ದೇಶ
Mera Booth Sabse Majboot: ಕಾರ್ಯಕರ್ತರನ್ನು ಹೊಗಳಿ, ವಿಪಕ್ಷಗಳಿಗೆ ಕುಟುಕಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿಯವರು ಇಂದು ಮೇರಾ ಬೂತ್, ಸಬ್ ಸೆ ಮಜಬೂತ್ ಅಭಿಯಾನ ಉದ್ಘಾಟನೆ ಮಾಡಿ, ಭಾಷಣ ಮಾಡಿದರು. ಅವರ ಭಾಷಣವನ್ನು ನೇರವಾಗಿ ಕೇಳಲು 3000 ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಭೋಪಾಲ್: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಮಧ್ಯಪ್ರದೇಶದಲ್ಲಿ (Madhya Pradesh Election 2023) ಇಂದು ಪ್ರಧಾನಿ ನರೇಂದ್ರ ಮೋದಿ (PM Modi) ಪರೋಕ್ಷವಾಗಿ ಪ್ರಚಾರ ಶುರು ಮಾಡಿದರು. ಭೋಪಾಲ್ನಲ್ಲಿ ಅವರಿಂದ ಐದು ವಂದೇ ಭಾರತ್ ರೈಲುಗಳ (Vande Bharat Express)ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಅದಾದ ಬಳಿಕ ‘ಮೇರಾ ಬೂತ್, ಸಬ್ ಸೆ ಮಜಬೂತ್’ (Mera Booth Sabse Majboot) ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚ್ಯುವಲ್ ಆಗಿ ಮಾತನಾಡಿದರು.
‘ಬಿಜೆಪಿ ಕಾರ್ಯಕರ್ತರು ಯಾವಾಗಲೂ ಪಕ್ಷಕ್ಕಿಂತಲೂ ದೇಶ ಮೊದಲು ಎನ್ನುವವರು. ಪಕ್ಷ ಮತ್ತು ದೇಶದ ಹಿತಾಸಕ್ತಿಗಾಗಿ ತಳಮಟ್ಟದಿಂದ ಕೆಲಸ ಮಾಡುವ ಶ್ರಮಜೀವಿಗಳು. ನಾನೋ-ನೀನೋ ಎನ್ನುತ್ತ, ಬೂತ್ ಮಟ್ಟದಲ್ಲಿ ಕಿತ್ತಾಟ ಮಾಡಿಕೊಳ್ಳುವವರು ಅಲ್ಲವೇ ಅಲ್ಲ. ಬೂತ್ ಹಂತದಲ್ಲೂ ಜನಸೇವೆ ರಾಜಕೀಯವನ್ನೇ ಮಾಡುವವರು. ಇಷ್ಟಕ್ಕೂ ಬಿಜೆಪಿ ಯಾವತ್ತೂ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು, ಆದೇಶಗಳನ್ನು ಹೊರಡಿಸುವ ಪಕ್ಷವೂ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರತಿಯೊಬ್ಬರೂ ಎಲ್ಲ ಮಾಹಿತಿಗಳನ್ನೂ ನಿಮ್ಮ ಬೆರಳ ತುದಿಯಲ್ಲೇ ಇಟ್ಟುಕೊಳ್ಳಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡಿದ ಪ್ರಧಾನಿ ಮೋದಿ ‘ಕೆಲವು ರಾಜಕೀಯ ಪಕ್ಷಗಳು ಬರೀ ಪಕ್ಷದ ಏಳ್ಗೆಗಾಗಿ ಕೆಲಸ ಮಾಡುತ್ತವೆ. ಅದರಲ್ಲೂ ಕೆಲವರು ತಮ್ಮ ಪಕ್ಷದ ಬಗ್ಗೆ ಮಾತ್ರ ಯೋಚಿಸುತ್ತಿರುತ್ತಾರೆ. ಕಾರಣ ಆ ಪಕ್ಷಗಳಿಂದ ಅವರಿಗೆ ಭ್ರಷ್ಟಾಚಾರದ, ಕಮಿಷನ್ ಹಣ ಬರುತ್ತಿರುತ್ತದೆ. ಮತ ಬ್ಯಾಂಕ್ ರಾಜಕೀಯವನ್ನು ಅಳವಡಿಸಿಕೊಂಡ ಪಕ್ಷಗಳು ಅನೇಕ ಇವೆ ಈ ದೇಶದಲ್ಲಿ. ಇಂಥ ಪಕ್ಷಗಳ ಸಿದ್ಧಾಂತಗಳಿಂದ ದೇಶಕ್ಕೆ ಅಪಾರ ಹಾನಿಯಾಗುತ್ತಿದೆ. ಆದರೆ ಬಿಜೆಪಿ ಪಕ್ಷ ಮತ್ತು ಈ ಪಕ್ಷದ ಕಾರ್ಯಕರ್ತರು ವಿಭಿನ್ನ. ನಮಗೆಲ್ಲರಿಗೂ ದೇಶ ಮೊದಲು, ನಂತರ ಪಕ್ಷ ಎಂಬ ಆಲೋಚನೆ ಮೈಗೂಡಿದೆ’ ಎಂದು ಪ್ರಧಾನಿ ಹೇಳಿದ್ದಾರೆ. ಹಾಗೇ, ವಿಶ್ವದಲ್ಲೇ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಗುರುತಿಸಿಕೊಳ್ಳುವಲ್ಲಿ ಮಧ್ಯಪ್ರದೇಶದ ಕಾರ್ಯಕರ್ತರ ಪಾತ್ರವೂ ದೊಡ್ಡದಿದೆ’ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Vande Bharat Express: 5 ವಂದೇ ಭಾರತ್ ರೈಲುಗಳಿಗೆ ಏಕಕಾಲದಲ್ಲಿ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿಯವರು ಇಂದು ಮೇರಾ ಬೂತ್, ಸಬ್ ಸೆ ಮಜಬೂತ್ ಅಭಿಯಾನ ಉದ್ಘಾಟನೆ ಮಾಡಿ, ಭಾಷಣ ಮಾಡಿದರು. ಇಂದು ಅವರ ಭಾಷಣವನ್ನು ನೇರವಾಗಿ ಕೇಳಲು ದೇಶಾದ್ಯಂತ ಆಯ್ದ 3000 ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದರು. ಇನ್ನುಳಿದಂತೆ ಲೈವ್ ಪ್ರಸಾರವಾಗಿದ್ದನ್ನು 10 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ವೀಕ್ಷಿಸಿದ್ದಾರೆ. ಅಮೆರಿಕ ಮತ್ತು ಈಜಿಪ್ಟ್ ಪ್ರವಾಸ ಮುಗಿಸಿ ಬರುತ್ತಿದ್ದಂತೆ ಪ್ರಧಾನಿ ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹಾಗೇ, ಯುಎಸ್-ಈಜಿಪ್ಟ್ ಪ್ರವಾಸ ಮುಗಿಸಿ ಬರುತ್ತಿದ್ದಂತೆ ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗಿದ್ದಕ್ಕೆ ಸಂತೋಷವಾಯಿತು’ ಎಂದೂ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
भोपाल में आयोजित 'मेरा बूथ, सबसे मजबूत' कार्यक्रम, हमारे कर्मठ कार्यकर्ताओं के राष्ट्र निर्माण के संकल्प को नई ऊर्जा प्रदान करेगा। https://t.co/70fv89nrtl
— Narendra Modi (@narendramodi) June 27, 2023
ದೇಶ
Organ Donation : ಅಂಗಾಂಗ ದಾನ ಮಾಡಿದವರ ಅಂತ್ಯ ಸಂಸ್ಕಾರಕ್ಕೆ ಸಕಲ ಸರ್ಕಾರಿ ಗೌರವ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಅಂಗಾಂಗ ದಾನಿಗಳಿಗೆ (Organ Donation) ಸಂಪೂರ್ಣ ಸರ್ಕಾರಿ ಗೌರವಗಳನ್ನು ಘೋಷಿಸಿದ್ದಾರೆ.
ಚೆನ್ನೈ: ಈ ಸೌಲಭ್ಯ ಕರ್ನಾಟಕದಲ್ಲಿ ಅಲ್ಲ. ತಮಿಳುನಾಡಲ್ಲಿ. ಶನಿವಾರ ಅಲ್ಲಿನ ಸಿಎಂ ಎಂ. ಕೆ ಸ್ಟಾಲಿನ್ ಅವರು ಈ ಘೋಷಣೆ ಮಾಡಿದ್ದಾರೆ. ಅಂಗಾಂಗ ದಾನಿಗಳ ಅಂತ್ಯಕ್ರಿಯೆಗೆ ತಮ್ಮ ಸರ್ಕಾರ ಸಂಪೂರ್ಣ ಸರ್ಕಾರಿ ಗೌರವಗಳನ್ನು ನೀಡಲಿದೆ ಎಂದು ಪ್ರಕಟಿಸಿದ್ದಾರೆ. ಮೆದುಳು ನಿಷ್ಕ್ರಿಯಗೊಂಡವರು ಮತ್ತು ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬಂದ ಅವರ ಕುಟುಂಬ ಸದಸ್ಯರ ತ್ಯಾಗವನ್ನು ಗೌರವಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಅಂಗಾಂಗ ದಾನದಲ್ಲಿ ತಮಿಳುನಾಡು ದೇಶದಲ್ಲಿ ಮುಂಚೂಣಿ ಸ್ಥಾನ ಪಡೆದಿದೆ. ಮೆದುಳು ನಿಷ್ಕ್ರಿಯಗೊಂಡವರ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬರುವ ಕುಟುಂಬಗಳಿಂದಾಗಿ ತಮಿಳು ನಾಡಿಗೆ ಈ ಗೌರವ ಲಭಿಸಿದೆ ” ಎಂದು ಡಿಎಂಕೆ ಮುಖ್ಯಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ನಲ್ಲಿ ಪ್ರಕಟಿಸಿದ್ದಾರೆ.
உடல் உறுப்பு தானத்தின் மூலம் நூற்றுக்கணக்கான நோயாளிகளுக்கு வாழ்வளிக்கும் அரும்பணியில் நாட்டின் முன்னணி மாநிலமாகத் தமிழ்நாடு தொடர்ந்து விளங்கி வருகின்றது.
— M.K.Stalin (@mkstalin) September 23, 2023
குடும்ப உறுப்பினர்கள் மூளைச்சாவு நிலையை அடைந்த துயரச் சூழலிலும், அவர்களின் உடல் உறுப்புகளைத் தானமாக அளித்திட முன்வரும்…
ಮೆದುಳು ನಿಷ್ಕ್ರಿಯಗೊಂಡ ಮತ್ತು ಅವರ ಅಂಗಾಂಗಗಳನ್ನು ಇತರರಿಗೆ ದಾನ ಮಾಡಿದ ವ್ಯಕ್ತಿಗಳಿಗೆ ಇನ್ನು ಮುಂದೆ ಅಂತಿಮ ವಿಧಿಗಳನ್ನು ನೆರವೇರಿಸುವಾಗ ರಾಜ್ಯ ಸರ್ಕಾರದ ಗೌರವಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ ಈ ಘೋಷಣೆಯನ್ನು ಶ್ಲಾಘಿಸಿದ ಪಿಎಂಕೆ ಮುಖ್ಯಸ್ಥ ಅನ್ಬುಮಣಿ ರಾಮದಾಸ್, ‘ಮೆದುಳು ನಿಷ್ಕ್ರಿಯಗೊಂಡವರು’ ಎಂದು ಘೋಷಿಸಲ್ಪಟ್ಟವರ ನಿಸ್ವಾರ್ಥ ತ್ಯಾಗಕ್ಕೆ ಇದಕ್ಕಿಂತ ಬೇರೆ ಯಾವುದೇ ಗೌರವ ಸಿಗದು ಎಂದು ಹೇಳಿದ್ದಾರೆ.
ಇದನ್ನೂ ಓದಿ : Gautam Adani : ಅದಾನಿ ಭೇಟಿ ಮಾಡಿದ ಶರದ್ ಪವಾರ್; ರಾಹುಲ್ ಮಾತಿಗೆ ಕಿಮ್ಮತ್ತಿಲ್ಲ ಎಂದ ಬಿಜೆಪಿ!
ತಮ್ಮ ಅಂಗಾಂಗಗಳನ್ನು ದಾನ ಮಾಡಿ ಅನೇಕ ಜೀವಗಳನ್ನು ಉಳಿಸುವವರಿಗೆ ಇದಕ್ಕಿಂತ ಉತ್ತಮ ಗೌರವ ಮತ್ತು ಮಾನ್ಯತೆ ನೀಡಲು ಸಾಧ್ಯವಿಲ್ಲ” ಎಂದು ಅವರು ಪಕ್ಷದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂಗಾಂಗ ದಾನದಲ್ಲಿ ಪಾರದರ್ಶಕತೆಯನ್ನು ತರುವಂತೆ ಪಿಎಂಕೆ ನಾಯಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯುವ ಜನರಿಗೆ ಅಂಗಾಂಗಗಳ ಹಂಚಿಕೆಯಲ್ಲಿ ಆದ್ಯತೆ ನೀಡಬೇಕು ಎಂಬುದಾಗಿಯೂ ಅವರು ಹೇಳಿದ್ದಾರೆ.
ದೇಶ
Illicit Affair : ಅಕ್ರಮ ಸಂಬಂಧ ನೋಡಿದ ಮಗನನ್ನೇ ಕೊಂದ ಹೆತ್ತಮ್ಮ; 2 ವರ್ಷದ ಬಳಿಕ ಪ್ರಿಯಕರನ ಜತೆ ಅರೆಸ್ಟ್
8 ವರ್ಷದ ಮಗುವಿನ ತಾಯಿ ಹಾಗೂ ಚಿಕ್ಕಪ್ಪ ಸೇರಿಕೊಂಡು (Illicit Affair) ಕತ್ತು ಹಿಸುಕಿ ಕೊಂದಿದ್ದಾರೆ. ಅವರು ಮಗುವಿನ ಮೃತ ದೇಹವನ್ನು ಹೊಲದಲ್ಲಿ ಕೊಂದ ನಂತರ ಸಮಾಧಿ ಮಾಡಿದ್ದರು.
ಜೈಪುರ : ತನ್ನ ಮತ್ತು ಭಾವನ ನಡುವಿನ ಅಕ್ರಮ ಸಂಬಂಧವನ್ನು (Illicit Affair) ನೋಡಿದ ಮಗುವನ್ನು ಕೊಂದು ಹಾಕಿದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ ಘಟನೆ ರಾಜಸ್ಥಾನದ ಭರತ್ಪುರದಲ್ಲಿ ನಡೆದಿದೆ. ಕೊಲೆ ಆರೋಪ ಹಾಗೂ ಸಾಕ್ಷಿ ನಾಶ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಭಾವನನ್ನು ಬಂಧಿಸಲಾಗಿದೆ. ಅವರಿಬ್ಬರು ಮಗುವಿನ ಕತ್ತು ಹಿಸುಕಿ ಕೊಂದು ಮೃತದೇಹವನ್ನು ಹೊಲದಲ್ಲಿ ಹೂತು ಹೋಗಿದ್ದರು. ಪ್ರಕರಣದ ಬಗ್ಗೆ ನಾನಾ ಹಂತಗಳಲ್ಲಿ ತನಿಖೆ ನಡೆದು ಎರಡು ವರ್ಷಗಳ ಬಳಿಕ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರಂಭದಲ್ಲಿ ಅವರು ನಾನಾ ನೆಪ ಹೇಳಿ ಬಚಾವಾಗಿದ್ದರು. ಆದರೆ ಹತ್ಯೆಯಾದ ಮಗುವಿನ ತಂದೆಯ ನಿರಂತರ ಹೋರಾಟದ ಬಳಿಕ ಆರೋಪಿಗಳು ಕಾನೂನು ಬಲೆಗೆ ಬಿದ್ದಿದ್ದಾರೆ.
ಯಾಕೆ ಕೊಲೆ ಮಾಡಿದ್ದರು
ಬಂಧನಕ್ಕೊಳಗಾದವರನ್ನು ಕೃಷ್ಣ ಕಾಂತ್ ಮತ್ತು ತಾಯಿ ಹೇಮಲತಾ ಎಂದು ಗುರುತಿಸಲಾಗಿದೆ. ಕೃಷ್ಣಕಾಂತ್ ನ ಸಹೋದರನ ಪತ್ನಿಯೇ ಹೇಮಲತಾ. ಅವರಿಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಒಂದು ದಿನ ಅವರಿಬ್ಬರು ಹೊಲದಲ್ಲಿ ಲೈಂಗಿಕ ಸಂಪರ್ಕ ನಡೆಸುತ್ತಿದ್ದಾಗ ಮಗ ಗೋಲು ಬಂದು ನೋಡಿದ್ದ. ಆತ ವಿಷಯವನ್ನು ಎಲ್ಲರಿಗೂ ತಿಳಿಸುತ್ತಾನೆ ಎಂಬ ಭಯದಿಂದ ಅವರಿಬ್ಬರೂ ಸೇರಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದರು.
ರುಬ್ಪಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಚಂದನ್ಪುರ ಗ್ರಾಮದಲ್ಲಿ 2021 ರಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಮಗುವಿನ ತಂದೆ ಗ್ಯಾನ್ ಸಿಂಗ್ ತನ್ನ ಮಗ ಗೋಲು ಫೆಬ್ರವರಿ 2021 ರಲ್ಲಿ ಕಾಣೆಯಾದ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದರು. ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಮೂರು ದಿನಗಳ ನಂತರ ಗ್ರಾಮದ ಹೊಲದಲ್ಲಿ ಗೋಲು ಮೃತ ದೇಹ ಪತ್ತೆಯಾಗಿತ್ತು.
ಪೊಲೀಸರು ಕೊಲೆಗಾರರನ್ನು ಬಂಧಿಸಲು ತನಿಖೆಯನ್ನು ಪ್ರಾರಂಭಿಸಿದ್ದರೂ ಕೊಲೆಗಾರರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರು ಡಿಸೆಂಬರ್ 2021 ರಂದು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಆದರೆ ಮಗುವಿನ ತಂದೆ ಬಿಟ್ಟುಕೊಡಲಿಲ್ಲ. ತನ್ನ ಮಗನ ಕೊಲೆಗಾರರನ್ನು ಕಂಡುಹಿಡಿಯದಿರುವ ಬಗ್ಗೆ ಜೈಪುರ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು ಹಾಗೂ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಈ ವಿಚಾರಣೆ ನಡೆಸಿದ ಜೈಪುರ ಹೈಕೋರ್ಟ್ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಆದೇಶಿಸಿತ್ತು.
ತಂಡ ರಚನೆ
ಬಯಾನಾದ ಸರ್ಕಲ್ ಆಫೀಸರ್ (ಸಿಒ) ನಿತಿರಾಜ್ ಸಿಂಗ್ ಅವರ ನೇತೃತ್ವದಲ್ಲಿ ಕೊಲೆ ಆರೋಪಿಗಳ ಪತ್ತೆ ತಂಡವನ್ನು ರಚಿಸಲಾಯಿತು. ಎಂಟು ವರ್ಷದ ಮಗುವಿನ ಕೊಲೆಗಾರರನ್ನು ಬಂಧಿಸಲು ಮತ್ತೊಮ್ಮೆ ತನಿಖೆಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಮಗುವಿನ ಚಿಕ್ಕಪ್ಪ ಮತ್ತು ತಾಯಿ ಅಕ್ರಮ ಸಂಬಂಧ ಹೊಂದಿದ್ದಾರೆಂದು ತಿಳಿಯಿತು. ಚಿಕ್ಕಪ್ಪ ಕೃಷ್ಣ ಕಾಂತ್ ಮತ್ತು ತಾಯಿ ಹೇಮಲತಾ ಅವರು ಹೆಚ್ಚಿನ ವಿಚಾರಣೆಗೆ ಕರೆಯಲಾಗಿತ್ತು.
ಇದನ್ನೂ ಓದಿ : Murder Case : ನೀರಿನ ತೊಟ್ಟಿಯಲ್ಲಿ ತೇಲುತ್ತಿತ್ತು ಮಗುವಿನ ಶವ; ಮೊಮ್ಮಗಳನ್ನೇ ಕೊಂದು ಬಿಟ್ಟನಾ!
ಆರಂಭದಲ್ಲಿ, ಅವರಿಬ್ಬರು ಮಗುವಿನ ಕೊಲೆಯಲ್ಲಿ ತಮ್ಮ ಪಾತ್ರವನ್ನು ನಿರಾಕರಿಸಿದ್ದರು. ಆದಾಗ್ಯೂ, ಸಮಗ್ರ ವಿಚಾರಣೆಯ ನಂತರ ಅವರಿಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡರು. ತಾವಿಬ್ಬರೂ ಏಕಾಂತದಲ್ಲಿ ಇರುವ ಸಮಯವನ್ನು ಮಗುವು ನೋಡಿತ್ತು. ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಹೇಳಿಕೊಂಡರೆ ಎಂಬ ಭಯದಿಂದ ಕತ್ತು ಹಿಸುಕಿ ಕೊಂದಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲ ಆಗವಾಗ ಎರಡು ವರ್ಷ ಕಳೆದಿತ್ತು. ಆರೋಪಿಗಳು ಬಂಧನವಾದ ಬಳಿಕ ಗೋಲುವಿನ ತಂದೆಗೆ ಸಮಾಧಾನವಾಗಿದೆ.
ದೇಶ
Gautam Adani : ಅದಾನಿ ಭೇಟಿ ಮಾಡಿದ ಶರದ್ ಪವಾರ್; ರಾಹುಲ್ ಮಾತಿಗೆ ಕಿಮ್ಮತ್ತಿಲ್ಲ ಎಂದ ಬಿಜೆಪಿ!
ರಾಹುಲ್ ಗಾಂಧಿ ಮಾತು ಕೇಳಲು ಸಿದ್ಧರಿದ್ದರೆ ಈ ಚಿತ್ರವು ಸಾವಿರ ಪದಗಳನ್ನು ಹೇಳುತ್ತದೆ ಎಂದಿರುವ ಬಿಜೆಪಿ ನಾಯಕ ಶರದ್ ಪವಾರ್ ಮತ್ತು ಗೌತಮ್ ಅದಾನಿ (Gautam Adani) ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.
ನವದೆಹಲಿ: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಶನಿವಾರ ಅಹಮದಾಬಾದ್ನಲ್ಲಿ ದೈತ್ಯ ಉದ್ಯಮಿ ಗೌತಮ್ ಅದಾನಿ (Gautam Adani) ಅವರನ್ನು ಭೇಟಿಯಾಗಿದ್ದಾರೆ. ಅವರ ನಿವಾಸ ಹಾಗೂ ಕಚೇರಿಗೆ ಭೇಟಿ ನೀಡಿದ್ದರು ಎಂಬುದಾಗಿ ವರದಿಯಾಗಿದೆ. ಅದಕ್ಕಿಂತ ಮೊದಲು ಇಬ್ಬರೂ ಅಹಮದಾಬಾದ್ನಲ್ಲಿ ಭಾರತದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಟ್ ಉದ್ಘಾಟನಾ ಸಮಾರಂಭದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು
ಉದ್ಯಮಿ ಅದಾನಿ ವಿರುದ್ಧ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನಿರಂತರ ಮಾತಿನ ದಾಳಿ ನಡೆಸುತ್ತಿರುವ ನಡುವೆಯೇ 2024 ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಸಂಘಟಿಸಿರುವ ಪ್ರತಿಪಕ್ಷಗಳ ಇಂಡಿಯಾ ಬಣದ ಸದಸ್ಯರಾಗಿರುವ ಶರದ್ ಪವಾರ್ ಅವರು ಅದಾನಿಯನ್ನು ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ. ಗೌತಮ್ ಅದಾನಿ ಅವರೊಂದಿಗೆ ಗುಜರಾತ್್ನ ಚಾಚಾರ್ವಾಡಿಯ ವಾಸ್ನಾದಲ್ಲಿ ಭಾರತದ ಮೊದಲ ಲ್ಯಾಕ್ಟೋಫೆರಿನ್ ಸ್ಥಾವರ ಎಕ್ಸಿಂಪವರ್ ಅನ್ನು ಉದ್ಘಾಟಿಸುವ ಸೌಭಾಗ್ಯ ದೊರಕಿದೆ ಎಂದು ಪವಾರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Rahul Gandhi: ರಾಹುಲ್ ಆಧುನಿಕ ಭಾರತದ ಮಹಾತ್ಮ ಗಾಂಧಿ ಹಾಗೂ ರಾಷ್ಟ್ರ ಪುತ್ರ! ಹೀಗೆ ಹೇಳಿದ್ದು ಯಾರು?
ಶರದ್ ಪವಾರ್ ಅವರ ಹ್ಯಾಂಡಲ್ನಲ್ಲಿ ಮಾತ್ರ ಪೋಸ್ಟ್ ಮಾಡಲಾದ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಈ ಚಿತ್ರವು ಸಾವಿರ ಪದಗಳನ್ನು ವಿವರಿಸುತ್ತವೆ. ಆದರೆ ರಾಹುಲ್ ಗಾಂಧಿ ಅವರ ಮಾತನ್ನು ಕೇಳಲು ಸಿದ್ಧರಿದ್ದರೆ ಮಾತ್ರ ಎಂದು ಬರೆದುಕೊಂಡಿದ್ದಾರೆ. ರಾಹುಲ್ ಗಾಂಧಿಯನ್ನು ಇಂಡಿಯಾ ಬಣದಲ್ಲಿ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಪೂನಾವಾಲಾ ಟೀಕಿಸಿದ್ದಾರೆ.
I just hope that Sharad Pawar ji won’t be abused by likes of Alka Lamba again merely because nobody in INDI Alliance takes @RahulGandhi or his utterances seriously. This picture speaks a thousand words provided Rahul Gandhi is willing to listen 👂 pic.twitter.com/UYFA3EnoIr
— Shehzad Jai Hind (@Shehzad_Ind) September 23, 2023
ಇಂಡಿಯಾ ಮೈತ್ರಿಕೂಟದಲ್ಲಿ ಯಾರೂ ರಾಹುಲ್ ಅವರನ್ನು ಮತ್ತು ಅವರ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸವುದಿಲ್ಲ. ಆ ಕಾರಣ ಶರದ್ ಪವಾರ್ ಜಿ ಅವರನ್ನು ಅಲ್ಕಾ ಲಂಬಾ ಅವರಂತಹವರು ಮತ್ತೆ ನಿಂದಿಸುವುದಿಲ್ಲ ರಾಹುಲ್ ಗಾಂಧಿ ಅವರ ಮಾತು ಕೇಳಲು ಸಿದ್ಧರಿದ್ದರೆ ಈ ಚಿತ್ರವು ಸಾವಿರ ಪದಗಳನ್ನು ಹೇಳುತ್ತದೆ ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.
ಅದಾನಿ ಜತೆ ಉತ್ತಮ ಗೆಳೆತನ ಹೊಂದಿರುವ ಪವಾರ್
ಅದಾನಿ ಜೊತೆ ಶರದ್ ಪವಾರ್ ಅವರ ನಿಕಟ ಸಂಪರ್ಕ ಬೆಳಕಿಗೆ ಬರುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಸಂದರ್ಶನವೊಂದರಲ್ಲಿ, ಶರದ್ ಪವಾರ್ ಅವರು ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ವಿರೋಧಿಸಿದ್ದರು. ಬದಲಿಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಸಮಿತಿಯ ಪರವಾಗಿರುವುದಾಗಿ ಹೇಳಿದ್ದರು.
ಶರದ್ ಪವಾರ್ ತಮ್ಮ ಆತ್ಮಚರಿತ್ರೆ ಲೋಕ್ ಮೇಜ್ ಸಾಂಗತಿಯಲ್ಲಿ ಗೌತಮ್ ಅದಾನಿ ಅವರನ್ನು ಕಠಿಣ ಪರಿಶ್ರಮಿ, ಸರಳ ಮತ್ತು ಕೆಳಮಟ್ಟದ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಶರದ್ ಪವಾರ್ ಅವರ ಒತ್ತಾಯದ ಮೇರೆಗೆ ಗೌತಮ್ ಅದಾನಿ ಥರ್ಮಲ್ ವಿದ್ಯುತ್ ಕ್ಷೇತ್ರಕ್ಕೆ ಕಾಲಿಟ್ಟರು ಎಂದು ಶರದ್ ಪವಾರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಆಟೋಮೊಬೈಲ್
Hydrogen fuel cell Bus : ದೆಹಲಿಯಲ್ಲಿ ಸಂಚರಿಸಲಿದೆ ಅತ್ಯಾಧುನಿಕ ಹೈಡ್ರೋಜನ್ ಬಸ್, ಏನಿದರ ಪ್ರಯೋಜನ?
ದೆಹಲಿಯಲ್ಲಿ ಮೊದಲ ಗ್ರೀನ್ ಹೈಡ್ರೋಜನ್ ಫ್ಯೂಯಲ್ ಸೆಲ್ (Hydrogen fuel cell) ಬಸ್ಗೆ ಕೇಂದ್ರ ಸಚಿವರು ಹಸಿರು ನಿಶಾನೆ ತೋರಲಿದ್ದಾರೆ. ಇಂಡಿಯನ್ ಆಯಿಲ್ 15 ಫ್ಯೂಯಲ್ ಸೆಲ್ ಬಸ್ ಗಳ ಪ್ರಯೋಗಗಳನ್ನು ನಡೆಸಲಿದೆ.
ನವ ದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಇಂಧನ ಕೋಶ ಚಾಲಿತ ಬಸ್ (Hydrogen fuel cell Bus) ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ನಿಗಿದತ ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ನಿಂದ ಚಾಲಿತ 15 ಬಸ್ ಗಳ ಕಾರ್ಯಾಚರಣೆ ನಡೆಯಲಿದೆ. ಇಂಡಿಯನ್ ಆಯಿಲ್ ಸಂಸ್ಥೆಯು ಪ್ರಯೋಗಾರ್ಥವಾಗಿ ಈ ಬಸ್ಗಳ ಸಂಚಾರವನ್ನು ನಡೆಸಲಿದೆ. ಇಂಡಿಯಾ ಗೇಟ್ ನಲ್ಲಿ ಮೊದಲ ಎರಡು ಫ್ಯೂಯಲ್ ಸೆಲ್ ಬಸ್ಗಳಿಗೆ ಚಾಲನೆ ಸಿಗಲಿದೆ.
ಈ ಯೋಜನೆಯು ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಫ್ಯೂಯಲ್ ಸೆಲ್ ಬಸ್ ಕಾರ್ಯಾಚರಣೆಗಾಗಿ 350 ಬಾರ್ ಒತ್ತಡದಲ್ಲಿ ಗ್ರೀನ್ ಹೈಡ್ರೋಜನ್ ಒದಗಿಸುವ ಭಾರತದ ಮೊದಲ ಯೋಜನೆಯಾಗಿದೆ. ಇಂಡಿಯನ್ ಆಯಿಲ್ ಫರಿದಾಬಾದ್ನಲ್ಲಿರುವ ತನ್ನ ಆರ್ &ಡಿ ಕ್ಯಾಂಪಸ್ನಲ್ಲಿ ಇಂಧನ ತುಂಬಿಸುವ ಸೌಲಭ್ಯವನ್ನು ಸ್ಥಾಪಿಸಿದೆ, ಇದು ಸೌರ ಪಿವಿ ಫಲಕಗಳನ್ನು ಬಳಸಿಕೊಂಡು ವಿದ್ಯುದ್ವಿಭಜನೆಯ ಮೂಲಕ ಉತ್ಪಾದಿಸಿದ ಹಸಿರು ಹೈಡ್ರೋಜನ್ ಅನ್ನು ತುಂಬಿಸಲಿದೆ.
ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ಉತ್ಪಾದಿಸುವ ಹಸಿರು ಹೈಡ್ರೋಜನ್ ಅನ್ನು ಕಡಿಮೆ ಇಂಗಾಲದ ಇಂಧನ ಮತ್ತು ಆಮದು ಮಾಡಲಾಗುವ ಪೆಟ್ರೋಲಿಯಂ ಇಂಧನಗಳಿಗೆ ಪರ್ಯಾಯವೆಂದು ಹೇಳಲಾಗಿದೆ . ಇದು ಭಾರತದ ಹೇರಳವಾದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ. ಪೆಟ್ರೋಲಿಯಂ ಸಂಸ್ಕರಣೆ, ರಸಗೊಬ್ಬರ ಉತ್ಪಾದನೆ ಮತ್ತು ಉಕ್ಕು ಉತ್ಪಾದನೆಯಂತಹ ಕ್ಷೇತ್ರಗಳಿಗೂ ಪೂರಕವಾಗಿದೆ.
ಇದನ್ನೂ ಓದಿ : Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
ಸಂಭಾವ್ಯ ಇಂಧನ, ಶೂನ್ಯ ಮಾಲಿನ್ಯ
ಇ-ಮೊಬಿಲಿಟಿ ಕ್ಷೇತ್ರದಲ್ಲಿ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನವು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಹೈಡ್ರೋಜನ್ ಕೋಶಗಳನ್ನು ಇಂಧನವಾಗಿ ಪರಿವರ್ತಿಸುವ ತಾಂತ್ರಿಕತೆ ಇದಾಗಿದೆ. ಇಂಧನ ಕೋಶಗಳಲ್ಲಿನ ಎಲೆಕ್ಟ್ರೋ-ರಾಸಾಯನಿಕ ಪ್ರಕ್ರಿಯೆಯು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕರೆಂಟ್ ಮೂಲಕ ಬಸ್ಗಳಲ್ಲಿ ಅಳವಡಿಸಿರುವ ಬ್ಯಾಟರಿಗಳನ್ನು ಚಾರ್ಜ್ ಮಾಡಲಾಗುತ್ತದೆ. ಅದರ ಮೂಲಕ ಬಸ್ನ ಮೋಟಾರ್ಗೆ ಚಾಲನೆ ನೀಡಲಾಗುತ್ತದೆ.
ಬ್ಯಾಟರಿ ಚಾಲಿತ ವಾಹನಗಳಿಗೆ ಹೋಲಿಸಿದರೆ ಫ್ಯೂಯಲ್ ಸೆಲ್ ವಾಹನಗಳು ಕಡಿಮೆ ಸಮಯದಲ್ಲಿ ಇಂಧನ ತುಂಬಿಸುವ ಅನುಕೂಲಗಳನ್ನು ಹೊಂದಿವೆ. ಹೈಡ್ರೋಜನ್ ಅನಿಲವನ್ನು ಹೆಚ್ಚಿನ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ 350 ಬಾರ್ನಲ್ಲಿ ಇರುತ್ತದೆ. ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್ ಮಾಡಲೆಂದು ದೀರ್ಘ ಕಾಲ ನಿಲ್ಲಿಸಬೇಕಾಗುತ್ತದೆ. ಆದರೆ, ಇದರಲ್ಲಿ ಪೆಟ್ರೋಲ್ನಂತೆಯೇ ಹೈಡ್ರೋಜನ್ ತುಂಬಿಸಬಹುದಾಗಿದೆ.
ಈ ಮೊದಲ ಎರಡು ಬಸ್ಸುಗಳು ಬಿಡುಗಡೆಯಾದ ನಂತರ, ದೀರ್ಘಕಾಲೀನ ಕಾರ್ಯಕ್ಷಮತೆ ಮತ್ತು ಬಾಳಿಕೆಯನ್ನು ಪರಿಶೀಲಿಸಲು 300,000 ಕಿಲೋಮೀಟರ್ ಸಂಚಾರ ನಡೆಸಲಿದೆ. ಇದು ಶೂನ್ಯ ಹೊರ ಸೂಸುವಿಕೆಯನ್ನು ಹೊಂದಿದೆ.
-
ಕರ್ನಾಟಕ23 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ9 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ13 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ವೈರಲ್ ನ್ಯೂಸ್4 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಅಂಕಣ16 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ23 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
South Cinema6 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!