ನವದೆಹಲಿ: ವಸಾಹತುಶಾಹಿ ಪೂರ್ವ ಕ್ರಿಮಿನಲ್ ಕಾನೂನುಗಳನ್ನು (criminal law amendment bills) ಬದಲಿಸಿ, ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕಗಳನ್ನು ಪರಿಚಯಿಸಲು ಕೇಂದ್ರ ಸಚಿವ ಸಂಪುಟವು (Union Cabinet) ಗೃಹ ಸಚಿವ ಅಮಿತ್ ಶಾಗೆ (Home Minister Amit Shah) ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ. ಆದರೆ, ವಿಧೇಯಕಗಳ ಕುರಿತು ಗೃಹ ವ್ಯವಹಾರಗ ಸ್ಥಾಯಿ ಸಮಿತಿ ಮಾಡಿದ್ದ ಶಿಫಾರಸುಗಳ ಪೈಕಿ ವ್ಯಭಿಚಾರ ಅಪರಾಧ (adultery) ಮತ್ತು ಸಲಿಂಗ ಕಾಮ ಲೈಂಗಿಕತೆಯನ್ನು ಅಪರಾಧಿಕರಿಸುವ (gay sex) ಶಿಫಾರಸನ್ನು ಪ್ರಧಾನಿ ಮತ್ತು ಸಂಪುಟ ಅಸಮ್ಮತಿ ವ್ಯಕ್ತಪಡಿಸಿದೆ.
ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ನೀಡಿದ ಎರಡು ಸಲಹೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕಚೇರಿಯು ಒಪ್ಪಿಲ್ಲ. ವ್ಯಭಿಚಾರ ಅಪರಾಧ ಮತ್ತು ಸಲಿಂಗ ಕಾಮ ಲೈಂಗಿಕತೆಯನ್ನು ಅಪರಾಧಿಕರಿಸುವ ಶಿಫಾರಸುಗಳು ದೂರಗಾಮಿ ಪರಿಣಾಮಗಳನ್ನು ಬೀರುತ್ತವೆ ಮತ್ತು ಸುಪ್ರೀಂ ಕೋರ್ಟ್ ಮತ್ತು ಅದರ ತೀರ್ಪುಗಳಿಗೆ ವಿರುದ್ಧವಾಗಿ ನಡೆಯಾಗುತ್ತದೆ ಎಂದು ತಿಳಿಸಿವೆ.
2023ರ ಭಾರತೀಯ ನ್ಯಾಯ ಸಂಹಿತಾ ವಿಧೇಯಕದಲ್ಲಿ ವ್ಯಭಿಚಾರದ ಅಪರಾಧವನ್ನು ಉಳಿಸಿಕೊಳ್ಳಬೇಕೆಂದು ಸಮಿತಿಯು ಶಿಫಾರಸು ಮಾಡಿತ್ತು. ಆದಾಗ್ಯೂ, ಸುಪ್ರೀಂ ಕೋರ್ಟ್ 2018 ರಲ್ಲಿ ಈ ಅಪರಾಧವನ್ನು ತಳ್ಳಿಹಾಕಿ, ಇದು ಮಹಿಳೆಯರ ವಿರುದ್ಧ ತಾರತಮ್ಯ, ಲಿಂಗ ಭೇದ ಭಾವಗಳನ್ನು ಶಾಶ್ವತಗೊಳಿಸುತ್ತದೆ ಮತ್ತು ಮಹಿಳೆಯರ ಘನತೆಯನ್ನು ಕುಗ್ಗಿಸುತ್ತದೆ ಎಂದು ಹೇಳಿತ್ತು.
ಒಪ್ಪಿತ ವಯಸ್ಕರ ನಡುವಿನ ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವುದನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದರೂ ಹೊಸ ವಿಧೇಯಕದಲ್ಲಿ ಅಪರಾಧ ಎಂದು ಪರಿಗಣಿಸಲು ಸಮಿತಿ ಶಿಫಾರಸು ಮಾಡಿತ್ತು.
ಸಂಸದೀಯ ಸಮಿತಿಯು ಮದುವೆಯ ಸಂಸ್ಥೆಯನ್ನು ಪವಿತ್ರವೆಂದು ಪರಿಗಣಿಸಿದೆ. ಮದುವೆಯ ಪಾವಿತ್ರ್ಯವನ್ನು ಭಾರತೀಯ ಸಮಾಜದಲ್ಲಿ ರಕ್ಷಿಸಬೇಕು ಮತ್ತು ಮದುವೆಯನ್ನು ಲಿಂಗ-ತಟಸ್ಥಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಈ ಶಿಫಾರಸನ್ನು ಒಪ್ಪಿಕೊಳ್ಳದಿರುವ ನಿರ್ಧಾರಕ್ಕೆ ಪಿಎಂಒ, ಪ್ರಧಾನಿ ಮತ್ತು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯ ವ್ಯಾಖ್ಯಾನವನ್ನು 21 ನೇ ಶತಮಾನಕ್ಕೆ ಅನುಗುಣವಾಗಿ ಮಾಡಲು ಕೆಲವು ಬದಲಾವಣೆಗಳಿಗೆ ಒಪ್ಪಿಗೆ ನೀಡಲಾಗಿದೆ. ಎಲ್ಲಾ ಮೂರು ವಿಧೇಯಕಗಳು ರಾಜ್ಯಸಭೆಯಲ್ಲಿ ಬುಧವಾರ ಮತ್ತು ಮುಂದಿನ ವಾರದ ಆರಂಭದಲ್ಲಿ ಪರಿಗಣನೆಗೆ ತೆಗೆದುಕೊಂಡು ಅಂಗೀಕಾರಗೊಳ್ಳುವ ನಿರೀಕ್ಷೆಯಿದೆ. ವಿಧೇಯಕದ ಹೆಸರಿನ ಬಗ್ಗೆ ಇನ್ನೂ ಸಾಕಷ್ಟು ವಿವಾದವಿದ್ದರೂ ಹೊಸ ಕ್ರಿಮಿನಲ್ ಕಾನೂನು ಮಸೂದೆಗಳಿಗೆ ದಾರಿ ಮಾಡಿಕೊಡುತ್ತದೆ.
ಈ ಸುದ್ದಿಯನ್ನೂ ಓದಿ: Adultery Criminal Crime: ವ್ಯಭಿಚಾರ ಮತ್ತೆ ಕ್ರಿಮಿನಲ್ ಅಪರಾಧ! ಕೇಂದ್ರಕ್ಕೆ ಸಂಸದೀಯ ಸಮಿತಿ ಶಿಫಾರಸು