ನವ ದೆಹಲಿ: ನೂತನ ಸಂಸತ್ ಭವನದ (New Parliament Building) ಸ್ಪೀಕರ್ ಕುರ್ಚಿ ಬಳಿ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಸೆಂಗೋಲ್ ಪ್ರತಿಷ್ಠಾಪನೆ ಮಾಡಿದರು. ಹವನ ನಡೆದ ಸ್ಥಳದಲ್ಲಿ ರಾಜದಂಡಕ್ಕೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ ಅವರು, ಅಲ್ಲಿಂದ ಸಂಸತ್ ಭವನದ ಒಳಗಿನ ಸ್ಪೀಕರ್ ಕುರ್ಚಿಯವರೆಗೂ ರಾಜದಂಡವನ್ನು ಹಿಡಿದುಬಂದರು. ಅವರು ಕೈಮುಗಿದುಕೊಂಡೇ ಬಂದಿದ್ದಾರೆ. ಅವರ ಮುಗಿದ ಕೈಗಳ ಮಧ್ಯೆ ರಾಜದಂಡ ಇತ್ತು.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಮಿಳುನಾಡಿನ ಅಧೀನಂ ಮಠಗಳ ಸಂತರು, ಪುರೋಹಿತರು, ಲೋಕಸಭಾ ಸ್ಪೀಕರ್ ಓಂಬಿರ್ಲಾ ಹೆಜ್ಜೆ ಹಾಕಿದರು. ರಾಜದಂಡವನ್ನು ಸ್ಪೀಕರ್ ಕುರ್ಚಿ ಪಕ್ಕವೇ ಇಟ್ಟ ಪ್ರಧಾನಿ ಮೋದಿ, ಬಳಿಕ ಅಲ್ಲೊಂದು ದೀಪ ಹೊತ್ತಿಸಿದರು. ನಂತರ ಸೆಂಗೋಲ್ಗೆ ಹೂವು ಹಾಕಿ, ಮತ್ತೆ ನಮಿಸಿದರು. ಸ್ಪೀಕರ್ ಕುರ್ಚಿಯ ಬಳಿಯಿಂದ ಮೆಟ್ಟಿಲಿಳಿದು ಬಂದವರು, ಎಲ್ಲ ಸಾಧು-ಸಂತರು, ಮಠಾಧೀಶರುಗಳಿಗೆ ನಮಿಸುತ್ತ ನಡೆದರು. ಈ ಎಲ್ಲ ಸಮಯದಲ್ಲಿ ತಮಿಳಿನ ಮಂತ್ರ-ಭಜನೆ ಮೊಳಗುತ್ತಿತ್ತು.
#WATCH | PM Modi installs the historic 'Sengol' near the Lok Sabha Speaker's chair in the new Parliament building pic.twitter.com/Tx8aOEMpYv
— ANI (@ANI) May 28, 2023
#WATCH | PM Modi carries the historic 'Sengol' into the Lok Sabha chamber of the new Parliament building pic.twitter.com/wY206r8CUC
— ANI (@ANI) May 28, 2023