ಗಾಂಧಿನಗರ: ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರ ಸಹೋದರ ಸೊಸೆ, ಸಮಾಜವಾದಿ ಪಕ್ಷದ ನಾಯಕಿ ಮಾರಿಯಾ ಆಲಂ (Maria Alam) ಅವರು ವೋಟ್ ಜಿಹಾದ್‌ಗೆ ಕರೆ ನೀಡಿರುವುದು ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಮಾರಿಯಾ ಆಲಂ ವಿರುದ್ಧ ಬಿಜೆಪಿ ನಾಯಕರು ಹರಿಹಾಯುತ್ತಿದ್ದಾರೆ. ಇದರ ಬೆನ್ನಲ್ಲೇ, ವೋಟ್ ಜಿಹಾದ್ ಹೇಳಿಕೆ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ವೋಟ್ ಜಿಹಾದ್‌ಗೆ (Vote Jihad) ಕರೆ ನೀಡಿರುವುದು ಇಂಡಿಯಾ ಒಕ್ಕೂಟದ ಮನಸ್ಥಿತಿಗೆ ಹಿಡಿದ ಕೈಗನ್ನಡಿ” ಎಂದು ಮೋದಿ ಟೀಕಿಸಿದ್ದಾರೆ.
“ಮುಸ್ಲಿಮರೆಲ್ಲರೂ ವೋಟ್ ಜಿಹಾದ್ ಕೈಗೊಳ್ಳಬೇಕು. ಮದರಸಾದಲ್ಲಿ ಅಲ್ಲ, ಉನ್ನತ ಶಿಕ್ಷಣ ಪಡೆದವರೇ ಇಂತಹ ಹೇಳಿಕೆ ನೀಡಿದ್ದಾರೆ. ಮುಸ್ಲಿಮರೆಲ್ಲರೂ ಒಗ್ಗೂಡಿ ಇಂಡಿಯಾ ಒಕ್ಕೂಟವನ್ನು ಗೆಲ್ಲಿಸಬೇಕು ಎಂಬುದಾಗಿ ಅವರು ಕರೆ ನೀಡುತ್ತಿದ್ದಾರೆ. ಇವರು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದಾರೆ. ಇದು ಇಂಡಿಯಾ ಒಕ್ಕೂಟದ ನಾಯಕರ ಮನಸ್ಥಿತಿಯಾಗಿದೆ” ಎಂದು ಗುಜರಾತ್‌ನ ಆನಂದ್ ನಗರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮೋದಿ ವಾಗ್ದಾಳಿ ನಡೆಸಿದರು.
#WATCH | Gujarat: Addressing a public rally in Anand, Prime Minister Narendra Modi says, "Look at the coincidence, today Congress is getting weak in India. The funny thing is that here Congress is dying and there Pakistan is crying. Now Pakistani leaders are praying for Congress.… pic.twitter.com/MpuYsQnWX3
— ANI (@ANI) May 2, 2024
“ಇದೇ ವೇಳೆ ಪ್ರಧಾನಿ ಮೋದಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ವೋಟ್ ಜಿಹಾದ್ ಘೋಷಣೆ ವಿಚಾರವನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. “ನಾವು ಲವ್ ಜಿಹಾದ್ ಮತ್ತು ಭೂ ಜಿಹಾದ್ ಕೇಳಿದ್ದೇವೆ. ಇದೀಗ ಮೊದಲ ಬಾರಿಗೆ ವೋಟ್ ಜಿಹಾದ್ ಬಗ್ಗೆ ಕೇಳುತ್ತಿದ್ದೇವೆ. ಮುಸ್ಲಿಮರೆಲ್ಲಾ ಒಗ್ಗಟ್ಟಾಗಿ ವೋಟ್ ಜಿಹಾದ್ ಮಾಡುವಂತೆ ಕರೆ ಕೊಡಲಾಗುತ್ತಿದೆ. ಇದು ಪ್ರತಿಪಕ್ಷಗಳ ನಿಜವಾದ ಮುಖ. ತಮ್ಮ ಮೈತ್ರಿ ಸರ್ಕಾರಗಳು ಅಧಿಕಾರದದಲ್ಲಿರುವ ರಾಜ್ಯಗಳಲ್ಲಿ ಮುಸ್ಲಿಮರಿಗೆ ವಾಮಮಾರ್ಗದಲ್ಲಿ ಮೀಸಲಾತಿ ಘೋಷಿಸುವುದೇ ಕಾಂಗ್ರೆಸ್‌ನ ಪ್ರಮುಖ ಗುರಿ. ಹಾಗೆ ಇಲ್ಲದಿದ್ದರೆ ಕಾಂಗ್ರೆಸ್ ಲಿಖಿತ ರೂಪದಲ್ಲಿ ಬರೆದುಕೊಡಲಿ” ಎಂದು ಸವಾಲೆಸದರು.
Salman Khurshid’s niece speaks of ‘vote jihad’ in Farrukhabad campaign.
— Padmaja Joshi (@PadmajaJoshi) April 30, 2024
Worse, asks for ‘hukka paani bandh’ of those Muslims who support the BJP.
R.I.P free choice and democracy. pic.twitter.com/ICjGIjXjTW
ಪಾಕಿಸ್ತಾನ ತನ್ನ ಬೇಳೆ ಬೇಯಿಸಿಕೊಳ್ಳಬೇಕಾದರೆ ಭಾರತದಲ್ಲಿ ದುರ್ಬಲ ಸರ್ಕಾರ ಇರಬೇಕು. ಈ ಹಿಂದೆ ಇದ್ದ ದುರ್ಬಲ ಸರ್ಕಾರದ ಕಾರಣದಿಂದಾಗಿಯೇ ಪಾಕಿಸ್ತಾನಕ್ಕೆ ಮುಂಬೈ ಭಯೋತ್ಪಾದಕಾ ದಾಳಿ ನಡೆಸಲು ಸಾಧ್ಯವಾಗಿತ್ತು. ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಪಾಕಿಸ್ತಾನದ ಫಾಲೋವರ್‌ನಂತೆ ವರ್ತಿಸುತ್ತಿದೆ. ಹೀಗಾಗಿಯೇ ಇಲ್ಲಿ ಕಾಂಗ್ರೆಸ್ ಅಧಃಪತನ ಆಗುತ್ತಿದ್ದರೆ ಅಲ್ಲಿ ಪಾಕಿಸ್ತಾನ ಕಣ್ಣೀರುಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಇವತ್ತು ನಾನು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುತ್ತೇವೆ ಎಂಬ ಗ್ಯಾರಂಟಿಯನ್ನು ಕೊಡುತ್ತಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Maria Alam Khan: “ಜಿಹಾದ್‌ಗಾಗಿ ಮತ ನೀಡಿ..”ಮಾಜಿ ಕೇಂದ್ರ ಸಚಿವರ ಸೊಸೆಯಿಂದ ಭಾರೀ ಎಡವಟ್ಟು