ವಾರಾಣಸಿ: ವಾರಾಣಸಿ (Varanasi) ಮತ್ತು ದಿಲ್ಲಿ(New Delhi) ನಡುವೆ ಸಂಪರ್ಕ ಕಲ್ಪಿಸುವ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (Vande Bharat Train) ಸೋಮವಾರ ಪ್ರಧಾನಿ ನರೇಂದ್ರ ಮೋದಿ (PM Narenda Modi) ಅವರು ಹಸಿರು ನಿಶಾನೆ ತೋರಿಸಿದರು. ಇದೇ ವೇಳೆ, ದೋಹ್ರಿಘಾಟ್-ಮೌ ಮೆಮು ರೈಲು ಮತ್ತು ಇತ್ತೀಚೆಗೆ ಉದ್ಘಾಟನೆಯಾಗ ಸರಕು ಸಾಗಣೆಯ ಕಾರಿಡಾರ್‌ಗೆ ಮೀಸಲಾದ ಎರಡು ದೀರ್ಘ ಪ್ರಯಾಣದ ಗೂಡ್ಸ್ ಟ್ರೈನ್‌ಗೆ (Goods Train) ಚಾಲನೆ ನೀಡಲಾಯಿತು.
ವಾರಣಾಸಿಯಿಂದ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸುವುದರಿಂದ ಪ್ರಯಾಗ್‌ರಾಜ್, ಕಾನ್ಪುರ ಮತ್ತು ನವದೆಹಲಿಗೆ ಹೋಗುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ವೇಗದ ಪ್ರಯಾಣದ ಜತೆಗೆ ಮತ್ತು ಆಧುನಿಕ ಪ್ರಯಾಣದ ಆಯ್ಕೆಯನ್ನು ಒದಗಿಸುವ ಪ್ರಯೋಜನವನ್ನು ನಿರೀಕ್ಷಿಸಲಾಗಿದೆ. ಈ ಉಪಕ್ರಮವು ಪ್ರಯಾಣಿಕರ ಸಮಯವನ್ನು ಉಳಿಸುವುದಲ್ಲದೆ, ಈ ಪ್ರದೇಶದಲ್ಲಿ ಸಾಂಸ್ಕೃತಿಕ, ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ.
Hon'ble PM Shri @narendramodi ji flags off four trains at the Vikas Bharat Sankalp Yatra in Varanasi.
— Darshana Jardosh (@DarshanaJardosh) December 18, 2023
Hon'ble PM flags off the Varanasi-New Delhi Vande Bharat Express train. #VandeBharatExpress #ViksitBharatSankalpYatra pic.twitter.com/1rJnfw8KJ5
ಆಧ್ಯಾತ್ಮಿಕ ನಗರವಾದ ವಾರಣಾಸಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುವ ರೈಲು ಕಾನ್ಪುರದ ಪ್ರಯಾಗರಾಜ್ ಮೂಲಕ ಹಾದು ರಾಷ್ಟ್ರ ರಾಜಧಾನಿ ನವದೆಹಲಿಯನ್ನು ತಲುಪುತ್ತದೆ. ಈ ಹೊಸ ಸೇವೆಯು ವಿಶೇಷವಾಗಿ ಪ್ರಯಾಗ್‌ರಾಜ್‌ಗೆ ಹೋಗುವ ಯಾತ್ರಾರ್ಥಿಗಳಿಗೆ ಮತ್ತು ಕೈಗಾರಿಕಾ ಕೇಂದ್ರವಾದ ಕಾನ್ಪುರ ಮತ್ತು ನವದೆಹಲಿಯ ನಡುವೆ ಪ್ರಯಾಣಿಸುವ ವೃತ್ತಿಪರರಿಗೆ ಹೆಚ್ಚು ಲಾಭ ಒದಗಿಸಲಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನಿಯಮಿತ ಕಾರ್ಯಾಚರಣೆಯು 2023 ಡಿಸೆಂಬರ್ 20ರಿಂದ ಪ್ರಾರಂಭವಾಗಲಿದೆ. ವಾರಣಾಸಿಯಿಂದ ಬೆಳಗ್ಗೆ 6 ಕ್ಕೆ ಹೊರಡುವ ರೈಲು, 07:34 ಕ್ಕೆ ಪ್ರಯಾಗರಾಜ್, 09:30ಕ್ಕೆ ಕಾನ್ಪುರ್ ಸೆಂಟ್ರಲ್ ಮತ್ತು ಅಂತಿಮವಾಗಿ, ನವದೆಹಲಿಗೆ ಮಧ್ಯಾಹ್ನ 2.05ಕ್ಕೆ ತಲುಪಲಿದೆ.
ಈ ಸುದ್ದಿಯನ್ನೂ ಓದಿ: Vande Bharat Express: ಶೀಘ್ರ ಬೆಂಗಳೂರು-ಕೊಯಮತ್ತೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
ಈ ರೈಲಿನ ರಿಟರ್ನ್ ಜರ್ನಿಯು ನವದಿಲ್ಲಿಯಿಂದ ಮಧ್ಯಾಹ್ನ 3:00 ಗಂಟೆಗೆ ಶುರುವಾಗುತ್ತದೆ. ಕಾನ್ಪುರ ಸೆಂಟ್ರಲ್ ಅನ್ನು 7:12 ಗಂಟೆಗೆ ತಲುಪುತ್ತದೆ, ರಾತ್ರಿ 9:15 ಕ್ಕೆ ಪ್ರಯಾಗರಾಜ್ ಮತ್ತು 11:05 ಗಂಟೆಗೆ ವಾರಣಾಸಿಯಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸುತ್ತದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಪ್ರಯಾಣಿಕರಿಗೆ ತ್ವರಿತ ಮತ್ತು ಆರಾಮದಾಯಕ ಪ್ರಯಾಣ ಅನುಭವವನ್ನು ಒದಗಿಸುತ್ತದೆ. ಈ ಆಧುನಿಕ ಸೆಮಿ-ಹೈ-ಸ್ಪೀಡ್ ರೈಲು ಭಾರತೀಯ ರೈಲ್ವೇಯ ಉನ್ನತ ವಿನ್ಯಾಸಗಳು, ಒಳಾಂಗಣಗಳು ಹೊಸ ಅನುಭವವನ್ನು ನೀಡುತ್ತವೆ.
ಈ ಸುದ್ದಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.