ಲಕ್ಷದ್ವೀಪ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಬ್ಬರದ ಭಾಷಣ, ಶಿಸ್ತಿನ ಆಡಳಿತಕ್ಕೆ ಎಷ್ಟು ಪ್ರಸಿದ್ಧವೋ, ಬಗೆಯ ಬಗೆಯ ದಿರಸು ಧರಿಸುವುದು, ಕಾಡಿನಲ್ಲಿ ಸುತ್ತಾಡುವುದು ಸೇರಿ ಹಲವು ಹವ್ಯಾಸಗಳನ್ನು ಹೊಂದಿದ್ದಾರೆ. ಇಂತಹ ನರೇಂದ್ರ ಮೋದಿ ಅವರೀಗ ಲಕ್ಷದ್ವೀಪದಲ್ಲಿ ಈಜಾಡುವ (Snorkelling-ನೀರಿನ ಮೇಲ್ಮೈನಲ್ಲಿ ಕೃತಕ ಆಮ್ಲಜನಕದ ಮಾಸ್ಕ್, ಸ್ವಿಮ್ಮಿಂಗ್ ದಿರಸು ಧರಿಸಿ ಈಜಾಡುವುದು) ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ, ಸ್ವಿಮ್ಮಿಂಗ್ ಸೂಟ್ ಧರಿಸಿ, ಆಕ್ಸಿಜನ್ ಮಾಸ್ಕ್ ಧರಿಸಿಕೊಂಡು ಈಜಾಡಿದ ಫೋಟೊಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮೋದಿ ಈಜಾಡುವ ವಿಡಿಯೋ ಸಖತ್ ವೈರಲ್ ಆಗಿದೆ(Viral Video).
“ಯಾರು ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದೀರೋ, ನಿಮ್ಮ ಪಟ್ಟಿಯಲ್ಲಿ ಮೊದಲು ಲಕ್ಷದ್ವೀಪ ಇರಲಿ. ನಾನು ಲಕ್ಷದ್ವೀಪಕ್ಕೆ ಭೇಟಿ ನೀಡಿದಾಗ ಸ್ನಾರ್ಕಲಿಂಗ್ ಮಾಡಿದೆ. ಇದು ನನಗೆ ಮನೋಜ್ಞವಾದ ಅನುಭವವನ್ನು ನೀಡಿದೆ” ಎಂದು ಮೋದಿ ಅವರು ಹಲವು ಫೋಟೊಗಳ ಸಮೇತ ಎಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಈಜಾಡುವ, ಸಮುದ್ರದ ತೀರದಲ್ಲಿ ಕುಳಿತಿರುವ, ನಿಂತಿರುವ ಫೋಟೊದ ಜತೆಗೆ ಮೀನು ಸೇರಿ ಹಲವು ಜಲಚರಗಳ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ. ಈ ಫೋಟೊಗಳು ಈಗ ವೈರಲ್ ಆಗಿವೆ.
“ಲಕ್ಷದ್ವೀಪವು ಸೌಂದರ್ಯದ ಗಣಿಯಾಗಿದೆ. ಅಲ್ಲದೆ, ಇಲ್ಲಿನ ಶಾಂತಿಯುತ ವಾತಾವರಣ, ಪರಿಸರವು ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ದೇಶದ 140 ಕೋಟಿ ಜನರ ಏಳಿಗೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶ್ರಮಿಸಬೇಕು ಎಂಬ ಉದ್ದೇಶವನ್ನು ಇನ್ನಷ್ಟು ಗಟ್ಟಿಗೊಳಿಸಿದೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ. ನರೇಂದ್ರ ಮೋದಿ ಅವರ ಫೋಟೊಗಳಿಗೆ ನೂರಾರು ಜನ ಪ್ರತಿಕ್ರಿಯಿಸಿದ್ದಾರೆ. “ಬಾಲಿವುಡ್ ನಟರು ಮಾಲ್ಡೀವ್ಸ್ ಪ್ರವಾಸಕ್ಕೆ ಹೋದಾಗ ತೆಗೆಸಿಕೊಂಡಂತೆ ಈ ಫೋಟೊಗಳು ಇವೆ” ಎಂದು ಒಬ್ಬರು ಪ್ರತಿಕ್ರಿಯಸಿದ್ದಾರೆ.
“ಭರತವರ್ಷದ ಬ್ರ್ಯಾಂಡ್ ಅಂಬಾಸಿಡರ್” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಪ್ರತಿಕ್ರಿಯಿಸಿ, “ಒಂದೊಂದು ಸಲವಂತೂ ನೀವು ರಾಮನ ಅವತಾರದಂತೆ ಕಾಣಿಸುತ್ತೀರಿ” ಎಂದಿದ್ದಾರೆ. ಹೀಗೆ ನೂರಾರು ಜನ ನೂರಾರು ರೀತಿ ಪ್ರತಿಕ್ರಿಯಿಸಿದ್ದಾರೆ. ನರೇಂದ್ರ ಮೋದಿ ಅವರು 2019ರಲ್ಲಿ ಕಾಡಿನಲ್ಲಿ ಸಾಹಸ ಚಟುವಟಿಕೆ ಕೈಗೊಳ್ಳುವ, ಕಾನನ ಸುತ್ತಾಡುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೇರ್ ಗ್ರಿಲ್ಸ್ ಜತೆ ಮೋದಿ ಅವರು ಕಾಡು ಸುತ್ತಿದ್ದರು.
Glimpses from PM Shri @narendramodi Ji's visit to Lakshadweep. pic.twitter.com/84PcaMG1rx
— Pratap Simha (@mepratap) January 4, 2024
ಈ ಸುದ್ದಿಯನ್ನೂ ಓದಿ: PM Narendra Modi: ‘ರಾಮ್ ಆಯೇಂಗೆ…’ ಭಜನೆಗೆ ಪ್ರಧಾನಿ ನರೇಂದ್ರ ಮೋದಿ ಫುಲ್ ಫಿದಾ!