Site icon Vistara News

Narendra Modi: ಅಯೋಧ್ಯೆಯಲ್ಲಿ ಮೋದಿ ಬೃಹತ್‌ ರೋಡ್ ಶೋ;‌ ಎಲ್ಲೆಡೆ ಜೈ ಶ್ರೀರಾಮ್‌ ಘೋಷಣೆ

Election Results 2024

ಅಯೋಧ್ಯೆ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ದೇಶಾದ್ಯಂತ ಸಾಲು ರ‍್ಯಾಲಿಗಳ ಭರಾಟೆಯ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಯೋಧ್ಯೆಗೆ ತೆರಳಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಇದಾದ ಬಳಿಕ ನರೇಂದ್ರ ಮೋದಿ ಅವರು ರಾಮನಗರಿಯಲ್ಲಿ ಭರ್ಜರಿ ರೋಡ್‌ ಶೋ (Modi Road Show) ನಡೆಸುತ್ತಿದ್ದಾರೆ. ರೋಡ್‌ ಶೋ ಸುಗ್ರೀವ ಕೋಟೆಯಿಂದ ಪ್ರಾರಂಭವಾಗಿ ಲತಾ ಚೌಕ್‌ವರೆಗೆ ಸಾಗಲಿದೆ.

ನರೇಂದ್ರ ಮೋದಿ ಅವರು ಸಾಗುವ ದಾರಿಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು ರಾಮಮಂದಿರದ 11ನೇ ಗೇಟ್‌ನ ಎದುರು ಹೂವುಗಳು ಮತ್ತು ಧ್ವಜಗಳಿಂದ ಸಿಂಗರಿಸಲಾಗಿದೆ. ಪೊಲೀಸರ ಜೊತೆಗೆ ಭಯೋತ್ಪಾದಕಾ ನಿಗ್ರಹ ದಳ(ATS) ಕಮಾಂಡೋಗಳು ಭದ್ರತಾ ವ್ಯವಸ್ಥೆಯನ್ನು ಪರಿಶೋಲಿಸುತ್ತಿದ್ದಾರೆ. ಅಲ್ಲದೇ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ರಾಮ ಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಸಕಲ ಸಿದ್ಧತೆ ನಡೆಸಲಾಗಿದೆ. ರಾಮಲಲ್ಲಾ ದರ್ಶನ ಮಾರ್ಗದ ಗೇಟ್‌ ನಂಬರ್‌ 11ರಲ್ಲಿ ಹೂಗಳಿಂದ ಸಿಂಗರಿಸಲಾಗಿದೆ. ರಸ್ತೆಯುದ್ಧಕ್ಕೂ ಪ್ರಧಾನಿ ಮೋದಿಯ ಕಟೌಟ್‌ ನಿರ್ಮಿಸಲಾಗಿದೆ. ಮೋದಿ ಅವರ ರೋಡ್‌ಶೋನಲ್ಲಿ ಸಾಧು ಸಂತರು ಕೂಡ ಭಾಗಿಯಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಮೂರನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, 10 ಲೋಕಸಭಾ ಕ್ಷೇತ್ರದಲ್ಲಿ ಮೇ 7 ಮತದಾನ ನಡೆಯಲಿದೆ. ಅಯೋಧ್ಯೆಯಲ್ಲಿ ಮೇ 20ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ನರೇಂದ್ರ ಮೋದಿ ಅವರ ರೋಡ್‌ ಶೋ ಪ್ರಾಮುಖ್ಯತೆ ಪಡೆದಿದೆ. ಉತ್ತರ ಪ್ರದೇಶ ಸೇರಿ ದೇಶಾದ್ಯಂತ ರಾಮಮಂದಿರ ನಿರ್ಮಾಣವು ಬಿಜೆಪಿಗೆ ಪ್ರಮುಖ ಚುನಾವಣಾ ವಿಷಯವೂ ಆಗಿದೆ.

ಇದನ್ನೂ ಓದಿ: Vijay Sankeshwar: 2014ರಲ್ಲಿ ಮೋದಿ ಕೈಗೆ ಮೌನಿ ಬಾಬಾ ಖಾಲಿ ಚೊಂಬು ಕೊಟ್ಟಿದ್ದರು; ಉದ್ಯಮಿ ವಿಜಯ ಸಂಕೇಶ್ವರ ವಾಗ್ದಾಳಿ

Exit mobile version