Site icon Vistara News

PM Modi UAE Visit: ಫ್ರಾನ್ಸ್​ನಿಂದ ಯುಎಇಗೆ ಹೊರಟ ಪ್ರಧಾನಿ ಮೋದಿ; ಇಂಧನ, ಆಹಾರ ಭದ್ರತೆ ಬಗ್ಗೆ ಚರ್ಚೆ​

PM Modi

ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಎರಡು ದಿನಗಳ ಫ್ರಾನ್ಸ್​ ಪ್ರವಾಸ ಇಂದಿಗೆ ಮುಕ್ತಾಯವಾಗಿದ್ದು, ಅವರು ಇಂದು ಅಲ್ಲಿಂದ ಯುನೈಟೆಡ್​ ಅರಬ್​ ಎಮಿರೇಟ್ಸ್​ (UAE)ಕಡೆಗೆ ಹೊರಟಿದ್ದಾರೆ. ಅಬುಧಾಬಿಯಲ್ಲಿ ಏರ್​ಪೋರ್ಟ್​ನಲ್ಲಿ ಅವರಿಗೆ ಸ್ವಾಗತ ಸಿಗಲಿದೆ. ಬಳಿಕ ಯುಎಇ ಅಧ್ಯಕ್ಷ ಶೇಖ್​ ಮೊಹಮ್ಮದ್​ ಬಿನ್​ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗುವರು. ಇಂದು ಬೆಳಗ್ಗೆ 10.45ರ ಹೊತ್ತಿಗೆ ಪ್ರಧಾನಿ ಮೋದಿ ಅಬುಧಾಬಿ (PM Modi UAE Visit) ತಲುಪಲಿದ್ದು, 2.10ರ ಹೊತ್ತಿಗೆ ಅವರಿಗಾಗಿ ಸ್ವಾಗತ ಕಾರ್ಯಕ್ರಮ, ನಿಯೋಗ ಭೇಟಿ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. 3.20ಕ್ಕೆ ಔತಣಕೂಟ ಮುಗಿಸಿ, ಬಳಿಕ 4.45ರ ಹೊತ್ತಿಗೆ ಅಲ್ಲಿಂದ ಭಾರತಕ್ಕೆ ಹೊರಡುವರು.

ಪ್ರಧಾನಿ ಮೋದಿ ಫ್ರಾನ್ಸ್ ಭೇಟಿ ಮುಗಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅರಿಂದಮ್​ ಬಾಗ್ಚಿ ‘ಪ್ರಧಾನಿ ನರೇಂದ್ರ ಮೋದಿಯವರ 2ದಿನಗಳ ಫ್ರಾನ್ಸ್​ ಭೇಟಿಯು ಭಾರತ-ಫ್ರಾನ್ಸ್​ ಹೊಸ ಬಾಂಧವ್ಯಕ್ಕೆ ನಾಂದಿಯಾಗಿದೆ. ಇದೀಗ ಪ್ರಧಾನಿ ಅಬುಧಾಬಿಯತ್ತ ಪ್ರಯಾಣ ಬೆಳೆಸಿದ್ದಾರೆ’ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಭೇಟಿ ವೇಳೆ ‘ಇಂಧನ, ಆಹಾರ ಭದ್ರತೆ ಮತ್ತು ರಕ್ಷಣಾ ಕ್ಷೇತ್ರವನ್ನು ಕೇಂದ್ರೀಕರಿಸಿ ಎರಡೂ ದೇಶಗಳ ನಡುವೆ ಪರಿಶೀಲನಾ ಸಭೆ ನಡೆಯಲಿದೆ. ಅದಾದ ಬಳಿಕ ಎರಡೂ ರಾಷ್ಟ್ರಗಳ ದಿಗ್ಗಜರು ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: PM Modi France Visit: ‘ಮೇಕ್ ಇನ್ ಇಂಡಿಯಾ’ದಲ್ಲಿ ಫ್ರಾನ್ಸ್ ಭಾರತದ ಸಹಜ ಗೆಳೆಯ ಎಂದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಯುಎಇಗೆ ಆಗಾಗ ಭೇಟಿ ಕೊಡುತ್ತ ಇರುತ್ತಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನಂತರ 2015ರ ಆಗಸ್ಟ್​​ನಲ್ಲಿ, ಬಳಿಕ 2018ರ ಫೆಬ್ರವರಿ, 2019ರ ಆಗಸ್ಟ್​ ಮತ್ತು 2022ರ ಜೂನ್​​ನಲ್ಲಿ ಅವರು ಯುಎಇಗೆ ಭೇಟಿ ಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಯುಎಇಗೆ ಕಾಲಿಟ್ಟಿದ್ದಾರೆ. ಕಳೆದ ಎರಡು ದಿನಗಳಿಂದ ಫ್ರಾನ್ಸ್​​ನಲ್ಲಿ ಇದ್ದ ಅವರು, ಅಲ್ಲಿ ವಿವಿಧ ಕಾರ್ಯಕ್ರಮಗಳು, ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಸಲ ಪ್ರಧಾನಿ ಮೋದಿಯವರಿಗೆ ಫ್ರಾನ್ಸ್​ನ ಅತ್ಯುನ್ನತ ನಾಗರಿಕ ಮತ್ತು ಸೇನಾ ಗೌರವ ಆಗಿರುವ ʼಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ʼ ಅನ್ನು ನೀಡಿ ಗೌರವಿಸಲಾಗಿದೆ.

Exit mobile version