ನವದೆಹಲಿ: ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತಿರುವವರಿಗೆ, ಡಿಜಿಟಲ್ ಮಾಧ್ಯಮದ ಮೂಲಕವೂ ಬದಲಾವಣೆಗೆ ಸಾಕ್ಷಿಯಾದವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇದೇ ಮೊದಲ ಬಾರಿಗೆ ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ (National Creators Award) ಪ್ರದಾನ ಮಾಡಿದ್ದಾರೆ. ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ದೇಶದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ತಮಿಳುನಾಡು, ಗುಜರಾತ್ ಸೇರಿ ಹಲವು ರಾಜ್ಯಗಳ ಸಾಧಕರಿಗೆ ಪ್ರಶಸ್ತಿ ನೀಡಿದರು.
#WATCH | Delhi: At the first ever National Creators Award, Prime Minister Narendra Modi presents the Disruptor of the Year award to Ranveer Allahbadia (BeerBiceps) at Bharat Mandapam. pic.twitter.com/YCXrqLM70E
— ANI (@ANI) March 8, 2024
ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರು
ಬೆಸ್ಟ್ ಸ್ಟೋರಿ ಟೆಲ್ಲರ್- ಕೀರ್ತಿಕಾ ಗೋವಿಂದಸ್ವಾಮಿ
ದಿ ಡಿಸ್ರಪ್ಟರ್: ರಣವೀರ್ ಅಲಹಾಬಾದಿಯಾ
ಗ್ರೀನ್ ಚಾಂಪಿಯನ್-ಪಂಕ್ತಿ ಪಾಂಡೆ
ಬೆಸ್ಟ್ ಕ್ರಿಯೇಟರ್ ಫಾರ್ ಸೋಷಿಯಲ್ ಚೇಂಜ್- ಜಯಾ ಕಿಶೋರಿ
ಮೋಸ್ಟ್ ಇಂಪ್ಯಾಕ್ಟ್‌ಫುಲ್ ಅಗ್ರಿ ಕ್ರಿಯೇಟರ್- ಲಕ್ಷ್ಯ ದಬಾಸ್
ಕಲ್ಚುರಲ್ ಅಂಬಾಸಿಡರ್- ಮೈಥಿಲಿ ಠಾಕೂರ್
ಬೆಸ್ಟ್ ಇಂಟರ್‌ನ್ಯಾಷನಲ್ ಕ್ರಿಯೇಟರ್- ಕ್ರಿಪಾಲ್, ಕೆಸೆಂಟ್ರಾ, ಡ್ರ್ಯೂ ಹಿಕ್ಸ್
ಬೆಸ್ಟ್ ಟ್ರಾವೆಲ್ ಕ್ರಿಯೇಟರ್- ಕಾಮಿಯಾ ಜಾನಿ
ಬೆಸ್ಟ್ ಕ್ರಿಯೇಟರ್ ಇನ್ ಟೆಕ್ ಕೆಟಗರಿ- ಗೌರವ್ ಚೌಧರಿ
ಸ್ವಚ್ಛತಾ ಅಂಬಾಸಿಡರ್-ಮಲ್ಹಾರ್ ಕಲಾಂಬೆ
ಹೆರಿಟೇಜ್ ಫ್ಯಾಷನ್ ಐಕಾನ್- ಜಾಹ್ನವಿ ಸಿಂಗ್
ಕ್ರಿಯೇಟಿವ್ ಕ್ರಿಯೇಟರ್- ಶ್ರದ್ಧಾ
ಏನಿದು ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್?
ದೇಶದಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದು ಸೇರಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾದ ಯುವಕರು, ಯುವತಿಯರು ಸೇರಿ ಹಲವರಿಗೆ ಪ್ರಶಸ್ತಿ ನೀಡುವುದೇ ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ ಆಗಿದೆ. ಫಿಟ್‌ನೆಸ್, ದೇಶದ ಸಂಸ್ಕೃತಿ, ಇತಿಹಾಸ, ಪರಂಪರೆ ಪಸರಿಸುವುದು, ಪರಿಸರ ರಕ್ಷಣೆ, ಆರೋಗ್ಯಯುತ ಜೀವನ ಶೈಲಿ ಸೇರಿ ಹಲವು ರೀತಿಯಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದವರಿಗೆ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: LPG Price Cut: ಮಹಿಳೆಯರ ದಿನಕ್ಕೆ ಮೋದಿ ಭರ್ಜರಿ ಗಿಫ್ಟ್; ಎಲ್‌ಪಿಜಿ ಬೆಲೆ 100 ರೂ. ಇಳಿಕೆ
10 ಲಕ್ಷ ಜನರಿಂದ ಮತ
ಕೇಂದ್ರ ಸರ್ಕಾರವು ರಾಷ್ಟ್ರೀಯ ಕ್ರಿಯೇಟರ್ಸ್ ಪ್ರಶಸ್ತಿ ನೀಡುವ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಲೇ ಸಾರ್ವಜನಿರಕ ಸಹಭಾಗಿತ್ವ ಹೆಚ್ಚಾಗಿದೆ. ಸುಮಾರು 20 ಕೆಟಗರಿಗಳಲ್ಲಿ ಪ್ರಶಸ್ತಿ ನೀಡಲು ಸುಮಾರು 1.5 ಲಕ್ಷ ನಾಮನಿರ್ದೇಶನಗಳನ್ನು ಮಾಡಲಾಗಿದೆ. ಹಲವು ಕ್ಷೇತ್ರಗಳ ಡಿಜಿಟಲ್ ಕ್ರಿಯೇಟರ್‌ಗಳಿಗೆ ಸುಮಾರು 10 ಲಕ್ಷ ಜನ ಮತಗಳನ್ನು ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ