Site icon Vistara News

Narendra Modi: ವಾರಾಣಸಿಯಲ್ಲಿ ಹೊಸ ಅಲೆ ಸೃಷ್ಟಿಸಿದ ಮೋದಿ, ಶಕ್ತಿ ಪ್ರದರ್ಶನ; ರೋಡ್‌ ಶೋ Photos ಇಲ್ಲಿವೆ

Narendra Modi

Narendra Modi To File Namination In Varanasi On May 14

ವಾರಾಣಸಿ: ದೇಶಾದ್ಯಂತ ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಲೋಕಸಭೆ ಕ್ಷೇತ್ರವಾದ ವಾರಾಣಸಿಯಲ್ಲಿ (Varanasi) ಬೃಹತ್‌ ರೋಡ್‌ ಶೋ ಮೂಲಕ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಸತತ ಮೂರನೇ ಬಾರಿಗೆ ವಾರಾಣಸಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಮೋದಿ ಅವರು ಮಂಗಳವಾರ (ಏಪ್ರಿಲ್‌ 14) ನಾಮಪತ್ರ ಸಲ್ಲಿಸಿದ್ದು, ಇದಕ್ಕೂ ಮೊದಲು ರೋಡ್‌ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಮೋದಿ ರೋಡ್‌ ಶೋ ಫೋಟೊಗಳು ಇಲ್ಲಿವೆ.

ವಾರಾಣಸಿಯ ಬನಾರಸ್‌ ವಿವಿ ಗೇಟ್‌ನಿಂದ ಕಾಶಿ ವಿಶ್ವನಾಥ ಧಾಮದ 4ನೇ ಗೇಟ್‌ವರೆಗೆ 6 ಕಿಲೋಮೀಟರ್‌ ರೋಡ್‌ ಶೋ ಕೈಗೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರು ಅಬ್ಬರದ ರೋಡ್‌ ಶೋಗೆ ಸಿಎಂ ಯೋಗಿ ಆದಿತ್ಯನಾಥ್‌ ಸಾಥ್‌ ನೀಡಿದರು.
ಮರಾಠಿ, ಗುಜರಾತಿ, ಬೆಂಗಾಲಿ, ಮಾರ್ವಾಡಿ, ತಮಿಳು ಸೇರಿ ಹಲವು ಸಮುದಾಯಗಳು, ಸಾಂಸ್ಕೃತಿಕ ಹಿನ್ನೆಲೆಯವರು ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದರು.
ಮೋದಿ ರೋಡ್‌ ಶೋ ಉದ್ದಕ್ಕೂ ಜೈ ಶ್ರೀರಾಮ್‌ ಎಂಬುದು ಸೇರಿ ಹಲವು ಘೋಷಣೆಗಳು ಮೊಳಗಿದವು.
ರೋಡ್‌ ಶೋ ಬಳಿಕ ಕಾಶಿ ವಿಶ್ವನಾಥ ದೇಗುಲದಲ್ಲಿ ಮೋದಿ ವಿಶೇಷ ಪ್ರಾರ್ಥನೆ.
ಕೇಸರಿ ದಿರಸು ಧರಿಸಿದ ಕಲಾವಿದರು ರೋಡ್‌ ಶೋಗೆ ಹೊಸ ಮೆರುಗು ತಂದರು.

ಇದನ್ನೂ ಓದಿ: PM Narendra Modi: “ಪಾಕ್‌ ಬಳೆ ತೊಡದಿದ್ದರೆ ನಾವು ತೊಡಿಸುತ್ತೇವೆ….” ಪಿಎಂ ಮೋದಿ ಗುಡುಗು

Exit mobile version