Site icon Vistara News

Karmayogi Prarambh | ಕರ್ಮಯೋಗಿ ಪ್ರಾರಂಭ್ ಆನ್‌ಲೈನ್ ಕೋರ್ಸ್‌ಗೆ ಪಿಎಂ ಚಾಲನೆ

Modi and Karmyogi

ನವದೆಹಲಿ: ರೋಜಗಾರ್ ಮೇಳದಲ್ಲಿ ನೇಮಕವಾದ ಎಲ್ಲ ಉದ್ಯೋಗಿಗಳಿಗೆ ಕರ್ಮಯೋಗಿ ಪ್ರಾರಂಭ್ (Karmayogi Prarambh) ಮಾಡ್ಯೂಲ್ ಆನ್ಲೈನ್ ಒರಿಯೆಂಟೇಷನ್ ಕೋರ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದರು. ರೋಜಗಾರ್ ಮೇಳವು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಒದಗಿಸುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬದ್ಧತೆಯಾಗಿದೆ.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಹೊಸದಾಗಿ ನೇಮಕಗೊಂಡಿರುವ ಉದ್ಯೋಗಿಗಳಿಗೆ ಕರ್ಮಯೋಗಿ ಪ್ರಾರಂಭವು ಪರಿಚಯಾತ್ಮಕ ಆನ್‌ಲೈನ್ ಕೋರ್ಸ್ ಆಗಿದೆ. ಈ ಒರಿಯೇಂಟೇಷನ್ ಕೋರ್ಸ್‌ನಲ್ಲಿ ಸರ್ಕಾರ ನೌಕರರಿಗೆ ವೃತ್ತಿ ಸಂಹಿತೆ, ಕೆಲಸದ ವೇಳೆ ಕೈಗೊಳ್ಳಬೇಕಾದ ಕರ್ತವ್ಯವಗಳು, ಸಂಹಿತೆ, ಮಾನವ ಸಂಪನ್ಮೂಲ ಮಾಹಿತಿಗಳು, ನೌಕರರಿಗೆ ದೊರೆಯುವ ಇತರೆ ಭತ್ಯೆಗಳು, ಪ್ರಯೋಜನಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು, ಕೇಂದ್ರ ಸರ್ಕಾರದ ರೋಜಗಾರ್ ಮೇಳದ ಭಾಗವಾಗಿ ನೇಮಕವಾಗಿ ಒಟ್ಟು 71 ಸಾವಿರ ಜನರಿಗೆ ನೇಮಕಾತಿ ಪತ್ರಗಳ ವಿತರಣೆಗೆ ಚಾಲನೆ ನೀಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು. ಕೆಲವು ದಿನಗಳ ಹಿಂದೆಯೇ ಇದೇ ರೀತಿ ಸಾಮೂಹಿಕವಾಗಿ ನೇಮಕ ಪತ್ರಗಳನ್ನು ಮೋದಿ ವಿತರಿಸಿದ್ದರು.

ಇದನ್ನೂ ಓದಿ | Rozgar Mela | 10 ಲಕ್ಷ ಉದ್ಯೋಗ ನೇಮಕಾತಿ ಅಭಿಯಾನ ರೋಜ್‌ಗಾರ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ

Exit mobile version