ಭೋಪಾಲ್: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಮಧ್ಯಪ್ರದೇಶದಲ್ಲಿ (Madhya Pradesh Election 2023) ಇಂದು ಪ್ರಧಾನಿ ನರೇಂದ್ರ ಮೋದಿ (PM Modi) ಪರೋಕ್ಷವಾಗಿ ಪ್ರಚಾರ ಶುರು ಮಾಡಿದರು. ಭೋಪಾಲ್ನಲ್ಲಿ ಅವರಿಂದ ಐದು ವಂದೇ ಭಾರತ್ ರೈಲುಗಳ (Vande Bharat Express)ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಅದಾದ ಬಳಿಕ ‘ಮೇರಾ ಬೂತ್, ಸಬ್ ಸೆ ಮಜಬೂತ್’ (Mera Booth Sabse Majboot) ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚ್ಯುವಲ್ ಆಗಿ ಮಾತನಾಡಿದರು.
‘ಬಿಜೆಪಿ ಕಾರ್ಯಕರ್ತರು ಯಾವಾಗಲೂ ಪಕ್ಷಕ್ಕಿಂತಲೂ ದೇಶ ಮೊದಲು ಎನ್ನುವವರು. ಪಕ್ಷ ಮತ್ತು ದೇಶದ ಹಿತಾಸಕ್ತಿಗಾಗಿ ತಳಮಟ್ಟದಿಂದ ಕೆಲಸ ಮಾಡುವ ಶ್ರಮಜೀವಿಗಳು. ನಾನೋ-ನೀನೋ ಎನ್ನುತ್ತ, ಬೂತ್ ಮಟ್ಟದಲ್ಲಿ ಕಿತ್ತಾಟ ಮಾಡಿಕೊಳ್ಳುವವರು ಅಲ್ಲವೇ ಅಲ್ಲ. ಬೂತ್ ಹಂತದಲ್ಲೂ ಜನಸೇವೆ ರಾಜಕೀಯವನ್ನೇ ಮಾಡುವವರು. ಇಷ್ಟಕ್ಕೂ ಬಿಜೆಪಿ ಯಾವತ್ತೂ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು, ಆದೇಶಗಳನ್ನು ಹೊರಡಿಸುವ ಪಕ್ಷವೂ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರತಿಯೊಬ್ಬರೂ ಎಲ್ಲ ಮಾಹಿತಿಗಳನ್ನೂ ನಿಮ್ಮ ಬೆರಳ ತುದಿಯಲ್ಲೇ ಇಟ್ಟುಕೊಳ್ಳಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡಿದ ಪ್ರಧಾನಿ ಮೋದಿ ‘ಕೆಲವು ರಾಜಕೀಯ ಪಕ್ಷಗಳು ಬರೀ ಪಕ್ಷದ ಏಳ್ಗೆಗಾಗಿ ಕೆಲಸ ಮಾಡುತ್ತವೆ. ಅದರಲ್ಲೂ ಕೆಲವರು ತಮ್ಮ ಪಕ್ಷದ ಬಗ್ಗೆ ಮಾತ್ರ ಯೋಚಿಸುತ್ತಿರುತ್ತಾರೆ. ಕಾರಣ ಆ ಪಕ್ಷಗಳಿಂದ ಅವರಿಗೆ ಭ್ರಷ್ಟಾಚಾರದ, ಕಮಿಷನ್ ಹಣ ಬರುತ್ತಿರುತ್ತದೆ. ಮತ ಬ್ಯಾಂಕ್ ರಾಜಕೀಯವನ್ನು ಅಳವಡಿಸಿಕೊಂಡ ಪಕ್ಷಗಳು ಅನೇಕ ಇವೆ ಈ ದೇಶದಲ್ಲಿ. ಇಂಥ ಪಕ್ಷಗಳ ಸಿದ್ಧಾಂತಗಳಿಂದ ದೇಶಕ್ಕೆ ಅಪಾರ ಹಾನಿಯಾಗುತ್ತಿದೆ. ಆದರೆ ಬಿಜೆಪಿ ಪಕ್ಷ ಮತ್ತು ಈ ಪಕ್ಷದ ಕಾರ್ಯಕರ್ತರು ವಿಭಿನ್ನ. ನಮಗೆಲ್ಲರಿಗೂ ದೇಶ ಮೊದಲು, ನಂತರ ಪಕ್ಷ ಎಂಬ ಆಲೋಚನೆ ಮೈಗೂಡಿದೆ’ ಎಂದು ಪ್ರಧಾನಿ ಹೇಳಿದ್ದಾರೆ. ಹಾಗೇ, ವಿಶ್ವದಲ್ಲೇ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಗುರುತಿಸಿಕೊಳ್ಳುವಲ್ಲಿ ಮಧ್ಯಪ್ರದೇಶದ ಕಾರ್ಯಕರ್ತರ ಪಾತ್ರವೂ ದೊಡ್ಡದಿದೆ’ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Vande Bharat Express: 5 ವಂದೇ ಭಾರತ್ ರೈಲುಗಳಿಗೆ ಏಕಕಾಲದಲ್ಲಿ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿಯವರು ಇಂದು ಮೇರಾ ಬೂತ್, ಸಬ್ ಸೆ ಮಜಬೂತ್ ಅಭಿಯಾನ ಉದ್ಘಾಟನೆ ಮಾಡಿ, ಭಾಷಣ ಮಾಡಿದರು. ಇಂದು ಅವರ ಭಾಷಣವನ್ನು ನೇರವಾಗಿ ಕೇಳಲು ದೇಶಾದ್ಯಂತ ಆಯ್ದ 3000 ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದರು. ಇನ್ನುಳಿದಂತೆ ಲೈವ್ ಪ್ರಸಾರವಾಗಿದ್ದನ್ನು 10 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ವೀಕ್ಷಿಸಿದ್ದಾರೆ. ಅಮೆರಿಕ ಮತ್ತು ಈಜಿಪ್ಟ್ ಪ್ರವಾಸ ಮುಗಿಸಿ ಬರುತ್ತಿದ್ದಂತೆ ಪ್ರಧಾನಿ ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹಾಗೇ, ಯುಎಸ್-ಈಜಿಪ್ಟ್ ಪ್ರವಾಸ ಮುಗಿಸಿ ಬರುತ್ತಿದ್ದಂತೆ ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗಿದ್ದಕ್ಕೆ ಸಂತೋಷವಾಯಿತು’ ಎಂದೂ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
भोपाल में आयोजित 'मेरा बूथ, सबसे मजबूत' कार्यक्रम, हमारे कर्मठ कार्यकर्ताओं के राष्ट्र निर्माण के संकल्प को नई ऊर्जा प्रदान करेगा। https://t.co/70fv89nrtl
— Narendra Modi (@narendramodi) June 27, 2023