Site icon Vistara News

Narendra Modi | ಹಬ್ಬಗಳಲ್ಲಿ ಆತ್ಮೀಯರಿಗೆ ಇದನ್ನೇ ಗಿಫ್ಟ್‌ ಕೊಡಿ ಎಂದ ಮೋದಿ, ಯಾವುದು ಆ ಉಡುಗೊರೆ?

Modi

ಗಾಂಧಿನಗರ: ದೇಶದಲ್ಲಿ ಖಾದಿ ಉತ್ಪನ್ನಗಳ ಬಳಕೆ ಹೆಚ್ಚಿಸಬೇಕು ಎಂದಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಮುಂಬರುವ ಹಬ್ಬಗಳ ವೇಳೆ ಆತ್ಮೀಯರಿಗೆ, ಪ್ರೀತಿ ಪಾತ್ರರಿಗೆ ಖಾದಿ ಉತ್ಪನ್ನಗಳನ್ನೇ ಉಡುಗೊರೆಯಾಗಿ ನೀಡಿ ಎಂದು ಕರೆ ನೀಡಿದರು.

ಗುಜರಾತ್‌ನ ಸಬರಮತಿಯಲ್ಲಿ ನಡೆದ ಖಾದಿ ಉತ್ಸವದಲ್ಲಿ ಮಾತನಾಡಿದ ಅವರು, “ವೋಕಲ್‌ ಫಾರ್‌ ಲೋಕಲ್‌ ಅಭಿಯಾನದ ಭಾಗವಾಗಿ ಎಲ್ಲರೂ ಖಾದಿ ಉತ್ಪನ್ನಗಳ ಬಳಕೆ ಹೆಚ್ಚಿಸಬೇಕು. ದೇಶೀಯ ಉತ್ಪನ್ನಗಳ ಬಳಕೆಯಿಂದ ದೇಶೀಯವಾಗಿಯೇ ಹೆಚ್ಚಿನ ಅನುಕೂಲವಾಗುತ್ತದೆ. ಹಾಗಾಗಿ, ಎಲ್ಲರೂ ಖಾದಿಗೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದು ಹೇಳಿದರು.

ಖಾದಿಯು ಆರೋಗ್ಯಕ್ಕೆ ಹೇಗೆ ಅನುಕೂಲ ಎಂಬುದನ್ನು ಮೋದಿ ಹೇಳಿದರು. “ಕೆಲವೊಂದು ರಾಷ್ಟ್ರಗಳಲ್ಲಿ ತಾಪಮಾನ ಜಾಸ್ತಿ ಇರುತ್ತದೆ. ಆದರೆ, ತಾಪಮಾನ ಹೆಚ್ಚಿರುವಾಗ ಖಾದಿ ಬಟ್ಟೆ ಧರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅಷ್ಟಕ್ಕೂ ನಮ್ಮ ದೇಶದ ಖಾದಿಯು ಜಾಗತಿಕ ಮಟ್ಟದಲ್ಲಿ ಬೆಳೆಯಬಹುದು. ಅದಕ್ಕೆ ಎಲ್ಲರ ಸಹಕಾರ, ಸಹಭಾಗಿತ್ವ ಅಗತ್ಯ” ಎಂದರು.

ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಸಬರಮತಿಯಲ್ಲಿ ಖಾದಿ ಉತ್ಸವ ಆಯೋಜಿಸಲಾಗಿದೆ. ಉತ್ಸವದಲ್ಲಿ ಸುಮಾರು ೭,೫೦೦ ಖಾದಿ ಕಲಾವಿದರು ಏಕಕಾಲಕ್ಕೆ ಚರಕ ತಿರುಗಿಸುವ ಮೂಲಕ ದಾಖಲೆ ಬರೆದರು. ಗುಜರಾತ್‌ ಭೇಟಿ ವೇಳೆ ಮೋದಿ ಅವರು ಅಟಲ್‌ ಬ್ರಿಡ್ಜ್‌ಗೂ ಭೇಟಿ ನೀಡಿದರು.

ಇದನ್ನೂ ಓದಿ | Independence Day | ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ ಡಿ.ಕೆ. ಶಿವಕುಮಾರ್‌

Exit mobile version