್ಸಾಹವನ್ನು ಮತ್ತು ಅದೆಷ್ಟೋ ಜನ ಜೀವನವನ್ನು ನಾವಿಲ್ಲಿ ಆಚರಿಸಿದ್ದೇವೆ ಎಂದು ಹೇಳಿದ್ದಾರೆ.
Do tune in at 11 AM for #MannKiBaat100. This has been a truly special journey, in which we have celebrated the collective spirit of the people of India and highlighted inspiring life journeys. pic.twitter.com/FL0vCy9P15
— Narendra Modi (@narendramodi) April 30, 2023