ಮೋರ್ಬಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ, ಮೋರ್ಬಿ ಸೇತುವೆ ಕುಸಿತ ಜಾಗಕ್ಕೆ (Morbi Bridge Collapse) ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಭಾನುವಾರ ಮೋರ್ಬಿ ಸೇತುವೆ ಕುಸಿದು, ಅಂದಾಜು 140 ಜನರು ಮೃತಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಇದ್ದರು. ಶೋಧ ಮತ್ತು ಪರಿಹಾರ ಕಾರ್ಯಾಚರಣೆಯ ಮಾಹಿತಿಯನ್ನು ಅವರು ಪಡೆದುಕೊಂಡರು. ಇದಾದ ಬಳಿಕ ಅವರು ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದರು.
ಏತನ್ಮಧ್ಯೆ, ಮೋರ್ಬಿ ಬ್ರಿಡ್ಜ್ ಕುಸಿತವನ್ನು ನ್ಯಾಯಾಂಗ ತನಿಖೆಗೆ ಆಗ್ರಹಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಕೂಡ ದಾಖಲಾಗಿದ್ದು, ನವೆಂಬರ್ 14ರಂದು ಕೋರ್ಟ್ ವಿಚಾರಣೆ ನಡೆಸಲಿದೆ. ಭಾನುವಾರ ಸಂಭವಿಸಿದ ಈ ಮೋರ್ಬಿ ಬ್ರಿಡ್ಜ್ ದುರಂತದಲ್ಲಿ ಸುಮಾರು 140 ಜನರು ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ 47 ಮಕ್ಕಳಿದ್ದಾರೆ. ಮಹಿಳೆಯುರ ಮತ್ತು ವಯಸ್ಸಾದವರು ಹೆಚ್ಚಿದ್ದಾರೆಂದು ತಿಳಿದು ಬಂದಿದೆ.
ಇದೇ ವೇಳೆ, ಈ ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರ ಒಂಬತ್ತು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ, ಸೇತುವೆ ನಿರ್ವಹಣೆ ಜವಾಬ್ದಾರಿಯನ್ನು ಹೊಂದಿದ್ದ ಒರೆವಾ ಕಂಪನಿಯ ವ್ಯವಸ್ಥಾಪಕರು, ಸೆಕ್ಯುರಿಟಿ ಗಾರ್ಡ್‌ಗಳು, ಗುತ್ತಿಗೆದಾರರು ಇದ್ದಾರೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಮೋರ್ಬಿ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಇದನ್ನೂ ಓದಿ | Morbi Bridge Collapse | ಮೋರ್ಬಿ ಬ್ರಿಡ್ಜ್ ಕುಸಿತ ದೇವರ ಸಂದೇಶವಲ್ಲವೇ? ಮೋದಿಗೆ ಸಿದ್ದು ಪ್ರಶ್ನೆ!