ಲಖನೌ: ದೇಶದ ಮೊದಲ ಸೆಮಿ ಹೈಸ್ಪೀಡ್ ಎನಿಸಿರುವ, ದೇಶದ ಮೊದಲ ಪ್ರಾದೇಶಿಕ ರೈಲು ಎಂದೇ ಖ್ಯಾತಿಯಾಗುತ್ತಿರುವ ರ‍್ಯಾಪಿಡ್ ಎಕ್ಸ್ (Rapid X) ರೈಲಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ (ಅಕ್ಟೋಬರ್ 20) ಚಾಲನೆ ನೀಡಿದ್ದಾರೆ. ಕ್ಷಿಪ್ರವಾಗಿ ಉಪ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳಿಗೆ ‘ನಮೋ ಭಾರತ್’ ಎಂದು ನಾಮಕರಣ ಮಾಡಲಾಗಿದ್ದು, ಉತ್ತರ ಪ್ರದೇಶದ ಸಾಹಿಬಾಬಾದ್ ಹಾಗೂ ದುಹೈ ಡಿಪೋ ನಡುವಿನ 17 ಕಿ.ಮೀ ಪ್ರಯಾಣದ ರೈಲಿಗೆ ಮೋದಿ ಚಾಲನೆ ನೀಡಿದ್ದಾರೆ.
Prime Minister Shri @narendramodi Ji inaugurates the Delhi-Ghaziabad-Meerut RRTS Corridor. #NaMoBharat • @PMOIndia pic.twitter.com/7xqWS3Gnwb
— Vivek Thakur (@_vivekthakur) October 20, 2023
30 ಸಾವಿರ ಕೋಟಿ ರೂ. ವೆಚ್ಚ
ದೆಹಲಿಯಿಂದ ಬೇರೆ ನಗರಗಳಿಗೆ ವೇಗದ ಹಾಗೂ ಅತ್ಯಾಧುನಿಕ ರೈಲು ಸಂಪರ್ಕ ಕಲ್ಪಿಸುವ ಯೋಜನೆಯೇ ಪ್ರಾದೇಶಿಕ ಕ್ಷಿಪ್ರ ಸಾಗಣೆ ವ್ಯವಸ್ಥೆ (RRTS) ಆಗಿದೆ. ಸುಮಾರು 30 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ರ‍್ಯಾಪಿಡ್ ಎಕ್ಸ್ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸಲಿದೆ. ಮೋದಿ ಅವರು ರೈಲಿಗೆ ಚಾಲನೆ ನೀಡುವ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.
ಅತ್ಯಾಧುನಿಕ ಸೌಲಭ್ಯ
ಸ್ಟಾಂಡರ್ಡ್ ಕ್ಲಾಸ್ ಹಾಗೂ ಪ್ರೀಮಿಯಂ ಕ್ಲಾಸ್ ಬೋಗಿಗಳು ಇರಲಿದ್ದು, ಸುಮಾರು 1,700 ಪ್ರಯಾಣಿಕರು ಒಂದು ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ರೈಲಿನಲ್ಲಿ 2×2 ವ್ಯಾಪ್ತಿಯಲ್ಲಿ ಸೀಟುಗಳ ಅಳವಡಿಕೆ, ಟ್ರಾನ್ಸ್‌ವರ್ಸ್ ಸೀಟಿಂಗ್, ಲಗೇಜ್ ರ‍್ಯಾಕ್‌ಗಳು, ಸಿಸಿಟಿವಿ ಕ್ಯಾಮೆರಾಗಳು, ರೂಟ್ ಮ್ಯಾಪ್, ಆಟೋ ಕಂಟ್ರೋಲ್ ಆಂಬಿಯನ್ಸ್, ಹೀಟಿಂಗ್ ವೆಂಟಿಲೇಷನ್ ಸೇರಿ ಹಲವು ಸೌಲಭ್ಯಗಳಿವೆ. ಅಂಗವಿಕರಿಗೆ ಸ್ಟ್ರೆಚರ್‌ಗಳು, ವ್ಹೀಲ್‌ಚೇರ್‌ಗಳು, ಪ್ರತ್ಯೇಕ ಸ್ಪೇಸ್ ಕೂಡ ಬೋಗಿಗಳಲ್ಲಿ ಇವೆ.
ಇದನ್ನೂ ಓದಿ: Namo Bharat: ಮೊದಲ ಹೈ ಸ್ಪೀಡ್ ರೈಲಿಗೆ ‘ನಮೋ ಭಾರತ್’ ಎಂದು ಹೆಸರು; ಕಾಂಗ್ರೆಸ್ ಕೆಂಡ
ನರೇಂದ್ರ ಮೋದಿ ಅವರು ಮೊದಲ ಹಂತದ ಯೋಜನೆಗೆ ಶುಕ್ರವಾರ ಚಾಲನೆ ನೀಡಿದ್ದಾರೆ. ದೆಹಲಿ-ಮೀರತ್ ಆರ್‌ಆರ್‌ಟಿಎಸ್ ಯೋಜನೆಯನ್ನು ರಾಷ್ಟ್ರ ರಾಜಧಾನಿ ಪ್ರಾದೇಶಿಕ ಸಾರಿಗೆ ನಿಗಮ (NCRTC) ಜಾರಿಗೊಳಿಸುತ್ತಿದೆ. ದೆಹಲಿಯಿಂದ ಮೀರತ್‌ವರೆಗೆ ರ‍್ಯಾಪಿಡ್ ಎಕ್ಸ್ ರೈಲು ಸಂಚಾರವು 2025ರ ಜೂನ್‌ನಲ್ಲಿ ಆರಂಭವಾಗಲಿದೆ. ಒಮ್ಮೆ ಯೋಜನೆ ಪೂರ್ತಿಗೊಂಡರೆ ದೆಹಲಿಯಿಂದ ಮೀರತ್‌ಗೆ ಕೇವಲ ಒಂದು ಗಂಟೆಯಲ್ಲಿ ತೆರಳಬಹುದಾಗಿದೆ. ಈಗ ಸುಮಾರು 82 ಕಿ.ಮೀ ಪ್ರಯಾಣಕ್ಕೆ ಮೂರರಿಂದ ನಾಲ್ಕು ಗಂಟೆ ಬೇಕಾಗುತ್ತದೆ.