Site icon Vistara News

New Parliament Building: ಬಸವೇಶ್ವರರ ಅನುಭವ ಮಂಟಪ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ

PM Narendra Modi

ನವದೆಹಲಿ: ಭಾರತವು ಕೇವಲ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ (Democracy) ರಾಷ್ಟ್ರವಲ್ಲ. ಬದಲಿಗೆ ಪ್ರಜಾಪ್ರಭುತ್ವದ ಜನನಿಯೂ ಹೌದು (India is the Mother of Democracy) ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು. ಪ್ರಾಚೀನ ಕಾಲದಿಂದಲೂ ಭಾರತವು ಪ್ರಜಾಪ್ರಭುತ್ವವನ್ನು ಪೋಷಿಕೊಂಡು ಬರುತ್ತಿದೆ ಎಂದು ಹೇಳಿದ ಅವರು, ವೇದಗಳು, ಮಹಾಭಾರತ, ಇತಿಹಾಸದಲ್ಲಿ ನಾವು ಪ್ರಜಾಪ್ರಭುತ್ವದ ಪಡಿಯಚ್ಚು ಕಾಣಬಹುದು. ಜಗಜ್ಯೋತಿ ಬಸವೇಶ್ವರ (Basaveshwara) ಅವರ ಅನುಭವ ಮಂಟಪದಲ್ಲಿ (Anubhava Mantap ಲೋಕತಂತ್ರವನ್ನು ಕಾಣಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು(New Parliament Building).

ಹೊಸ ಸಂಸತ್ ಭವನ ಲೋಕಾರ್ಪಣೆ ಕಾರ್ಯಕ್ರಮದ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸ ಸಂಸತ್ ಭವನವು ಆಧುನಿಕ ಮತ್ತು ಪುರಾತನ ಸಮ್ಮಿಳಿತವಾಗಿದೆ. ಇಂದು ಭಾರತವು ಹೊಸ ಗುರಿಯನ್ನು ನಿರ್ಧರಿಸುತ್ತದೆ ಮತ್ತು ಹೊಸ ರಸ್ತೆಯಲ್ಲಿ ಸಾಗುತ್ತಿದೆ. ಹೊಸ ಜೋಶ್, ಹೊಸ ಸಂಕಲ್ಪ, ಹೊಸ ವಿಚಾಧಾರೆ ಮೂಲಕ ಮುನ್ನುಗ್ಗುತ್ತಿದೆ. ವಿಶ್ವಾಸ ಹೊಸದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಇಂದು ಇಡೀ ಜಗತ್ತೇ ಭಾರತದ ಸಂಕಲ್ಪದತ್ತ ತಿರುಗಿ ನೋಡುತ್ತಿದೆ. ಭಾರತವಾಸಿಗಳ ಪ್ರಖರತೆಯನ್ನು ಕಾಣುತ್ತಿದೆ. ನೆನಪಿಡಿ, ಭಾರತವು ಅಭಿವೃದ್ಧಿಯಾದರೆ, ವಿಶ್ವವೇ ಅಭಿವೃದ್ಧಿಯಾದಂತೆ. ಈ ಹೊಸ ಸಂಸತ್ ಭವನವು ಭಾರತದ ಹೊಸ ವಿಕಾಸದ ಪ್ರತೀಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

New Parliament Building: ಸೆಂಗೋಲ್ ಪ್ರತಿಷ್ಠಾಪನೆ ಮಾಡಲಾಗಿದೆ- ಮೋದಿ

ಈ ಐತಿಹಾಸಿಕ ಸಂದರ್ಭದಲ್ಲಿ ಪವಿತ್ರ ಸೆಂಗೋಲ್‌ವನ್ನು ಲೋಕಸಭೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಮಹಾನ್ ಚೋಳ ಸಾಮ್ರಾಜ್ಯದಲ್ಲಿ ಈ ಸೆಂಗೋಲ್, ಕರ್ತವ್ಯ, ಸೇವೆ, ರಾಷ್ಟ್ರಪಥ ಪ್ರಗತಿಯ ಪ್ರತೀಕವಾಗಿತ್ತು. ಅಧಿಕಾರ ಹಸ್ತಾಂತರದ ಪ್ರತೀಕವಾಗಿತ್ತು. ರಾಜಾಜಿ ಅವರು ಅಧೀನಂ ಮಾರ್ಗದರ್ಶನದಲ್ಲಿ ಈ ಸೆಂಗೋಲ್ ಅನ್ನು ಆಡಳಿತ ಹಸ್ತಾಂತರದ ಪ್ರತೀಕವಾಗಿ ನೀಡಿದ್ದರು. ಈಗ ಮತ್ತೆ ಅದನ್ನು ಲೋಕಸಭೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಇದನ್ನೂ ಓದಿ: New Parliament Building: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಪಕ್ಷ!

ಈ ಸೆಂಗೋಲ್‍‌ನ ಗೌರವ ಮತ್ತೆ ಹೆಮ್ಮೆ ಮತ್ತೆ ಮರಳಿ ಬರುವಂತೆ ಮಾಡಲು ನಾನು ಯಶಸ್ವಿಯಾಗಿದ್ದೇನೆ. ಈ ಲೋಕಸಭೆಯ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಈ ಸೆಂಗೋಲ್ ಪ್ರೇರಣೆ ಒದಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version