ನವದೆಹಲಿ: ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ (Rajasthan Assembly Election) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ಚುನಾವಣೆಯ ಕಹಳೆಯನ್ನು ಮೊಳಗಿಸಿದರು. ಭಾರತೀಯ ಜನತಾ ಪಾರ್ಟಿ (BJP) ಆಯೋಜಿಸಿರುವ ಪರಿವರ್ತನ್ ಸಂಕಲ್ಪ್ ಮಹಾಸಭಾ (Parivartan Sankalp Mahasabha) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋದಿ, ತಮ್ಮ ಭಾಷಣದಲ್ಲಿ ಸನಾತನ ಧರ್ಮ(Sanatan Dharma), ಇಂಡಿಯಾ ಕೂಟ(INDIA Bloc), ಚಂದ್ರಯಾನ-3 (Chandrayaan 3), ಜಿ20 ಶೃಂಗಸಭೆ(G20 Summit) ಸೇರಿದಂತೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು. ಮಾತನಾಡುತ್ತಲೇ, ”ಮಹಿಳಾ ಮೀಸಲು ವಿಧೇಯಕವನ್ನು ಯಾರು ಜಾರಿಗೆ (Women’s Reservation Bill) ತಂದರು” ಎಂದು ಪ್ರಶ್ನಿಸಿದರು. ಬಿಜೆಪಿ ಕಾರ್ಯಕರ್ತರು, ”ಮೋದಿ ಮೋದಿ ಮೋದಿ” ಎಂದು ಘೋಷಣೆ ಕೂಗಿದರು. ಆಗ ಮೋದಿ, ”ಇಲ್ಲ ನಿಮ್ಮ ಉತ್ತರ ತಪ್ಪು. ನಿಮ್ಮ ಒಂದು ವೋಟು ಮಹಿಳಾ ಮೀಸಲು ವಿಧೇಯಕವನ್ನು ಜಾರಿಗೆ ತಂದಿದೆ” ಎಂದು ಹೇಳಿದರು.
ಕಾಂಗ್ರೆಸ್ ಮನಸ್ಸು ಮಾಡಿದ್ದರೆ 30 ವರ್ಷಗಳ ಹಿಂದೆಯೇ ಮಹಿಳಾ ಮೀಸಲು ವಿಧೇಯಕವನ್ನು ಜಾರಿಗೆ ತರುತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ಮೀಸಲು ಜಾರಿ ಮಾಡುವುದು ಬೇಕಾಗಿರಲಿಲ್ಲ. ಕಾಂಗ್ರೆಸ್ ಮತ್ತು ಘಮಂಡಿಯಾ ಒಕ್ಕೂಟವು ಮಹಿಳಾ ಮೀಸಲು ವಿರುದ್ಧವಿದೆ. ರಾಜಸ್ಥಾನದ ನನ್ನ ಸಹೋದರಿಯರೇ, ಈ ಸಂಗತಿಯನ್ನು ಯಾವಾಗಲೂ ನೆನಪಡಿ ಮತ್ತು ಎಚ್ಚರಿಕೆ ವಹಿಸಿ ಎಂದು ಮಹಿಳೆಯರಿಗೆ ಕರೆ ನೀಡಿದರು.
ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ
शौर्य, स्वाभिमान और बलिदान की धरती राजस्थान आकर मैं सदैव गौरवान्वित महसूस करता हूं। जयपुर में ‘परिवर्तन संकल्प महासभा’ को संबोधित कर रहा हूं। https://t.co/x7loKuXBUR
— Narendra Modi (@narendramodi) September 25, 2023
ರಾಜಸ್ಥಾನದ ಸನಾತನ ಪರಂಪರೆಯನ್ನು ನೆನಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಚುನಾವಣೆ ಮಾತ್ರವಲ್ಲ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಕೂಟಕ್ಕೆ ರಾಜಸ್ಥಾನವು ಪಾಠ ಕಲಿಸಲಿದೆ. ಅವರು ಬೇರು ಸಮೇತ ಕಿತ್ತು ಬೀಳಲಿದ್ದಾರೆ ಎಂದು ಹೇಳಿದರು.
ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಮೋದಿ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕಣರವನ್ನು ಉಲ್ಲೇಖಿಸಿದರು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳ ವಿರುದ್ಧ ಗೆಹ್ಲೋಟ್ ಸರ್ಕಾರವು ಕ್ರಮ ಕೈಗೊಂಡಿಲ್ಲ. ಆದರೆ, ಬಿಜೆಪಿಯು ಶೀಘ್ರವೇ ಆಡಳಿತಕ್ಕೆ ಬರತ್ತದೆ ಮತ್ತು ಯುವಕರ ತೊಂದರೆಯನ್ನು ಪರಿಹರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಎಲ್ಲ ಗ್ಯಾರಂಟಿಗಳ ಜಾರಿಗೂ ಮೋದಿಯೇ ಗ್ಯಾರಂಟಿ; ಪ್ರಧಾನಿ ಅಬ್ಬರದ ಭಾಷಣ
ಒಂದೆಡೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗ್ಯಾರಂಟಿ ಹೆಸರಿನಲ್ಲಿಯೇ ಕಾಂಗ್ರೆಸ್‌ಗೆ ತಿರುಗೇಟು ನೀಡುತ್ತಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಕಾರ್ಯಕರ್ತ ಮಹಾಕುಂಭದಲ್ಲಿ (Karyakarta Mahakumbh) ಪಾಲ್ಗೊಂಡ ಅವರು, “ದೇಶದಲ್ಲಿ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಲು ಮೋದಿಯೇ ಗ್ಯಾರಂಟಿ” ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Women’s Reservation Bill: ಅವಿರೋಧವಾಗಿ ‘ಮಹಿಳಾ ಮೀಸಲು ವಿಧೇಯಕ’ ಅಂಗೀಕರಿಸಿದ ರಾಜ್ಯಸಭೆ! ಇತಿಹಾಸ ಸೃಷ್ಟಿ
“ವರ್ಷಗಳವರೆಗೆ ದೇಶವನ್ನು ಆಳಿದ ಕಾಂಗ್ರೆಸ್‌ಗೆ ದೇಶಾದ್ಯಂತ ಶೌಚಾಲಯ ನಿರ್ಮಿಸಬೇಕು ಎಂಬ ಕನಿಷ್ಠ ಕಾಳಜಿಯೂ ಇರಲಿಲ್ಲ. ಮಹಿಳೆಯರಿಗೆ ಕನಿಷ್ಠ ಒಂದು ಬ್ಯಾಂಕ್ ಖಾತೆ ಇರಲಿಲ್ಲ. ದೇಶಾದ್ಯಂತ ಶೌಚಾಲಯಗಳನ್ನು ನಿರ್ಮಿಸಲು, ಬ್ಯಾಂಕ್ ಖಾತೆ ತೆರೆಯಲು ಮೋದಿಯೇ ಬರಬೇಕಾಯಿತು. ಏಕೆಂದರೆ, ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್‌ಗೆ ನಿಯತ್ತು ಇರಲಿಲ್ಲ” ಎಂದು ಹರಿಹಾಯ್ದರು. ಹಾಗೆಯೇ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ರಾಜ್ಯ, ದೇಶದ ಅಭಿವೃದ್ಧಿಗೆ ಕಾರಣರಾಗಬೇಕು ಎಂದರು. ಭಾಷಣದ ವೇಳೆ ಮೋದಿ ಅವರು ವಿಶ್ವಕರ್ಮ ಯೋಜನೆ, ಮುದ್ರಾ ಯೋಜನೆ, ಸನಾತನ ಧರ್ಮ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.
ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. “ದೇಶದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ವಿಧೇಯಕ ಮಂಡಿಸಿ, ಅಂಗೀಕಾರ ಪಡೆದಿದೆ. ಇದು ದೇಶದಲ್ಲಿಯೇ ಮಹಿಳಾ ಸಬಲೀಕರಣಕ್ಕಾಗಿ ತೆಗೆದುಕೊಂಡ ಐತಿಹಾಸಿಕ ತೀರ್ಮಾನವಾಗಿದೆ. ಆದರೆ, ಕಳೆದ 30 ವರ್ಷದಿಂದ ಮಹಿಳಾ ಮೀಸಲಾತಿ ಭರವಸೆ ನೀಡಿತೇ ಹೊರತು, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಾವು ಮಾತ್ರ ಮಹಿಳಾ ಸಬಲೀಕರಣದ ಗ್ಯಾರಂಟಿ ಜಾರಿಗೆ ತಂದಿದ್ದೇವೆ” ಎಂದು ಹೇಳಿದರು.