ವಾರಾಣಸಿ: ತಮಿಳುನಾಡು ಜನರ ಮನ ಗೆಲ್ಲುವ ಯಾವುದೇ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುವುದಿಲ್ಲ. ಇದೀಗ ಕಾಶಿಯ ನಮೋ ಘಾಟ್‌ನಲ್ಲಿ (Namo Ghat) ಕಾಶಿ ತಮಿಳು ಸಂಗಮ 2.0 (Kashi Tamil Sangam 2.0) ಕಾರ್ಯಕ್ರಮವನ್ನು ಉದ್ಘಾಟಿಸಿ, ಇದೇ ವೇಳೆ ಕನ್ಯಾಕುಮಾರಿ ಮ್ತತು ವಾರಾಣಸಿಯ ನಡುವಿನ ಕಾಶಿ ತಮಿಳು ಸಂಗಮ್ ಎಕ್ಸ್‌ಪ್ರೆಸ್ ರೈಲಿಗೆ (Kashi Tamil Sangam Express Train) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಾಲನೆ ನೀಡಿದರು.
ಎರಡು ದಿನಗಳ ಭೇಟಿಗಾಗಿ ಭಾನುವಾರ ವಾರಾಣಸಿಗೆ ಆಗಮಿಸಿದ ಪ್ರಧಾನಿ ಮೋದಿ, ನಗರ ಮತ್ತು ಪೂರ್ವಾಂಚಲ್‌ಗಾಗಿ 19,000 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 37 ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಅವರು ನಮೋ ಘಾಟ್‌ನಿಂದ ಕಾಶಿ ತಮಿಳು ಸಂಗಮಂ 2.0 ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
Kashi Tamil Sangamam is an innovative programme that celebrates India's cultural diversity and strengthens the spirit of 'Ek Bharat, Shreshtha Bharat.' @KTSangamam https://t.co/tTsjcyJspm
— Narendra Modi (@narendramodi) December 17, 2023
ತಮಿಳುನಾಡು ಮತ್ತು ಕಾಶಿ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿವೆ. ನೀವೆಲ್ಲರೂ ಇಲ್ಲಿಗೆ ಬಂದಿರುವುದು ಕೇವಲ ಅತಿಥಿಗಳಿಗಿಂತ ಹೆಚ್ಚಾಗಿ ನನ್ನ ಕುಟುಂಬದ ಸದಸ್ಯರಾಗಿದ್ದೀರಿ. ಕಾಶಿ ತಮಿಳು ಸಂಗಮಕ್ಕೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಕಾಶಿ ತಮಿಳು ಸಂಗಮಂ ‘ಏಕ್ ಭಾರತ್, ಶ್ರೇಷ್ಠ ಭಾರತ್’ನ ಸ್ಪೂರ್ತಿಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ಹೇಳಿದರು.
ತಮಿಳುನಾಡಿನಿಂದ ಕಾಶಿಗೆ ಬರುವುದೆಂದರೆ ಮಹಾದೇವನ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋದಂತೆ. ತಮಿಳುನಾಡಿನಿಂದ ಕಾಶಿಗೆ ಬರುವುದೆಂದರೆ ಮಧುರೈ ಮೀನಾಕ್ಷಿಯ ಸ್ಥಳದಿಂದ ಕಾಶಿ ವಿಶಾಲಾಕ್ಷಿಯ ಸ್ಥಳಕ್ಕೆ ಹೋಗುವುದು. ಅದಕ್ಕಾಗಿಯೇ ತಮಿಳುನಾಡಿನ ಜನರು ಮತ್ತು ಕಾಶಿಯ ಜನರ ಹೃದಯದಲ್ಲಿ ಇರುವ ಪ್ರೀತಿ ಮತ್ತು ಬಾಂಧವ್ಯ ವಿಭಿನ್ನ ಮತ್ತು ಅನನ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
‘ಕಾಶಿ ತಮಿಳು ಸಂಗಮಂ’ ಧ್ವನಿಯು ದೇಶಾದ್ಯಂತ ಮತ್ತು ಇಡೀ ಪ್ರಪಂಚದಾದ್ಯಂತ ಹರಡುತ್ತಿದೆ ಮತ್ತು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಸಂಬಂಧಿಸಿದ ಎಲ್ಲಾ ಸಚಿವಾಲಯಗಳು, ಉತ್ತರ ಪ್ರದೇಶ ಸರ್ಕಾರ ಮತ್ತು ತಮಿಳುನಾಡಿನ ಎಲ್ಲಾ ನಾಗರಿಕರನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ನಾವು ಸಂಸತ್ತಿನ ಹೊಸ ಕಟ್ಟಡವನ್ನು ಪ್ರವೇಶಿಸಿದಾಗ ‘ಒಂದು ಭಾರತ, ಅತ್ಯುತ್ತಮ ಭಾರತ’ ಎಂಬ ಭಾವನೆಯೂ ಗೋಚರಿಸಿತು. ಹೊಸ ಸಂಸತ್ ಕಟ್ಟಡದಲ್ಲಿ ಪವಿತ್ರ ಸೆಂಗೋಲ್ ಅನ್ನು ಸ್ಥಾಪಿಸಲಾಗಿದೆ. ಆದಿನಂ ಸಂತರ ಮಾರ್ಗದರ್ಶನದಲ್ಲಿ, ಇದೇ ಸೆಂಗೋಲ್ 1947ರಲ್ಲಿ ಅಧಿಕಾರದ ಹಸ್ತಾಂತರದ ಸಂಕೇತವಾಯಿತು. ಇದು ಇಂದು ನಮ್ಮ ರಾಷ್ಟ್ರದ ಆತ್ಮಕ್ಕೆ ನೀರುಣಿಸುವ ಏಕ್ ಭಾರತ್ ಶ್ರೇಷ್ಠ ಭಾರತದ ಚೈತನ್ಯದ ಹರಿವು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಕಾಶಿ ತಮಿಳು ಸಂಗಮಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಸಮಯದಲ್ಲಿ, ತಮಿಳನ್ನು ಅರ್ಥಮಾಡಿಕೊಳ್ಳುವ ಪ್ರೇಕ್ಷಕರಿಗೆ ಭಾಷಿನಿ ಮೂಲಕ ಏಕಕಾಲದಲ್ಲಿ ಎಐ ಆಧಾರಿತ ತಮಿಳು ಅನುವಾದವನ್ನು ಮಾಡಲಾದ ಹೊಸ ಪ್ರಯೋಗವನ್ನು ಪ್ರಯತ್ನಿಸಲಾಯಿತು. ಅದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ವಾರಾಣಸಿಯ ಸಂಸದನಾಗಿ ಈ ಕಾರ್ಯಕ್ರಮಕ್ಕೆ ಸಮಯ ನೀಡುವ ಜವಾಬ್ದಾರಿ ನನ್ನ ಮೇಲಿದೆ. 140 ಕೋಟಿ ನಾಗರಿಕರು ಸಂಕಲ್ಪ ಮಾಡಿದರೆ 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: PM Narendra Modi: ಬೆಂಗಳೂರಿನಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಡಿದ ಪ್ರಧಾನಿ ನರೇಂದ್ರ ಮೋದಿ