Site icon Vistara News

PM Narendra Modi: 30 ದಿನದಲ್ಲಿ 85 ವಿಶ್ವ ನಾಯಕರನ್ನು ಭೇಟಿ ಮಾಡಿದ ಮೋದಿ!

PM Narendra Modi

ನವದೆಹಲಿ: ಹೊಸ ಭಾರತದ ಆಶೋತ್ತರಗಳನ್ನು ಈಡೇರಿಸಲು ತಾವು ಕಳೆದ 30 ದಿನದಲ್ಲಿ 85 ವಿಶ್ವ ನಾಯಕರನ್ನು (World Leaders) ಭೇಟಿ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಜಿ20 ಯುನಿರ್ವಸಿಟಿ ಕನೆಕ್ಟ್ ಫಿನಾಲೆಯಲ್ಲಿ (G20 University Connect Finale) ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕಳೆದ 30 ದಿನದಲ್ಲಿ ಭಾರತದ ರಾಜತಾಂತ್ರಿಕತೆ ಹೊಸ ಎತ್ತರವನ್ನು ತಲುಪಿದೆ(Indian Diplomacy). ಅಲ್ಲದೇ, ಜಿ20 ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು 21ನೇ ಶತಮಾನದ ದಿಕ್ಸೂಚಿಯನ್ನು (21 Century) ಬದಲಿಸಲಿದೆ ಎಂದು ಅಭಿಪ್ರಾಯಪಟ್ಟರು.

ನಾನು ನಿಮಗೆ ಕಳೆದ 30 ದಿನಗಳಲ್ಲಿ ಏನೇನಾಯ್ತು ಎಂಬ ವಿವರ ನೀಡಲು ಬಯಸುತ್ತೇನೆ. ಅದು ನಿಮಗೆ ನವ ಭಾರತದ ವೇಗ ಮತ್ತು ಪ್ರಮಾಣದ ಕಲ್ಪನೆಯನ್ನು ನೀಡುತ್ತದೆ. ನೀವು ಆಗಸ್ಟ್ 23 ಅನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಎಲ್ಲರೂ ಪ್ರಾರ್ಥಿಸುತ್ತಿದ್ದರು ಮತ್ತು ಇದ್ದಕ್ಕಿದ್ದಂತೆ ಎಲ್ಲರ ಮುಖದಲ್ಲಿ ನಗು ಮೂಡಿತು. ಯಾಕೆಂದರೆ, ಭಾರತವು ಚಂದ್ರನ ಮೇಲೆ ಕಾಲಿಟ್ಟಿದ ಗಳಿಗೆ ಅದು. ಆಗಸ್ಟ್ 23 ರಾಷ್ಟ್ರೀಯ ಕ್ರೀಡಾ ದಿನವಾಗಿ ದೇಶದಲ್ಲಿ ಅಮರವಾಗಿದೆ. ಭಾರತವು ತನ್ನ ಚಂದ್ರನ ಕಾರ್ಯಾಚರಣೆಯ ಯಶಸ್ಸಿನ ನಂತರ ಶೀಘ್ರದಲ್ಲೇ ತನ್ನ ಸೌರ ಮಿಷನ್ ಅನ್ನು ಪ್ರಾರಂಭಿಸಿತು … “ಎಂದು ಅವರು ಹೇಳಿದರು.

ಜಾಗತಿಕ ವ್ಯವಹಾರಗಳಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದನ್ನು ತಿಳಿಸಿದ ಅವರು, ಭಾರತದ ಪ್ರಯತ್ನಗಳಿಂದಾಗಿಯೇ ಆಫ್ರಿಕನ್ ಯೂನಿಯನ್ ಅನ್ನು ಜಿ20 ಗ್ರೂಪ್‌ನಲ್ಲಿ ಶಾಶ್ವತ ಸದಸ್ಯ ಸಂಸ್ಥೆಯಾಗಿ ಸೇರಿಸಲು ಸಾಧ್ಯವಾಯಿತು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: G20 Summit 2023: ಜಿ20 ಶೃಂಗಸಭೆ ಸಕ್ಸೆಸ್, ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

ಗ್ಲೋಬಲ್ ಬಯೋ-ಫ್ಯುಯೆಲ್ ಅಲೈನ್ಸ್‌ನ ನೇತೃತ್ವವನ್ನು ಭಾರತವು ವಹಿಸಿಕೊಂಡಿದೆ. ಜಿ20 ಶೃಂಗಸಭೆ ವೇಳೆ, ನಾವು ಭಾರತ-ಮಧ್ಯ ಪ್ರಾಚ್ಯ-ಯುರೋಪ್ ಕಾರಿಡಾರ್ ರಚಿಸುವ ಸಂಬಂಧ ನಿರ್ಧಾರ ಕೈಗೊಂಡೆವು. ಜಿ20 ಬಳಿಕ ಸೌದಿ ರಾಜಕುಮಾರ ಅವರು ಭೇಟಿ ಶುರುವಾಯಿತು. ಭಾರತದಲ್ಲಿ ಸೌದಿ ಅರೆಬಿಯಾ ಸುಮಾರು 100 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಇದೆಲ್ಲವೂ ಕೇವಲ 30 ದಿನಗಳಲ್ಲಿ ನಡೆದು ಹೋಯಿತು. ಭಾರತದ ಪ್ರಧಾನಿಯಾಗಿ 30 ದಿನಗಳಲ್ಲಿ ನಾನು 85 ವಿಶ್ವ ನಾಯಕರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಅಂದರೆ, ಇದು ಆಲ್ಮೋಸ್ಟ್ ಅರ್ಧ ಜಗತ್ತು ಸಂಪರ್ಕಿಸಿದಂತೆಯೇ ಸರಿ. ಇಷ್ಟೆಲ್ಲ ಮಾಡಿದ್ದರಿಂದ ಏನು ದೊರೆಯಿತು ಎಂದು ನೀವು ಯೋಚಿಸುತ್ತಿರಬಹುದು. ಆದರೆ, ವಿಶ್ವದ ಇತರ ರಾಷ್ಟ್ರಗಳ ಜತೆಗೆ ಭಾರತದ ಸಂಬಂಧ ಚೆನ್ನಾಗಿದ್ದಾಗ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ಭಾರತದ ಯುವಕರಿಗೆ ಈ ಎಲ್ಲ ಪ್ರಯೋಜನಗಳು ದೊರೆಯುತ್ತವೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.

ಭಾರತದ ಪ್ರಯತ್ನವಾಗಿಯೇ ಬ್ರಿಕ್ಸ್ ಕಮ್ಯುನಿಟಿಗೆ ಮತ್ತೆ ಆರು ಹೊಸ ರಾಷ್ಟ್ರಗಳನ್ನು ಸೇರಿಸಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಎಲ್ಲ ಒಳ್ಳೆಯ ಕೆಲಸಗಳನ್ನು ಮಾಡಲು ನೀವು ನನ್ನನ್ನು ಆಯ್ಕೆ ಮಾಡಿದ್ದೀರಿ. ಜಿ20 ಶೃಂಗಕ್ಕಿಂತ ಮುಂಚೆ ನಾನು ಇಂಡೋನೇಷ್ಯಾದಲ್ಲಿ ವಿಶ್ವ ನಾಯಕರನ್ನು ಭೇಟಿ ಮಾಡುತ್ತಿದ್ದೆ. ಜಗತ್ತು ಧ್ರುವೀಕರಣಗೊಂಡಿರುವ ಈ ಹೊತ್ತಿನಲ್ಲಿ ಎಲ್ಲ ದೇಶಗಳನ್ನು ಒಂದೇ ವೇದಿಕೆಯಡಿ ಕರೆ ತರುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version