ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ- ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್ ಅಂಬಾನಿ (Anant Ambani Wedding) ಮತ್ತು ರಾಧಿಕಾ ಮರ್ಚಂಟ್ (Radhika Merchant) ಅವರ ವಿವಾಹವು ಶುಕ್ರವಾರ (ಜುಲೈ 12) ಅದ್ಧೂರಿಯಾಗಿ ನಡೆದಿದೆ. ದೇಶ-ವಿದೇಶಗಳ ಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಶನಿವಾರದ (ಜುಲೈ 13) ಶುಭ ಆಶೀರ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೂಡ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದು, ನೂತನ ವಧು-ವರರಿಗೆ ಆಶೀರ್ವಾದ ಮಾಡಿದರು.
ನರೇಂದ್ರ ಮೋದಿ ಅವರು ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ಗೆ ಆಗಮಿಸುತ್ತಲೇ ಮುಕೇಶ್ ಅಂಬಾನಿ ಅವರು ಸ್ವಾಗತಿಸಿದರು. ಇದಾದ ಬಳಿಕ ಮೋದಿ ಅವರು ನೂತನ ವಧು-ವರರಿಗೆ ಆಶೀರ್ವಾದ ಮಾಡಿದರು. ಇದಾದ ಬಳಿಕ ಅನಂತ್ ಅಂಬಾನಿ ಹಾಗೂ ಆಕಾಶ್ ಅಂಬಾನಿ ಅವರು ಮೋದಿ ಅವರ ಕಾಲಿಗೆ ನಮಸ್ಕರಿಸಿದರು. ಸುಮಾರು 29 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಲು ಮೋದಿ ಅವರು ಶನಿವಾರ ಮುಂಬೈಗೆ ಆಗಮಿಸಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಅವರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
PM @narendramodi At Ambani Wedding Celebrations pic.twitter.com/vSFYXXd8WR
— Siddhant Anand (@JournoSiddhant) July 13, 2024
ಹಲವು ರಾಜಕಾರಣಿಗಳು ಭಾಗಿ
ಟಿಎಂಸಿ ಪಕ್ಷದ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಮಗ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿವಾಹದಲ್ಲಿ ಭಾಗವಹಿಸಿದ್ದರು. ಶಿವಸೇನಾ (ಯುಬಿಟಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಎನ್‌ಸಿಪಿ (ಶರದ್ ಪವಾರ್) ಹಿರಿಯ ನಾಯಕಿ ಸುಪ್ರಿಯಾ ಸುಳೆ ಕೂಡ ಮದುವೆಯಲ್ಲಿ ಉಪಸ್ಥಿತರಿದ್ದರು.
Prime Minister @narendramodi at Anant Ambani’s Shubh Ashirwad ceremony. pic.twitter.com/svlkccKSaR
— Danish Manzoor Bhat (@TellDM) July 13, 2024
ಅನಂತ್- ರಾಧಿಕಾ ಅವರ ಮದುವೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೇಂದ್ರದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ನ ನಾಯಕರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಆನಂದ್ ಶರ್ಮಾ, ಅಜಯ್ ಮಾಕನ್, ಸಲ್ಮಾನ್ ಖುರ್ಷಿದ್, ಅಭಿಷೇಕ್ ಮನು ಸಿಂಘ್ವಿ ಮತ್ತು ರಾಜೀವ್ ಶುಕ್ಲಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ ನಾಯಕರು ನೂತನ ವಧು-ವರರಿಗೆ ಆಶೀರ್ವಸಿದರು.