Site icon Vistara News

PM Narendra Modi: ದೇಶದಿಂದ ಜಾತೀಯತೆ, ಪ್ರಾದೇಶಿಕವಾದ ಕಿತ್ತೊಗೆಯಲು ಪ್ರಧಾನಿ ನರೇಂದ್ರ ಮೋದಿ ಕರೆ

PM Narendra Modi calls for rooting out casteism, regionalism

ನವದೆಹಲಿ: ದಿಲ್ಲಿಯ ರಾಮಲೀಲಾ ಮೈದಾನದಲ್ಲಿ (Ram Leela Maidan in Delhi) ಆಯೋಜಿಸಲಾಗಿದ್ದ ದಸರಾ ಕಾರ್ಯಕ್ರಮದಲ್ಲಿ (Dussehra Event) ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಸಮಾಜದಿಂದ ಜಾತೀಯತೆ (casteism) ಮತ್ತು ಪ್ರಾದೇಶಿಕವಾದವನ್ನು (regionalism) ಕಿತ್ತೊಗೆಯಬೇಕು. ಅಲ್ಲದೇ, ಕನಿಷ್ಠ ಒಂದು ಬಡಕುಟುಂಬದ ಅಭಿವೃದ್ಧಿ ಸೇರಿದಂತೆ 10 ಪ್ರತಿಜ್ಞೆಗಳನ್ನು ಕೈಗೊಳ್ಳಲು ಜನರಿಗೆ ಕರೆ ನೀಡಿದರು.

ಇಂದು ರಾವಣ ದಹನ ಮಾಡಲಾಗುತ್ತದೆ. ಇದು ಕೇವಲ ರಾವಣನ ಪ್ರತಿಕೃತಿ ದಹಿಸುವುದಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಭಾರತಮಾತೆಯನ್ನು ಜಾತಿ ಮತ್ತು ಪ್ರಾದೇಶಿಕವಾದ ಹೆಸರಿನಲ್ಲಿ ನಾಶ ಮಾಡುತ್ತಿರುವ ಶಕ್ತಿಗಳ ದಹನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: PM Narendra Modi: ಆರು ತಿಂಗಳಲ್ಲಿ ಜನಕಲ್ಯಾಣ ಯೋಜನೆ ಜಾರಿ ಮಾಡಿ! ಅಧಿಕಾರಿಗಳಿಗೆ ಮೋದಿ ಟಾರ್ಗೆಟ್

ವಿಜಯದಶಮಿ ಹಬ್ಬವು ರಾಷ್ಟ್ರದ ಪ್ರತಿಯೊಂದು ಅನಿಷ್ಟದ ವಿರುದ್ಧ ದೇಶಭಕ್ತಿಯ ವಿಜಯದ ಹಬ್ಬವಾಗಬೇಕು, ಸಮಾಜದಲ್ಲಿನ ಅನಿಷ್ಟಗಳು ಮತ್ತು ತಾರತಮ್ಯವನ್ನು ತೊಡೆದುಹಾಕಲು ನಾವು ಪ್ರತಿಜ್ಞೆ ಮಾಡಬೇಕು. ನಾವು ಹೊಸ ಶಕ್ತಿ ಮತ್ತು ಹೊಸ ಸಂಕಲ್ಪಗಳೊಂದಿಗೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತೇವೆ. ನಾವೆಲ್ಲರೂ ಸೇರಿ ಶ್ರೇಷ್ಠ ಭಾರತ ನಿರ್ಮಾಣ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಸುದೀರ್ಘ ಸಮಯದ ಕಾಯುವಿಕೆಯ ಬಳಿಕ ನಾವು ಇಂದು ಅಯೋಧ್ಯೆಯಲ್ಲಿ ರಾಮ ಮಂದರಿ ನಿರ್ಮಾಣವನ್ನು ನೋಡುತ್ತಿದ್ದೇವೆ. ಇದು ನಮ್ಮ ಸಹನೆಯ ವಿಜಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಇದೇ ವೇಳೆ ಅವರು ಇಸ್ರೋ ಸಾಧನೆಯನ್ನು ಪ್ರಸ್ತಾಪಿಸಿ, ನಾವು ಈಗ ಚಂದ್ರನನ್ನು ತಲುಪಿದ್ದೇವೆ. ನಾವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಲಿದ್ದೇವೆ. ಕೆಲವು ವಾರಗಳ ಹಿಂದೆಯಷ್ಟೇ ನಾವು ಹೊಸ ಸಂಸತ್ ಭವನಕ್ಕೆ ಪ್ರವೇಶ ಮಾಡಿದ್ದೇವೆ. ರಾಜಕೀಯದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವುದಕ್ಕಾಗಿ ಸಂಸತ್ ನಾರಿ ಶಕ್ತಿ ವಂದನ್ ಅಧಿನಿಯಮ ವಿಧೇಯಕವನ್ನು ಪಾಸು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version