Site icon Vistara News

PM Narendra Modi: ಸಂಸತ್ ಕ್ಯಾಂಟೀನ್‌ಗೆ ಮೋದಿ ಹಾಜರ್; ಸಂಸದರೊಂದಿಗೆ ಊಟದ ಜತೆ ಹರಟೆ

PM Narendra Modi lunch with MPs in Parliament canteen

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ಸಂಸತ್ ಕ್ಯಾಂಟೀನ್‌ಗೆ (Parliament Canteen) ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಸಂಸದರ ಜತೆಗೆ, ಅಲ್ಲಿಯೇ ಊಟ ಕೂಡ ಮಾಡಿದರು; ಹರಟೆ ಹೊಡೆದರು. ”ಇವತ್ತು ನಿಮಗೆ ಶಿಕ್ಷೆ ಕಾದಿದೆ. ಬನ್ನಿ ನನ್ನೊಂದಿಗೆ ಊಟ (Lunch)ಮಾಡಿ” ಎಂದು ತಮಾಷೆಯಾಗಿ ಮೋದಿ ಅಲ್ಲಿದ್ದ ಸಂಸದರಿಗೆ ಹೇಳಿದರು. ಮೋದಿ ಅವರು ಸಂಸದರೊಂದಿಗೆ ಮಧ್ಯಾಹ್ನದ ಊಟದಲ್ಲಿ ಅನ್ನ, ದಾಲ್, ಕಿಚಿಡಿ ಹಾಗೂ ಲಡ್ಡು ಸವಿದರು.

ಟಿಡಿಪಿಯ ರಾಮ್ ಮೋಹನ್ ನಾಯ್ಡು, ಬಿಎಸ್‌ಪಿಯಿಂದ ರಿತೇಶ್ ಪಾಂಡೆ, ಬಿಜೆಪಿಯ ಲಡಾಖ್ ಸಂಸದ ಜಮ್ಯಾಂಗ್ ನಮ್ಗ್ಯಾಲ್, ಕೇಂದ್ರ ಸಚಿವ ಎಲ್ ಮುರುಗುನ್, ಬಿಜೆಡಿಯ ಸಸ್ಮಿತ್ ಪಾತ್ರ, ಬಿಜೆಪಿಯ ಮಹಾರಾಷ್ಟ್ರ ಸಂಸದೆ ಹೀನಾ ಗವಿತ್ ಅವರು ಮೋದಿ ಜತೆ ಲಂಚ್ ಮಾಡಿದರು.

45 ನಿಮಿಷಗಳ ಭೋಜನದ ಸಮಯದಲ್ಲಿ, ಸಂಸದರು ಪ್ರಧಾನಿಯವರ ಜೀವನಶೈಲಿ, ಅವರು ಯಾವಾಗ ಎದ್ದೇಳುತ್ತಾರೆ, ವೇಳಾಪಟ್ಟಿಯನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಇದು ಸಂಸದರ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಪ್ರಧಾನಮಂತ್ರಿಯವರು ಜತೆಯಾಗಿದ್ದು ಸಂಪೂರ್ಣವಾಗಿ ಸಾಂದರ್ಭಿಕವಾಗಿತ್ತು. ಸೌಹಾರ್ದಯುತ ಭೇಟಿಯಾಗಿತ್ತು. ಇದು ಉತ್ತಮ ಸೂಚಕವಾಗಿದೆ ಎಂದು ಊಟಕ್ಕೆ ಹಾಜರಾದ ಸಂಸದರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪೂರ್ವ ಸಿದ್ಧತೆಯಿಲ್ಲದೇ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿದ್ದು, ವಿದೇಶಿ ಭೇಟಿಗಳು, ಏಕತೆಯ ಪ್ರತಿಮೆ ನಿರ್ಮಾಣ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಅವರು ಈ ಬಗ್ಗೆ ಸಂಸದರ ಜತೆ ಮಾತನಾಡಿದರು.

ಪ್ರಧಾನಮಂತ್ರಿಯವರು ಅಬುಧಾಬಿ ದೇವಸ್ಥಾನದ ಬಗ್ಗೆಯೂ ಇದೇ ವೇಳೆ ಮಾತನಾಡಿದರು. 2018 ರಲ್ಲಿ ಅವರು ದೇವಸ್ಥಾನ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. ಇದು ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಯೋಜನೆಯಾಗಿದೆ ಎಂದು ಪ್ರಧಾನಿ ಹೇಳಿದರು ಎಂದು ಹೇಳಿದರು. ಅಲ್ಲದೇ, ಬಿಲ್ ಪೇ ಮಾಡುವಂತೆ ತಮ್ಮ ಅಧಿಕಾರಿಗಳಿಗೆ ತಿಳಿಸಿದರು ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ: Modi Caste: ಪ್ರಧಾನಿ ಮೋದಿ ಹಿಂದುಳಿದ ಜಾತಿಯಲ್ಲಿ ಹುಟ್ಟಿಲ್ಲ! ರಾಹುಲ್‌ ಗಾಂಧಿ ಹೊಸ ಸಂಶೋಧನೆ!

Exit mobile version