Site icon Vistara News

Ram Mandir : ರಾಮ ಮಂದಿರ ನಿರ್ಮಾಣ ಕಾರ್ಮಿಕರಿಗೆ ಪುಷ್ಪವೃಷ್ಟಿ ಮಾಡಿದ ಪ್ರಧಾನಿ ಮೋದಿ

Narendra

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ನಿರ್ಮಾಣ ತಂಡದ ಭಾಗವಾಗಿದ್ದ ಕಾರ್ಮಿಕರ ಮೇಲೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪುಷ್ಪ ವೃಷ್ಟಿ ಮಾಡಿದರು. ಆ ಬಳಿಕ ಅವರು ರಾಮ ಮಂದಿರದ ಆವರಣದಲ್ಲಿರುವ ಜಟಾಯು ವಿಗ್ರಹದ ಮೇಲೆ ಪ್ರಧಾನಿ ಹೂವುಗಳನ್ನು ಸಿಂಪಡಿಸಿದರು ಮತ್ತು ಅಯೋಧ್ಯೆ ಧಾಮದಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಯೋಧ್ಯೆಯ ರಾಮ ದೇವಾಲಯದ ಆವರಣದಲ್ಲಿರುವ ಕುಬೇರ ತಿಲಾಕ್ಕೆ ಭೇಟಿ ನೀಡಿ ಅಲ್ಲಿ ಶಿವನಿಗೆ ಪೂಜೆ ಸಲ್ಲಿಸಿದರು.

ಪ್ರಧಾನಿ ‘ಜಲಾಭಿಷೇಕ’ ಮಾಡಿದರು ಮತ್ತು ದೇವಾಲಯದ ಪ್ರದಕ್ಷಿಣೆ ಮಾಡಿದರು. ರಾಮ ಜನ್ಮಭೂಮಿ ಸಂಕೀರ್ಣದಲ್ಲಿರುವ ಕುಬೇರ ತಿಲಾ ಮೇಲಿರುವ ಪ್ರಾಚೀನ ಶಿವ ದೇವಾಲಯವನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನವೀಕರಿಸುತ್ತಿದೆ.

ಮಂದಿರ ಉದ್ಘಾಟಿಸಿ ಪ್ರಧಾನಿ ಮೋದಿ ಹೇಳಿದ ಮರೆಯಲಾಗದ ಮಾತುಗಳಿವು

ಅಯೋಧ್ಯೆ: ಹನ್ನೊಂದು ದಿನಗಳ ಕಠಿಣ ವ್ರತ ಪಾಲನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ರಾಮ್‌ ಲಲ್ಲಾ ನ ಪ್ರಾಣ ಪ್ರತಿಷ್ಠಾಪನೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದ್ದಾರೆ. ಆ ಬಳಿಕ ಅವರು ಮಾಡಿರುವ ಭಾಷಣ ದೇಶವಾಸಿಗಳ ಗಮನ ಸೆಳೆದಿದೆ. ಅದರ ಮುಖ್ಯಾಂಶ ಇಲ್ಲಿದೆ.
ರಾಮ್‌ ಲಲ್ಲಾ ಇನ್ನು ಮುಂದೆ ಟೆಂಟ್‌ನಲ್ಲಲ್ಲ, ದಿವ್ಯ ಮಂದಿರದಲ್ಲಿರುತ್ತಾನೆ.
ಜನವರಿ 22ರ ಈ ದಿನ ಸೂರ್ಯ ಹೊಸ ಭರವಸೆಯೊಂದಿಗೆ ಉದಯಿಸಿದ್ದಾನೆ.

ಇದನ್ನೂ ಓದಿ : Ram Mandir: ನಿಮ್ಮ ಚಿಂತನೆ ಮರುಪರಿಶೀಲಿಸಿ; ಮಂದಿರ ವಿರೋಧಿಗಳಿಗೆ ಮೋದಿ ಆಹ್ವಾನ

ಈ ದಿನ ಕ್ಯಾಲೆಂಡರ್‌ನ ಕೇವಲ ತಾರೀಖಲ್ಲ, ಹೊಸ ಕಾಲ ಚಕ್ರದ ಆರಂಭ.
ರಾಮ ಮಂದಿರ ಮರು ನಿರ್ಮಾಣವು ಗುಲಾಮಿ ಮಾನಸಿಕತೆಯಿಂದ ದೇಶ ಹೊರ ಬಂದಿರುವುದರ ಸಂಕೇತವೂ ಹೌದು.
ಸಾವಿರ ವರ್ಷಗಳ ಬಳಿಕವೂ ಇಂದಿನ ಈ ದಿನ, ಈ ಕ್ಷಣದ ಬಗ್ಗೆ ದೇಶದ ನಾಗರಿಕರು ಹೆಮ್ಮೆಯಿಂದ ಹೇಳಿಕೊಳ್ಳಲಿದ್ದಾರೆ.
ರಾಮನ ಜತೆ ಪವನ ಪುತ್ರ ಹನುಮಾನ್‌ ಇರಲೇಬೇಕು. ಆತನಿಗೆ ನಮಿಸುತ್ತೇನೆ. ಜಾನಕಿ, ಲಕ್ಷ್ಮಣ, ಭರತ, ಶತೃಘ್ನರನ್ನೂ ನೆನೆಯುತ್ತೇನೆ.
ಇದು ಕೇವಲ ಮಂದಿರ ಉದ್ಘಾಟನೆಯಲ್ಲ, ದೈವೀ ಅನುಭವ.
ಶತಮಾನಗಳ ಬಳಿಕ ಇಡೀ ದೇಶ ಈಗ ಹರ್ಷದಿಂದ ಕೂಡಿದೆ. ಆಪತ್ತಿನ ಅಂತ್ಯದ ಸೂಚಕ ಇದು.
ರಾಮ ಆ ಕಾಲದಲ್ಲಿ 14 ವರ್ಷ ವನವಾಸ ಅನುಭವಿಸಿದ. ಆದರೆ ರಾಮ್‌ಲಲ್ಲಾ ದಿವ್ಯ ಮಂದಿರಕ್ಕೆ ಮರಳಲು 500 ವರ್ಷಗಳು ಬೇಕಾದವು.
ಮಂದಿರ ಮರು ನಿರ್ಮಾಣಕ್ಕಾಗಿ 500 ವರ್ಷ ತೆಗೆದುಕೊಂಡಿದ್ದಕ್ಕೆ ನಾನು ಭಗವಾನ್‌ ಶ್ರೀರಾಮನಲ್ಲಿ ಕ್ಷಮೆ ಕೋರುತ್ತೇನೆ.
ತಡವಾಗಿಯಾದರೂ ನಾವೀಗ ನ್ಯಾಯಬದ್ಧವಾಗಿಯೇ ಮಂದಿರ ನಿರ್ಮಿಸಿದ್ದೇವೆ.
11 ದಿನಗಳ ವ್ರತದ ನಡುವೆ ನಾನು ಸಾಗರದಿಂದ (ರಾಮೇಶ್ವರಂ) ಸರಯೂ ನದಿಯತನಕ ಪಯಣಿಸಿದ್ದೇನೆ. ಎಲ್ಲಿ ನೋಡಿದರಲ್ಲಿ ರಾಮೋತ್ಸವದ ಛಾಯೆ ಕಂಡಿದ್ದೇನೆ.
ಭಾರತದ ಕಣಕಣದಲ್ಲಿ, ಭಾರತೀಯರ ಮನಮನದಲ್ಲಿ ರಾಮ ಇದ್ದಾನೆ.
ರಾಮ ಮಂದಿರ ಕಟ್ಟಿದರೆ ಬೆಂಕಿ ಬೀಳುತ್ತದೆ ಎಂದು ಕೆಲವರು ಹುಯಿಲೆಬ್ಬಿಸಿದರು. ಆದರೆ ಇವರು ಜನರ ಭಾವನೆ ಅರ್ಥ ಮಾಡಿಕೊಳ್ಳಲೇ ಇಲ್ಲ.

Exit mobile version