Site icon Vistara News

Mann Ki Baat : ಮನ್​ಕಿ ಬಾತ್​ ದಿನಾಂಕ ಬದಲು; ವಿವರಣೆ ನೀಡಿದ ಪ್ರಧಾನಿ ಮೋದಿ

Narendra Modi Mann Ki Baat

Mann Ki Baat: Narendra Modi says 'MY Bharat' to be launched on Oct 31, What Is It?

ನವ ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನಪ್ರಿಯತ ರೇಡಿಯೊ ಕಾರ್ಯಕ್ರಮ ಮನ್​ ಕಿ ಬಾತ್​ ಈ ಬಾರಿ ತಿಂಗಳ ಮಧ್ಯದಲ್ಲಿ ನಡೆಯಲಿದೆ. ಪ್ರತಿ ಬಾರಿ ಅದು ತಿಂಗಳ ಕೊನೇ ಭಾನುವಾರ ನಡೆಯುತ್ತದೆ. ಆದರೆ, ಈ ತಿಂಗಳು ಜೂನ್ 18ರಂದು ನಿಗದಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ.

ಈ ತಿಂಗಳ ಮನ್​ ಕಿ ಬಾತ್​ ಕಾರ್ಯಕ್ರಮ ಜೂನ್ 18ರ ಭಾನುವಾರ ನಡೆಯಲಿದೆ. ನಿಮ್ಮ ಸಲಹೆಗಳು ಹಾಗೂ ಅಭಿಪ್ರಾಯಗಳನ್ನು ಸ್ವೀಕರಿಸುವುದು ಯಾವಾಗಲೂ ವಿಶೇಷ ಅನುಭವವಾಗಿರುತ್ತದೆ. ನೀವು ಕೊಡಬೇಕಾಗಿರುವ ಮಾಹಿತಿಗಳನ್ನು ನಮೋ ಆಪ್, ಮೈಗವ್​​ ಮೂಲಕ ಹಂಚಿಕೊಳ್ಳಿ ಅಥವಾ 1800-11-7800 ಗೆ ಡಯಲ್ ಮಾಡುವ ಮೂಲಕ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಮನ್ ಕಿ ಬಾತ್’ ಕಾರ್ಯಕ್ರಮ ನಡೆಯುತ್ತದೆ. ಜೂನ್ 21 ರಿಂದ 24 ರವರೆಗೆ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಮೊದಲೇ ನಿಗದಿ ಮಾಡಿರುವ ಕಾರ್ಯಕ್ರಮವಾಗಿರುವ ಕಾರಣ ಅವರು ಮನ್​ ಕಿ ಬಾತ್ ಅನ್ನು ಮೊದಲೇ ಪೂರ್ಣಗೊಳಿಸಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಮೋದಿ ಅವರಿಗೆ ಔತಣಕೂಟ ಏರ್ಪಡಿಸಲಿದ್ದಾರೆ.

ಅಮೆರಿಕದಲ್ಲಿ ಏನು ಕಾರ್ಯಕ್ರಮ?

ಜೂನ್ 21 ರಂದು ನ್ಯೂಯಾರ್ಕ್​ನ ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಅಂತಾರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವವನ್ನು ಪ್ರಧಾನಿ ವಹಿಸುವ ಸಾಧ್ಯತೆಯಿದೆ. ಇದು ಅಂತಾರರಾಷ್ಟ್ರೀಯ ಸಮುದಾಯದ ದೊಡ್ಡ ಯೋಗ ದಿನಾಚರಣೆ ಎನಿಸಿಕೊಳ್ಳಲಿದೆ. ಮೋದಿ ಅವರು ತಮ್ಮ ಭೇಟಿಯ ಸಮಯದಲ್ಲಿ ಅಲ್ಲಿನ ವಾಣಿಜ್ಯ ಉದ್ಯಮಿಗಳನ್ನು ಭೇಟಿಯಾಗಲಿದ್ದಾರೆ, ಅಮೆರಿಕದ ರಾಜಕೀಯ ನಾಯಕರ ಜತೆಯೂ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ : Mango Gift: ಕಹಿ ಮರೆತು ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಮಾವಿನ ಹಣ್ಣು ಕಳುಹಿಸಿದ ‘ಮಮತಾ’ಮಯಿ ದೀದಿ!

ತಮ್ಮ ಅಧಿಕೃತ ಭೇಟಿಯ ಸಮಯದಲ್ಲಿ ಪ್ರಧಾನಿ ಯುಎಸ್ ಕಾಂಗ್ರೆಸ್​​ನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೆಲವು ದಿನಗಳ ಹಿಂದೆ, ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲು ಅಲ್ಲಿನ ನಾಯಕರ ಆಹ್ವಾನವನ್ನು ಮೋದಿ ಸ್ವೀಕರಿಸಿದ್ದರು.

“@SpeakerMcCarthy, @LeaderMcConnell, @SenSchumer ಮತ್ತು @RepJeffries ಅವರಿಗೆ ಧನ್ಯವಾದಗಳು. ಇದನ್ನು ಒಪ್ಪಿಕೊಳ್ಳಲು ನನಗೆ ಹೆಮ್ಮ ಎನಿಸುತ್ತಿದೆ ಮತ್ತು ಮತ್ತೊಮ್ಮೆ ಅಮೆರಿಕ ಕಾಂಗ್ರೆಸ್​ನ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಲು ಎದುರು ಕಾಯುತ್ತಿದ್ದೇನೆ ಎಂದು ಮೋದಿ ಅವರು ಟ್ವೀಟ್ ಮಾಡಿದ್ದರು.

Exit mobile version