Site icon Vistara News

Viral Video: ಇಟಲಿ ಪ್ರಧಾನಿ ಮೆಲಾನಿ ಹೊಗಳಿಕೆಗೆ ಪ್ರಧಾನಿ ಮೋದಿಯವರ ಮುಖಭಾವ ಹೀಗಿತ್ತು!; ವೈರಲ್​ ಆಯ್ತು ವಿಡಿಯೊ

PM Modi reaction After Italian PM Giorgia calls him most loved leader viral video

#image_title

ನವ ದೆಹಲಿ: ರೈಸಿನಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ, ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಪ್ರಧಾನಿ ನರೇಂದ್ರ ಮೋದಿ (PM Modi)ಯವರನ್ನು ಹೊಗಳಿ ಭಾಷಣ ಮಾಡಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನ ನಾಯಕರೆಲ್ಲಲ್ಲ ಅತ್ಯಂತ ಹೆಚ್ಚಿನ ಪ್ರೀತಿಪಾತ್ರರು’ ಎಂದು ಮೆಲಾನಿ ಹೇಳಿದ್ದಾರೆ. ಮೆಲಾನಿ ಹೀಗೆ ಹೇಳಿದಾಗ ಪ್ರಧಾನಿ ನರೇಂದ್ರ ಮೋದಿಯವರು ತೋರಿದ ಕ್ಯೂಟ್ ಎಕ್ಸ್​ಪ್ರೆಶನ್​​ನ ವಿಡಿಯೊ ಈಗ ವೈರಲ್ ಆಗುತ್ತಿದೆ.

ಇಂದು ರಾಷ್ಟ್ರಪತಿ ಭವನದಲ್ಲಿ ಮೆಲಾನಿ ಭಾಷಣ ಮಾಡುತ್ತ ‘ನರೇಂದ್ರ ಮೋದಿಯವರು ಜಾಗತಿಕವಾಗಿ ಅತ್ಯಂತ ಪ್ರಮುಖ ನಾಯಕರು ಎಂಬುದು ಸಾಬೀತಾಗಿದೆ. ಅವರಿಗೆ ಅಭಿನಂದನೆಗಳು’ ಎಂದರು. ಆಗ ಪ್ರಧಾನಿ ನರೇಂದ್ರ ಮೋದಿಯವರು ನಕ್ಕಿದ್ದಾರೆ, ಅದರಲ್ಲೂ ಅವರು ‘ಜಗತ್ತಿನ ನಾಯಕರೆಲ್ಲಲ್ಲ ಪಿಎಂ ಮೋದಿ ಅತ್ಯಂತ ಹೆಚ್ಚಿನ ಪ್ರೀತಿಪಾತ್ರರು’ ಎನ್ನುತ್ತಿದ್ದಂತೆ ಇನ್ನಷ್ಟು ನಕ್ಕಿದ್ದಾರೆ. ಮೆಲೋನಿ ಮಾತಿಗೆ ಪ್ರಧಾನಿ ಮೋದಿ ಕೊಟ್ಟ ಎಕ್ಸ್​ಪ್ರೆಶನ್​ ವಿಡಿಯೊ ಸಖತ್ ವೈರಲ್ ಆಗುತ್ತಿದೆ.

ವಿಡಿಯೊ ಇಲ್ಲಿದೆ:

ಇದನ್ನೂ ಓದಿ: Giorgia Meloni On Modi: ವಿಶ್ವ ನಾಯಕರಲ್ಲೇ ಮೋದಿ ಹೆಚ್ಚು ಪ್ರೀತಿಪಾತ್ರರು, ಇಟಲಿ ಪ್ರಧಾನಿ ಮೆಲೋನಿ ಮೆಚ್ಚುಗೆ

Exit mobile version