ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಆಡ್ವಾಣಿ (L K Advani) ಮನೆಗೆ ಹೋಗಿ, ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಕೂಡ ಜತೆಗಿದ್ದರು. ಆಡ್ವಾಣಿ ಅವರ ಬರ್ತ್‌ಡೇಗೆ ಪ್ರತಿ ವರ್ಷವೂ ಮೋದಿ ಅವರು ಮನೆಗೇ ತೆರಳಿ ಶುಭಾಶಯ ಕೋರುತ್ತಾರೆ. 95ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಆಡ್ವಾಣಿ ಅವರಿಗೆ ಶುಭಾಶಯಗಳು ಹರಿದು ಬರುತ್ತಿವೆ.
ದೇಶದಲ್ಲಿ ಇಂದು ಬಿಜೆಪಿ ಇಷ್ಟು ದೊಡ್ಡ ಮಟ್ಟಿಗೆ ಬೆಳೆಯಲು ಅಟಲ್ ಬಿಹಾರಿ ವಾಜಪೇಯಿ ಅವರ ಜತೆಗೆ ಎಲ್ ಕೆ ಆಡ್ವಾಣಿ ಅವರು ಕೊಡುಗೆಯೂ ಶ್ಲಾಘನಾರ್ಹವಾಗಿದೆ. ಈ ಇಬ್ಬರು ನಾಯಕರು ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳಿಸಿದ ಪರಿಣಾಮ ಇಂದು ಬಿಜೆಪಿ ಕಳೆದ 8 ವರ್ಷಗಳಿಂದ ಅಧಿಕಾರದಲ್ಲಿದೆ. ಈ ಕಾರಣಕ್ಕಾಗಿ ಬಿಜೆಪಿಯ ನಾಯಕರು ಎಲ್ ಕೆ ಆಡ್ವಾಣಿ ಅವರನ್ನು ಲೋಹ ಪುರುಷ ಎಂದು ಕರೆಯುತ್ತಾರೆ. ಬಿಜೆಪಿಯ ನಾಯಕರು ಮಾತ್ರವಲ್ಲದೇ ಪ್ರತಿಪಕ್ಷಗಳ ನಾಯಕರು ಸೇರಿದಂತೆ ಎಲ್ಲರೂ ಆಡ್ವಾಣಿ ಅವರಿಗೆ ಶುಭಾಶಯ ಕೋರಿದ್ದಾರೆ.
ಇದನ್ನು ಓದಿ | Modi birthday | ಪಿಎಂ ಆದ ಮೇಲೆ ಎಂಟು ವಿಶಿಷ್ಟ ಬರ್ತ್‌ಡೇಗಳು!