ಲಖನೌ: ಉತ್ತರ ಪ್ರದೇಶದ ಸಾಂಭಾಲ್ ಜಿಲ್ಲೆಯಲ್ಲಿ ಕಲ್ಕಿ ಧಾಮ ದೇವಾಲಯ (Kalki Dham Temple) ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ (ಫೆಬ್ರವರಿ 19) ಶಂಕುಸ್ಥಾಪನೆ (Foundation Stone) ನೆರವೇರಿಸಿದ್ದಾರೆ. ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್ ಚೇರ್ಮನ್ ಆಚಾರ್ಯ ಪ್ರಮೋದ್ ಕೃಷ್ಣಂ ಅವರ ನೇತೃತ್ವದಲ್ಲಿ ದೇವಾಲಯ ನಿರ್ಮಾಣವಾಗುತ್ತಿದೆ. ಹಾಗಾದರೆ, ದೇವಾಲಯದ ವೈಶಿಷ್ಟ್ಯಗಳೇನು ಎಂಬುದರ ಮಾಹಿತಿ ಇಲ್ಲಿದೆ.
#WATCH | Uttar Pradesh: Prime Minister Narendra Modi attends the foundation stone laying ceremony of Hindu shrine Kalki Dham in Sambhal.
— ANI (@ANI) February 19, 2024
Uttar Pradesh CM Yogi Adityanath and Shri Kalki Dham Nirman Trust Chairman Acharya Pramod Krishnam also present. pic.twitter.com/pTxIn1IJof
ಕಲ್ಕಿ ಧಾಮ ದೇವಾಲಯದ ವೈಶಿಷ್ಟ್ಯಗಳು
- ಸಾಮಾನ್ಯವಾಗಿ ದೇವಾಲಯದಲ್ಲಿ ಒಂದು ಗರ್ಭಗುಡಿ ಇರುತ್ತದೆ. ಆದರೆ, ಕಲ್ಕಿ ಧಾಮ ದೇವಾಲಯದಲ್ಲಿ 10 ಗರ್ಭಗುಡಿಗಳಿರಲಿವೆ.
- ಕಲ್ಕಿ ಧಾಮ ದೇವಾಲಯದ ಆವರಣದಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.
- ಅಯೋಧ್ಯೆ ರಾಮಮಂದಿರ, ಸೋಮನಾಥ ದೇವಾಲಯಗಳ ನಿರ್ಮಾಣಕ್ಕೆ ಬಳಸಿದ ಪಿಂಕ್ ಸ್ಟೋನ್ಗಳನ್ನೇ ಈ ದೇವಾಲಯಕ್ಕೂ ಬಳಸಲಾಗುತ್ತದೆ.
- ಕಲ್ಕಿ ಧಾಮ ದೇವಾಲಯವನ್ನು ಐದು ಎಕರೆಯಲ್ಲಿ ನಿರ್ಮಿಸಲಾಗುತ್ತಿದ್ದು, ನಾಲ್ಕೂವರೆ ವರ್ಷದಲ್ಲಿ ಕಾಮಗಾರಿ ಮುಗಿಸಲಾಗುತ್ತದೆ.
- ಇದು ದೇಶದಲ್ಲೇ ಇರುವ ಮೊದಲ ಕಲ್ಕಿ ದೇವಾಲಯ ಎನಿಸಲಿದೆ, ಕಲ್ಕಿ ವಿಷ್ಣುವಿನ ಅವತಾರ.
- ಹಳೆಯ ಪೀಠದಲ್ಲೇ ಕಲ್ಕಿ ದೇವರ ಮೂರ್ತಿ ಉಳಿಯಲಿದೆ. ಹೊಸ ದೇವಾಲಯದಲ್ಲಿ ಕಲ್ಕಿಯ ಭವ್ಯ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.
- ಕಲ್ಕಿ ದೇವಾಲಯದ ಶಿಖರವು 16 ಅಡಿ ಇರಲಿದೆ
#WATCH | Uttar Pradesh: Prime Minister Narendra Modi lays the foundation stone of Hindu shrine Kalki Dham in Sambhal.
— ANI (@ANI) February 19, 2024
Uttar Pradesh CM Yogi Adityanath and Shri Kalki Dham Nirman Trust Chairman Acharya Pramod Krishnam also present. pic.twitter.com/sTJk2FPEYc
ನರೇಂದ್ರ ಮೋದಿ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸುಮಾರು 10 ಕೋಟಿ ರೂ. ಮೌಲ್ಯದ 14,500 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯಾದ್ಯಂತ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ಲಖನೌನಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದಷ್ಟೇ ಮೋದಿ ಅವರು ಯುಎಇಯಲ್ಲಿ ಕೂಡ ಬೃಹತ್ ಹಿಂದು ದೇವಾಲಯವನ್ನು ಲೋಕಾರ್ಪಣೆ ಮಾಡಿದ್ದರು.
ಇದನ್ನೂ ಓದಿ: UAE Hindu Temple: ಯುಎಇ ಹಿಂದು ದೇಗುಲದ ಮೂರ್ತಿಗಳು ಹೇಗಿವೆ? ಇಲ್ಲಿವೆ ಫೋಟೊಗಳು
ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್ ಚೇರ್ಮನ್ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ದೇವಾಲಯದ ನೇತೃತ್ವ ವಹಿಸಿಕೊಂಡಿದ್ದಾರೆ. ಇವರು ಕಾಂಗ್ರೆಸ್ ನಾಯಕರು ಕೂಡ ಆಗಿದ್ದರು. ಆಚಾರ್ಯ ಪ್ರಮೋದ್ ಕೃಷ್ಣಂ ಅವರು ದೇವಾಲಯ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತಲೇ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡಲಾಗಿದೆ. ಪಕ್ಷವಿರೋಧಿ ಚಟುವಟಿಕೆಯ ಆರೋಪದಲ್ಲಿ ಅವರನ್ನು ಉಚ್ಚಾಟಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ