Site icon Vistara News

PM Narendra Modi | ಜಗತ್ತಿನ ಅತಿ ಉದ್ದದ ರಿವರ್ ಕ್ರೂಸ್‌ ಎಂವಿ ಗಂಗಾ ವಿಲಾಸ್‌ಗೆ ವಾರಾಣಸಿಯಲ್ಲಿ ಪ್ರಧಾನಿ ಚಾಲನೆ

PM Narendra Modi @ MV Ganga Vilas

ನವದೆಹಲಿ: ಜಗತ್ತಿನ ಅತಿ ಉದ್ದದ ನದಿ ಕ್ರೂಸ್ ಎನಿಸಿಕೊಂಡಿರುವ, ಎಂವಿ ಗಂಗಾ ವಿಲಾಸ್ (MV Ganga Vilas) ಕ್ರೂಸ್‌ಗೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ಚಾಲನೆ ನೀಡಿದರು. ಇದೇ ವೇಳೆ, ಪ್ರಧಾನಿ ಮೋದಿ ಅವರು ಟೆಂಟ್ ಸಿಟಿಯನ್ನೂ ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ವಾರಾಣಸಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ಈ ಕ್ರೂಸ್‌ನೊಂದಿಗೆ ಪೂರ್ವ ಭಾರತದ ಅನೇಕ ಸ್ಥಳಗಳು ಈಗ ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ಕಾಣಿಸಿಕೊಳ್ಳುತ್ತವೆ. ವಿಪರ್ಯಾಸ ಎಂದರೆ, ಸ್ವಾತಂತ್ರ್ಯದ ನಂತರ ಗಂಗಾನದಿಯ ದಡವು ಅಭಿವೃದ್ಧಿಯಾಗಲಿಲ್ಲ ಮತ್ತು ಗಂಗಾನದಿಯ ಉದ್ದಕ್ಕೂ ವಾಸಿಸುವ ಸಾವಿರಾರು ಜನರು ಉದ್ಯೋಗಕ್ಕಾಗಿ ವಲಸೆ ಹೋಗಬೇಕಾಯಿತು ಎಂದು ಪ್ರಧಾನಿ ಅವರು ಇದೇ ವೇಳೆ ಹೇಳಿದರು.

ಎಂವಿ ಗಂಗಾ ವಿಲಾಸ್ ಭಾರತದಲ್ಲಿ ತಯಾರಾದ ಮೊದಲ ವಿಹಾರ ನೌಕೆಯಾಗಿದೆ. ಇದು 51 ದಿನಗಳಲ್ಲಿ 3,200 ಕಿ.ಮೀ ಕ್ರಮಿಸಲಿದೆ. ಮೊದಲ ಪ್ರಯಾಣವನ್ನು ಕೈಗೊಳ್ಳಲಿರುವ ಸ್ವಿಟ್ಜರ್ಲೆಂಡ್‌ನ 32 ಪ್ರವಾಸಿಗರನ್ನು ವಾರಾಣಸಿ ಬಂದರಿನಲ್ಲಿ ಹೂಮಾಲೆ ಮತ್ತು ಶೆಹನಾಯಿ ನಾದದೊಂದಿಗೆ ಸ್ವಾಗತಿಸಲಾಯಿತು. ಅವರು ಕ್ರೂಸ್‌‌ನಲ್ಲಿ ತೆರಳುವ ಮೊದಲು ವಾರಣಾಸಿಯ ವಿವಿಧ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಚಲಿಸುವ ಈ ಪಂಚತಾರಾ ಹೋಟೆಲ್, 36 ಪ್ರವಾಸಿಗರ ಸಾಮರ್ಥ್ಯ 18 ಸೂಟ್‌ಗಳನ್ನು ಹೊಂದಿದೆ. ಆಧುನಿಕ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ ಮತ್ತು 1.4 ಮೀಟರ್ ಡ್ರಾಫ್ಟ್ ಅಗತ್ಯವಿದೆ ಎಂದು ಕ್ರೂಸ್‌ನನ ನಿರ್ದೇಶಕ ರಾಜ್ ಸಿಂಗ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ | National Youth Festival | ಪ್ರಧಾನಿ ಮೋದಿಯೆದುರು ಅನಾವರಣಗೊಂಡ ಸಾಂಸ್ಕೃತಿಕ ವೈಭವದ ನೋಟ ಇಲ್ಲಿದೆ

Exit mobile version