Site icon Vistara News

New Parliament Building: ಪಂಚಾಯ್ತಿಯಿಂದ ಸಂಸತ್ತಿನ ತನಕ ಒಂದೇ ನಿಷ್ಠೆ; 9 ವರ್ಷದ ಸಾಧನೆಗಳಿಂದಲೇ ಹೆಚ್ಚು ಖುಷಿ ಎಂದ ಮೋದಿ

PM Narendra Modi Speaking at New Parliament Building

ನವದೆಹಲಿ: ಭಾರತವು ಹೊಸ ಸಂಸತ್ ಭವನವನ್ನು (New Parliament Building) ಈಗ ಹೊಂದಿದೆ. ಇದಕ್ಕೆ ತಾವೆಲ್ಲ ಖುಷಿ ಪಡುತ್ತಿದ್ದೀರಿ. ಆದರೆ, ನನಗೆ ಏನು ಖುಷಿಯಾಗುತ್ತಿದೆ ಎಂದರೆ, ಕಳೆದ 9 ವರ್ಷದಲ್ಲಿ ನಾನು ಮಾಡಿದ ಮಾಡಿದ ಸಾಧನೆಗಳು. ಈ ಒಂಭತ್ತು ವರ್ಷದಲ್ಲಿ ಈ ದೇಶದ ಬಡವರ ಕಲ್ಯಾಣವನ್ನು ಮಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು.

ಲೋಕಾರ್ಪಣೆಗೊಂಡ ಹೊಸ ಸಂಸತ್ ಭವನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದ ವಿಶೇಷತೆಗಳೊಂದಿಗೆ ತಮ್ಮ 9 ವರ್ಷದ ಸರ್ಕಾರದ ಸಾಧನೆಗಳನ್ನು ಹೋಲಿಕೆ ಮಾಡಿದರು. ಜನಪ್ರತಿನಿಧಿಗಳಿಗೆ ಹೊಸ ಸಂಸತ್ ಭವನ ನಿರ್ಮಾಣವಾದಂತೆ ಈ 9 ವರ್ಷದಲ್ಲಿ 4 ಕೋಟಿ ಮನೆಗಳನ್ನು ಬಡವರಿಗೆ ಕಟ್ಟಿಕೊಟ್ಟಿದ್ದೇವೆ. ಇದು ನನಗೆ ಹೆಚ್ಚು ಖುಷಿ ನೀಡುತ್ತದೆ. 11 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದೇನೆ. ಇದು ನನಗೆ ಹೆಚ್ಚು ಖುಷಿ ನೀಡುವ ವಿಚಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಹೊಸ ಸಂಸತ್ ಭವನ ಆಧುನಿಕ ಸೌಲಭ್ಯಗಳಿಗೆ ನಾವೆಲ್ಲ ಹೆಮ್ಮೆ ಪಡುತ್ತಿದ್ದೇವೆ. ಆದರೆ, ನನಗೆ ಈ 9 ವರ್ಷದಲ್ಲಿ ಹಳ್ಳಿಗಳನ್ನು ಸಂಪರ್ಕಿಸುವ 4 ಲಕ್ಷ ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದೇವೆ. ಅದು ಹೆಚ್ಚು ಖುಷಿ ಕೊಡುತ್ತದೆ. ಪ್ರತಿ ಹನಿಯು ಮುಖ್ಯ. ಹಾಗಾಗಿ ಈ 9 ವರ್ಷದಲ್ಲಿ 50 ಅಮೃತ ಸರೋವರ್‌ಗಳನ್ನು ಸೃಷ್ಟಿಸಿದ್ದೇವೆ. ದೇಶಕ್ಕೆ ಸಂಸತ್ ಭವನ ನಿರ್ಮಾಣವಾದಂತೆ ದೇಶದಲ್ಲಿ 30 ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯ್ತಿ ಭವನಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

New Parliament Building: ನವ ಸಂಸತ್ ಸಂಭ್ರಮ

ಸಂಸತ್ ಭವನದಿಂದ ಪಂಚಾಯಿತಿ ಭವನದವರೆಗೆ ನಮ್ಮ ನಿಷ್ಠೆ ಒಂದೆಯಾಗಿದೆ. ನಮ್ಮ ಗುರಿ ಒಂದೆಯಾಗಿದೆ. ನಮ್ಮ ಪ್ರೇರಣೆ ಒಂದೆಯಾಗಿದೆ. ದೇಶದ ಅಭಿವೃದ್ಧಿ ಎಂದರೆ ದೇಶದ ಜನರ ಅಭಿವೃದ್ಧಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಮತ್ತೆ ಭಾರತಕ್ಕೆ ಜಾಗೃತ ಸ್ಥಿತಿ ಒದಗಿದೆ

ಯಾವುದೇ ದೇಶದ ಇತಿಹಾಸದಲ್ಲಿ ಅಂಥ ಒಂದು ಸ್ಥಿತಿ ಬಂದೇ ಬರುತ್ತದೆ. ದೇಶದ ಚೇನತ ಜಾಗೃತವಾಗುವ ಸ್ಥಿತಿ ಅದು. 1947ಕ್ಕಿಂತ ಮುಂಚೆ 50 ವರ್ಷದಲ್ಲಿ ಅಂಥ ಜಾಗೃತ ಸ್ಥಿತಿ ನಿರ್ಮಾಣವಾಗಿತ್ತು ಗಾಂಧಿಜೀ ಅವರು ಸ್ವರಾಜ್ಯ ಆಂದೋಲನ ಆರಂಭಿಸಿದರು. ಪ್ರತಿ ಭಾರತೀಯರನ್ನು ಒಗ್ಗೂಡಿಸಿದರು. ಪರಿಣಾಮ 1947ರಲ್ಲಿ ಸ್ವಾತಂತ್ರ್ಯ ದೊರೆಯಿತು. ಅದಾದ 75 ವರ್ಷಗಳ ಬಳಿಕ, ಅಂದರೆ ನಮ್ಮ ಅವಧಿಯಲ್ಲಿ ಭಾರತವು ಮತ್ತೆ ಅಂಥದ್ದೇ ಒಂದು ಜಾಗೃತ ಸ್ಥಿತಿಗೆ ತಲುಪಿದೆ. ಭಾರತದ ಅಮೃತ್ ಕಾಲದಲ್ಲಿ ಇತಿಹಾಸ ಮರುಕಳುಹಿಸಿದೆ. ಮುಂದಿನ 25 ವರ್ಷದಲ್ಲಿ ಭಾರತವು ನೂರು ವರ್ಷ ಪೂರ್ಣಗೊಳಿಸಲಿದೆ. ಆ ಹೊತ್ತಿಗೆ ನಾವು ಭಾರತವನ್ನು ಅಭಿವೃದ್ಧಿ ರಾಷ್ಟ್ರವಾಗಿ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ಮಾಡುವುದು ಗುರಿ ಸುಲಭವಲ್ಲ. ಈ ಗುರಿ ದೊಡ್ಡದಿದೆ. ಕಠಿಣ ಕೂಡ ಹೌದು. ಇದಕ್ಕಾಗಿ ದೇಶವಾಸಿಗಳು ಜೀವವನ್ನು ಪಣಕ್ಕಿಟ್ಟು ಹೋರಾಡಬೇಕಿದೆ. ಹೊಸ ಸಂಕಲ್ಪ, ಹೊಸ ಗತಿಯಲ್ಲಿ ನಾವು ಸಾಗಬೇಕು. ಆಗ ಮಾತ್ರ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: New Parliament Building: ಹೊಸ ಸಂಸತ್ ಭವನ ಫಲಕ ಅನಾವರಣ; ಸರ್ವ ಧರ್ಮ ಪ್ರಾರ್ಥನೆ

ಭಾರತದ ವಿಶ್ವಾಸ ಇತರ ರಾಷ್ಟ್ರಗಳಿಗೆ ಪ್ರೇರಣೆ

ಭಾರತದ ವಿಶ್ವಾಸವು ಭಾರತ್ಕಕ್ಕೆ ಮಾತ್ರವೇ ಸಿಮೀತವಾಗಿರುವುದಿಲ್ಲ. ಅದು ಇಡೀ ಜಗತ್ತಿಗೇ ವಿಶ್ವಾಸವನ್ನು ಒದಗಿಸುತ್ತದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ನಮ್ಮ ಸ್ವಾತಂತ್ರ್ಯ ಹೋರಾಟವು ಇತರ ದೇಶಗಳು ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಯಿತು. ಪ್ರೇರಣೆಯನ್ನು ಒದಗಿಸಿತು. ಹಲವು ರಾಷ್ಟ್ರಗಳು ಸ್ವಾತಂತ್ರ್ಯದ ಹಾದಿಯನ್ನು ಕಂಡುಕೊಂಡವು. ಭಾರತದ ವಿಶ್ವಾಸವು ಬೇರೆ ರಾಷ್ಟ್ರಗಳಿಗೆ ವಿಶ್ವಾಸದ ಪ್ರೇರಣೆಯನ್ನು ಒದಗಿಸಿದವು. ಇಷ್ಟೊಂದು ವೈವಿಧ್ಯತೆಯನ್ನು ಹೊಂದಿರುವ ದೇಶ, ಇಷ್ಟೊಂದು ಜನಸಂಖ್ಯೆಯನ್ನು ಹೊಂದಿರುವ ದೇಶ, ಇಷ್ಟೊಂದು ಸವಾಲುಗಳನ್ನು ಎದುರಿಸುವ ದೇಶವು ತನ್ನ ವಿಶ್ವಾಸದ ಮೂಲಕವೇ ಮುಂದೆ ಹೋಗುತ್ತದೆ. ಈ ಸಂದೇಶವು ಜಗತ್ತಿನ ಇತರ ದೇಶಗಳಿಗೂ ಸಾಫಲ್ಯವನ್ನು ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version