ಕನ್ಯಾಕುಮಾರಿ: ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತ ತಲುಪಿದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲೆ ಸ್ಮಾರಕದಲ್ಲಿ (Vivekananda Rock Memorial) 45 ಗಂಟೆಗಳ ಧ್ಯಾನ ಕೈಗೊಳ್ಳುತ್ತಿದ್ದಾರೆ. ಸುಮಾರು 131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನದಲ್ಲಿ (Modi Meditation) ತೊಡಗಿಕೊಂಡಿದ್ದಾರೆ. ಇನ್ನು ಮೋದಿ ಅವರು ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸುವುದಿಲ್ಲ ಎಂದು ತಿಳಿದುಬಂದಿದೆ.
Tamil Nadu | Prime Minister Narendra Modi arrived at Vivekananda Rock Memorial in Kanyakumari
— ANI (@ANI) May 30, 2024
He will meditate from 30th May evening to 1st June evening.
PM Modi will meditate day and night at the same place where Swami Vivekanand did meditation, at the Dhyan Mandapam. pic.twitter.com/s3oX46ChZG
ಹೌದು, ನರೇಂದ್ರ ಮೋದಿ ಅವರು ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸುವುದಿಲ್ಲ. ಹಣ್ಣುಗಳನ್ನು ಕೂಡ ಅವರು ಸೇವಿಸುವುದಿಲ್ಲ. ಎರಡು ದಿನವೂ ಅವರು ಪಾನೀಯ ಮಾತ್ರ ಸೇವಿಸಲಿದ್ದಾರೆ. ಜ್ಯೂಸ್, ಹಾಲಿನಲ್ಲಿಯೇ ಎರಡು ದಿನ ಕಳೆಯಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಜನವರಿಯಲ್ಲಿ ರಾಮಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿಯೂ ನರೇಂದ್ರ ಮೋದಿ ಅವರು 11 ದಿನಗಳ ಉಪವಾಸ ಕೈಗೊಂಡಿದ್ದರು. ಹಾಸಿಗೆಯ ಮೇಲೆ ಮಲಗುವುದನ್ನು ನಿಲ್ಲಿಸಿದ್ದರು. ನೆಲದ ಮೇಲೆ ಬಟ್ಟೆ ಹಾಸಿಕೊಂಡು ನಿದ್ದೆ ಮಾಡಿದ್ದರು. ಈ ಅವಧಿಯಲ್ಲಿ ಅವರು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸಿದ್ದರು. ಹಣ್ಣುಗಳನ್ನು ಮಾತ್ರ ಸೇವಿಸಿದ್ದರು.
ಭಗವತಿ ಅಮ್ಮನ್ ದೇವಾಲಯಕ್ಕೆ ಭೇಟಿ
#WATCH | Prime Minister Narendra Modi offers prayer at Bhagavathy Amman Temple in Kanyakumari, Tamil Nadu
— ANI (@ANI) May 30, 2024
He will meditate from 30th May evening to 1st June evening.
PM Modi will meditate day and night at the same place where Swami Vivekanand did meditation, at the Dhyan… pic.twitter.com/xKqZpnuQbV
ನರೇಂದ್ರ ಮೋದಿ ಅವರು ಕೇರಳ ರಾಜಧಾನಿ ತಿರುವನಂತಪುರಂನಿಂದ ಕನ್ಯಾಕುಮಾರಿಗೆ ಆಗಮಿಸಿದರು. ಧ್ಯಾನ ಆರಂಭಿಸುವ ಮೊದಲು ಅವರು ಭಗವತಿ ಅಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಮೋದಿ ಅವರು ಧ್ಯಾನ ಆರಂಭಿಸಿದರು. ಮೋದಿ ಅವರು ಎರಡು ದಿನ ಧ್ಯಾನ ಮಾಡುವ ಹಿನ್ನೆಲೆಯಲ್ಲಿ ಸ್ಮಾರಕದ ಸುತ್ತಲೂ 2 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮೋದಿ ಈ ಸ್ಥಳ ಆಯ್ಕೆ ಮಾಡಿದ್ದು ಯಾಕೆ?
ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದ ಅವರನ್ನು ತಮ್ಮ ಜೀವನಕ್ಕೆ ಆದರ್ಶ ಎಂದು ಪರಿಗಣಿಸುತ್ತಾರೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿರುವ ರಾಮಕೃಷ್ಣ ಮಿಷನ್‌ನ ಸದಸ್ಯರೂ ಆಗಿದ್ದಾರೆ. ಕಳೆದ ವರ್ಷ ರಾಮಕೃಷ್ಣ ಮಿಷನ್‌ನ 125 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮೋದಿ, ಸ್ವಾಮಿ ವಿವೇಕಾನಂದರು ಭಾರತದ ಬಗ್ಗೆ ಕಂಡಿರುವ ಕನಸನ್ನು ನನಸು ಮಾಡಲು ಭಾರತವು ಕೆಲಸ ಮಾಡುವುದನ್ನು ಅವರು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದರು. ಇದೇ ಕಾರಣಕ್ಕಾಗಿ ವಿವೇಕಾನಂದ ರಾಕ್ ಮೆಮೋರಿಯಲ್‌ನಲ್ಲಿ ಮೋದಿ ಅವರು ಧ್ಯಾನ ಮಾಡಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Mumbai Satta Bazar: ಮೋದಿ ಹ್ಯಾಟ್ರಿಕ್ ಗ್ಯಾರಂಟಿ ಎಂದ ಮುಂಬೈ ಸಟ್ಟಾ ಬಜಾರ್; ಕಾಂಗ್ರೆಸ್‌ಗೆ ಎಷ್ಟು ಕ್ಷೇತ್ರ?