2024ರ ಲೋಕಸಭೆ ಚುನಾವಣೆ ಸಲುವಾಗಿ ಒಗ್ಗಟ್ಟಾಗಿರುವ 24 ಪ್ರತಿಪಕ್ಷಗಳ ಒಕ್ಕೂಟದ ಎರಡನೇ ಸಭೆ (Opposition Meet) ಬೆಂಗಳೂರಿನಲ್ಲಿ ನಡೆಯುತ್ತಿದೆ. ಜು.17ರಂದು ಔಪಚಾರಿಕ ಚರ್ಚೆ ನಡೆಸಿದ್ದ ಪ್ರತಿಪಕ್ಷಗಳ ನಾಯಕರು, ಇಂದು ಪ್ರಮುಖ ವಿಚಾರಗಳ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. ಅತ್ತ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಈ ಸಭೆ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದಾರೆ. ಇಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಪೋರ್ಟ್ ಬ್ಲೇರ್ನಲ್ಲಿ ಹೊಸ ಏರ್ಪೋರ್ಟ್ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ‘ಬೆಂಗಳೂರಿನಲ್ಲಿ ಸಭೆಗಾಗಿ ಸೇರಿರುರುವವರು ಭ್ರಷ್ಟರು’ ಎಂದಿದ್ದಾರೆ.
‘ಇಂದು ಬೆಂಗಳೂರಿನಲ್ಲಿ ಹಾರ್ಡ್ಕೋರ್ ಭ್ರಷ್ಟರೆಲ್ಲ ಒಟ್ಟಾಗಿ ಸಭೆ ಸೇರಿದ್ದಾರೆ. ಕುಟುಂಬವೇ ಅವರ ಮೊದಲ ಆದ್ಯತೆ. ‘ ‘ಕುಟುಂಬದಿಂದ..ಕುಟುಂಬಕ್ಕಾಗಿ’ ಎಂಬುದೇ ಅವರ ಧ್ಯೇಯೋದ್ದೇಶ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ‘ಬೆಂಗಳೂರಿನಲ್ಲಿ ಸಭೆ ಸೇರಿರುವ ಪ್ರತಿಪಕ್ಷಗಳ ನಾಯಕರ ಉದ್ದೇಶ, ಆಶಯವೆಲ್ಲ ಅವರ ಸ್ವಹಿತಾಸಕ್ತಿ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Opposition Meet: ಬೆಂಗಳೂರಲ್ಲಿ ಪ್ರತಿಪಕ್ಷಗಳ ಸಭೆಗೆ ಚಾಲನೆ, ನಾಯಕರಿಗೆ ಔತಣಕೂಟ
‘2024ರಲ್ಲೂ ಎನ್ಡಿಎ ಒಕ್ಕೂಟವನ್ನು ಅಧಿಕಾರಕ್ಕೆ ತರಬೇಕು ಎಂದು ದೇಶದ ಜನರು ಈಗಾಗಲೇ ನಿರ್ಧಾರ ಮಾಡಿಬಿಟ್ಟಿದ್ದಾರೆ. ಆದರೆ 24 ಪಕ್ಷಗಳು ಬೇರೆಯದ್ದೇ ಹಾಡು ಹಾಡುತ್ತಿವೆ. ಭಾರತದ ದುಃಸ್ಥಿತಿಗೆ ಕಾರಣರಾದ ಜನರು ಇಂದು ತಮ್ಮ ತಮ್ಮ ಅಂಗಡಿಗಳನ್ನು ತೆರೆದು ಕೂತಿದ್ದಾರೆ. ಅವರ ಅಂಗಡಿಯಲ್ಲಿ ಜಾತಿಯತೆ ವಿಷ, ಮಿತಿಮೀರಿದ ಭ್ರಷ್ಟಾಚಾರಗಳು ತುಂಬಿ ತುಳುಕುತ್ತಿವೆ. ಸದ್ಯ ಅವರ ಅಂಗಡಿ ಬೆಂಗಳೂರಿಗೆ ಹೋಗಿದೆ’ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಸೋಲಿಸುವ ಸಲುವಾಗಿ ಕಾಂಗ್ರೆಸ್ ಸೇರಿ ದೇಶದ ಪ್ರಮುಖ ಪಕ್ಷಗಳೆಲ್ಲ ಒಗ್ಗೂಡಿವೆ. ಟಿಎಂಸಿ, ಆಪ್, ಜೆಡಿಯು, ಆರ್ಜೆಡಿ, ಎಸ್ಪಿ ಸೇರಿ ಒಟ್ಟು 24 ಪಕ್ಷಗಳ ನಾಯಕರು ಇಂದು ಬೆಂಗಳೂರಿನಲ್ಲಿ ಬಹುಮುಖ್ಯ ಸಭೆ ನಡೆಸುತ್ತಿದ್ದಾರೆ. ಈ ಒಕ್ಕೂಟದ ಮೊದಲ ಸಭೆ ಬಿಹಾರದ ಪಾಟ್ನಾದಲ್ಲಿ ಕಳೆದ ತಿಂಗಳು ನಡೆದಿತ್ತು. ಆಗ 17 ಪಕ್ಷಗಳ ನಾಯಕರು ಭಾಗವಹಿಸಿದ್ದರು. ಸಿದ್ಧಾಂತಗಳು ಸಂಪೂರ್ಣವಾಗಿ ಬೇರೆಯದ್ದೇ ಆಗಿರುವ ಪಕ್ಷಗಳೆಲ್ಲ ಒಂದಾಗಿರುವ