Site icon Vistara News

PM Narendra Modi | DefExpo-2022ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

PM Narendra Modi

ಗಾಂಧಿನಗರ: ಗುಜರಾತ್‌ನ ರಾಜಧಾನಿ ಗಾಂಧಿನಗರದಲ್ಲಿ ಆಯೋಜಿಸಲಾಗಿರುವ DefExpo-2022 ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಾಲನೆ ನೀಡಿದರು. ಭಾರತೀಯ ರಕ್ಷಣಾ ವಲಯಕ್ಕೆ ಬಲ ನೀಡುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಅತಿದೊಡ್ಡ ರಕ್ಷಣಾ ಪ್ರದರ್ಶನವನ್ನು ಗಾಂಧಿನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

Path to Pride ಥೀಮ್‌ ಆಧಾರದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಪ್ರದರ್ಶನವು 12ನೇ ಆವೃತ್ತಿಯಾಗಿದೆ. ಇಂಡಿಯಾ ಪೆವಿಲಿಯನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ದೇಶಿ ತರಬೇತುದಾರ ಏರ್‌ಕ್ರಾಫ್ಟ್ ಎಚ್‌ಟಿಟಿ-40 ಅನಾವರಣಗೊಳಿಸಿದರು. ಈ ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ವಿನ್ಯಾಸಗೊಳಿಸಿ, ಅಭಿವೃದ್ಧಿಗೊಳಿಸಿದೆ. ಈ ಏರ್‌ಕ್ರಾಫ್ಟ್ ಸ್ವದೇಶಿ ನಿರ್ಮಿತ ವ್ಯವಸ್ಥೆಯನ್ನು ಹೊಂದಿದ್ದು ಮಾತ್ರವಲ್ಲದೇ, ಪೈಲಟ್ ಫ್ರೆಂಡ್ಲಿ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂದು ಪ್ರಧಾನಿ ಕಾರ್ಯಾಲಯವು ಬಣ್ಣಿಸಿದೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, DefSpace ಪ್ರದರ್ಶನಕ್ಕೂ ಚಾಲನೆ ನೀಡಿದರು. ಭಾರತೀಯ ಸ್ಟಾರ್ಟ್‌ಅಪ‌್‌ಗಳು, ಕೈಗಾರಿಕೆಗಳು ಬಾಹ್ಯಾಕಾಶದಲ್ಲಿ ರಕ್ಷಣಾ ಪಡೆಗಳಿಗೆ ಅನುಕೂಲವಾಗುವ ಆವಿಷ್ಕಾರಗಳನ್ನು ಈ ಪ್ರರ್ಶನವು ಒಳಗೊಂಡಿದೆ. ಇದೇ ವೇಳೆ, DefExpoದಲ್ಲಿ ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತೀಯ ಕಂಪನಿಗಳಿಗೆ ಮೀಸಲಾಗಿರುವ ಪ್ರದರ್ಶನಕ್ಕೂ ಚಾಲನೆ ನೀಡಲಾಗಿದೆ.

ಇದನ್ನೂ ಓದಿ | 5G Technology | ಅಕ್ಟೋಬರ್ 1ರಂದು 5ಜಿ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Exit mobile version