Site icon Vistara News

ಉತ್ತರಪ್ರದೇಶದಲ್ಲಿ 80,000 ಕೋಟಿ ರೂ. ವೆಚ್ಚದ 1,406 ಯೋಜನೆಗಳಿಗೆ ಪ್ರಧಾನಿ ಮೋದಿ ಇಂದು ಶಂಕುಸ್ಥಾಪನೆ

modi yogi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶದಲ್ಲಿ ಶುಕ್ರವಾರ 80,000 ಕೋಟಿ ರೂ. ವೆಚ್ಚದ 1,406 ಯೋಜನೆಗಳಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

” ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಉತ್ತರಪ್ರದೇಶ ಹೊಸ ಉತ್ತರಪ್ರದೇಶವಾಗುತ್ತಿದೆ. ಹೂಡಿಕೆಗೆ ದೇಶದಲ್ಲೇ ಉತ್ತಮ ತಾಣವಾಗುತ್ತಿದೆ. ಹೂಡಿಕೆದಾರರ ಚಿತ್ತ ಉತ್ತರಪ್ರದೇಶದ ಕಡೆಗೆ ಹರಿದಿದೆ. ಇದಕ್ಕೆ ಈ ಯೋಜನೆಗಳ ಶಂಕುಸ್ಥಾಪನೆಯೇ ಸಾಕ್ಷಿಯಾಗಿದೆʼʼ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 11 ಗಂಟೆಗೆ ಲಖನೌಗೆ ತಲುಪಲಿದ್ದು, ಉತ್ತರಪ್ರದೇಶ ಹೂಡಿಕೆದಾರರ ಶೃಂಗದ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಕೃಷಿ, ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ, ಎಂಎಸ್‌ಎಂಇ, ಉತ್ಪಾದನೆ, ನವೀಕರಿಸಬಹುದಾದ ಇಂಧನ, ರಕ್ಷಣೆ, ಏರೊಸ್ಪೇಸ್, ಜವಳಿ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉತ್ತರಪ್ರದೇಶವನ್ನು ಒಂದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನಾಗಿಸಲು ಇದು ಮುಖ್ಯ.

ಕಳೆದ ಐದು ವರ್ಷಗಳಲ್ಲಿ ಉತ್ತರಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿಗಳು ಭಾರಿ ಹೂಡಿಕೆಯನ್ನು ಮಾಡಿವೆ. ಎಲೆಕ್ಟ್ರಾನಿಕ್ಸ್‌ ಮತ್ತು ಆಹಾರ ಸಂಸ್ಕರಣೆ ವಲಯದ ಉದ್ದಿಮೆಗಳೂ ತಲೆ ಎತ್ತಿಕೊಂಡಿವೆ.

Exit mobile version