ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉತ್ತರ ಪ್ರದೇಶದ ವಾರಾಣಸಿಯ ವಿಶ್ವ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಾಲಯದಲ್ಲಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.
#WATCH | Uttar Pradesh: Prime Minister Narendra Modi offers prayer at Kashi Vishwanath temple in Varanasi.
— ANI (@ANI) March 9, 2024
Uttar Pradesh Chief Minister Yogi Adityanath also present here. pic.twitter.com/NFyIqCtUrg
ಪ್ರಧಾನಿ ಮೋದಿ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ವಾರಣಾಸಿಗೆ ತಲುಪಿದರು. ಪ್ರಧಾನಿ ಮೋದಿ 28 ಕಿ.ಮೀ ಉದ್ದದ ರೋಡ್ ಶೋ ನಡೆಸಿದರು. ವಿಮಾನ ನಿಲ್ದಾಣದ ಹೊರಗಿನಿಂದ ಅವರು ಸಾಗಿದ ರಸ್ತೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ಸಾಲುಗಟ್ಟಿ ನಿಂತು ಸ್ವಾಗತ ಕೋರಿದರು.
ರೋಡ್ ಶೋ ನಡೆಯುವ ಮಾರ್ಗದಲ್ಲಿ ಪ್ರಧಾನಿ ಮೋದಿ ಗಿಲಾತ್ ಬಜಾರ್ ಮತ್ತು ಕಬೀರ್ ಚೌರಾದಲ್ಲಿರುವ ಅತುಲಾನಂದ್ ಶಾಲೆಗೆ ಭೇಟಿ ನೀಡಿದರು ಎಂದು ಬಿಜೆಪಿ ಪ್ರಾದೇಶಿಕ ಮುಖ್ಯಸ್ಥ ದಿಲೀಪ್ ಪಟೇಲ್ ತಿಳಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಅವರು ವಾರಣಾಸಿಗೆ ಭೇಟಿ ನೀಡಿದ್ದಾರೆ. 2024 ರ ಚುನಾವಣೆಯಲ್ಲಿ ವಾರಣಾಸಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಲು ಪ್ರಧಾನಿ ಸಜ್ಜಾಗಿದ್ದಾರೆ.
ಪ್ರಧಾನಿ ಮೋದಿ 2014ರಿಂದ ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಲಿದ್ದಾರೆ. 2014 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಪ್ರಧಾನಿ ಮೋದಿ ಈ ಕ್ಷೇತ್ರದಿಂದ ಭರ್ಜರಿ ವಿಜಯಗಳನ್ನು ಗಳಿಸಿದ್ದರು. ಅದಕ್ಕಿಂತ ಹಿಂದಿನ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರ ಗೆಲುವಿನ ಅಂತರವನ್ನು ಮೀರಿಸಿದ್ದರು.
ಇದನ್ನೂ ಓದಿ : Narendra Modi: ಆನೆ ನಡೆದಿದ್ದೇ ದಾರಿ, ಅದರ ಮೇಲೆ ಮೋದಿ ಸಫಾರಿ; ಇಲ್ಲಿವೆ ಫೋಟೊಗಳು
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಕ್ಷೇತ್ರದಲ್ಲಿ ಶೇ.56.37ರಷ್ಟು ಮತಗಳನ್ನು ಪಡೆದಿದ್ದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು 45.2 ಪ್ರತಿಶತದಷ್ಟು ಅಂತರದಿಂದ ಗೆದ್ದರು.
ಮೋದಿ ವಾಸ್ತವ್ಯ
ವಾರಣಸಿಯ ಬಿಎಲ್ ಡಬ್ಲ್ಯೂ ಅತಿಥಿ ಗೃಹದಲ್ಲಿ ಪ್ರಧಾನಿ ರಾತ್ರಿ ತಂಗಲಿದ್ದಾರೆ ಎಂದು ಪಟೇಲ್ ಹೇಳಿದ್ದಾರೆ. ಭೇಟಿಯ ಎರಡನೇ ದಿನವಾದ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬರೇಕಾ ಹೆಲಿಪ್ಯಾಡ್ನಿಂದ ಅಜಂಗಢಕ್ಕೆ ತೆರಳಲಿದ್ದಾರೆ.
ಮಾರ್ಚ್ 10 ರಂದು ಮಧ್ಯಾಹ್ನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಅಲ್ಲಿ ಅವರು ಉತ್ತರ ಪ್ರದೇಶದಲ್ಲಿ 42,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಹಾಗೂ ಶಂಕು ಸ್ಥಾಪನೆ ಮಾಡಲಿದ್ದಾರೆ. ಮಧ್ಯಾಹ್ನ 2:15 ರ ಸುಮಾರಿಗೆ ಪ್ರಧಾನಿ ವಾರಣಾಸಿಗೆ ತಲುಪಲಿದ್ದು, ಅಲ್ಲಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಛತ್ತೀಸ್ಗಢದಲ್ಲಿ ‘ಮಹಾತಾರಿ ವಂದನಾ’ ಯೋಜನೆಯ ಮೊದಲ ಕಂತನ್ನು ವಿತರಿಸಲಿದ್ದಾರೆ.