ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ರೇಡಿಯೊ ಸರಣಿಯ 102ನೇ ಕಾರ್ಯಕ್ರಮ ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಿದೆ. ದೇಶದ ಜನರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮದ ಪ್ರಮುಖ ಅಂಶಗಳು (Mann Ki Baat Live Updates) ಇಲ್ಲಿವೆ.
ಛತ್ರಪತಿ ಶಿವಾಜಿಯ ನೆನೆದ ಮೋದಿ
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜರನ್ನು ನೆನೆದರು. ಶಿವಾಜಿ ಮಹಾರಾಜರು ಶೌರ್ಯದ ಜತೆಗೆ ಉತ್ತಮ ಆಡಳಿತಕ್ಕೂ ಹೆಸರಾಗಿದ್ದಾರೆ. ಜಲ ಸಂರಕ್ಷಣೆಗೂ ಅವರು ಮಾದರಿಯಾಗಿದ್ದರು. ಹಾಗಾಗಿ, ಎಲ್ಲರೂ ಜಲ ಸಂರಕ್ಷಣೆಗೆ ಆದ್ಯತೆ ನೀಡೋಣ ಎಂದು ಕರೆ ನೀಡಿದರು.
ಅಮೆರಿಕಕ್ಕೆ ಹೋಗುತ್ತಿರುವ ಕಾರಣ ಒಂದು ವಾರ ಮೊದಲು ಕಾರ್ಯಕ್ರಮ
ಅಮೆರಿಕಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ಕಾರಣ ಒಂದು ವಾರ ಮೊದಲೇ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ ಎಂದು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಹೇಳಿದ್ದಾರೆ.
ಒಂದು ವಾರ ಮೊದಲೇ ಏಕೆ ಮೋದಿ ಮಾತು?
ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೆ ಪ್ರತಿ ತಿಂಗಳ ಕೊನೆಯ ಭಾನುವಾರ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ದೇಶದ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಆದರೆ, ಈ ಬಾರಿ ತಿಂಗಳ ಮೂರನೇ ಭಾನುವಾರವಾದ ಜೂನ್ 18ರಂದು ಮಾತನಾಡಲಿದ್ದಾರೆ. ಜೂನ್ 21ರಿಂದ 24ರವರೆಗೆ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಕಾರಣದಿಂದಾಗಿ ಒಂದು ವಾರ ಮೊದಲೇ ಮೋದಿ ಮಾತನಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಇರುವ ಕಾರಣ, ಇದರ ಕುರಿತು ಸಹ ಮೋದಿ ಮಾತನಾಡುವ ಸಾಧ್ಯತೆ ಇದೆ.
11 ಗಂಟೆಗೆ ಮೋದಿ ಮನ್ ಕೀ ಬಾತ್
ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ರೇಡಿಯೊ ಕಾರ್ಯಕ್ರಮದ ಮೂಲಕ ದೇಶದ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ನರೇಂದ್ರ ಮೋದಿ ಅವರು ಜೂನ್ 21ರಿಂದ 24ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅನಿವಾಸಿ ಭಾರತೀಯರಿಗೆ ಮನ್ ಕೀ ಬಾತ್ ಮೂಲಕ ಸಂದೇಶ ರವಾನಿಸುವ ಸಾಧ್ಯತೆ ಇದೆ.