ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಡಿಸೆಂಬರ್ 30, ಶನಿವಾರ ಅಯೋಧ್ಯೆಗೆ (Ayodhya) ಭೇಟಿ ನೀಡಲಿದ್ದಾರೆ. ಮಹರ್ಷಿ ವಾಲ್ಮೀಕಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಅಯೋಧ್ಯಾಧಾಮ(Maharishi Valmiki International Airport Ayodhya Dham) ಮತ್ತು ಅಯೋಧ್ಯೆ ರೈಲು ನಿಲ್ದಾಣವನ್ನು (Ayodhya Railway Station) ಉದ್ಘಾಟಿಸಲಿದ್ದಾರೆ. ತಮ್ಮ ಭೇಟಿಯ ವೇಳೆ ಅವರು ₹3,284.60 ಕೋಟಿಗೂ ಅಧಿಕ ಮೊತ್ತದ 29 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ವೇಳೆ, ರೋಡ್‌ಶೋ (Modi Road Show) ಮತ್ತು ಸಾರ್ವಜನಿಕ ಸಭೆಯನ್ನೂ ನಡೆಸಲಿದ್ದಾರೆ ಎಂದು ಅಯೋಧ್ಯೆಯ ಆಯುಕ್ತ ಗೌರವ್ ದಯಾಳ್ ಹೇಳಿದ್ದಾರೆ. ಜನವರಿ 22ರಂದು ರಾಮ ಮಂದಿರ (Ram Mandir) ಉದ್ಘಾಟನೆಯಾಗಲಿದೆ.
This is how #Ayodhya
— Ajit kumar (@connectajitcpr) December 22, 2023
Airport will be n it will be
fully operational before #Rammandir opening..
Courtesy –
Instagram – ayodhya_tourismpic.twitter.com/8zPN0J91TN
ಈ ಕಾರ್ಯಕ್ರಮಗಳು ಹಾಗೂ ಮುಂಬರಲಿರುವ ಶ್ರೀರಾಮ ಮಂದಿರ ಉದ್ಘಾಟನೆಗೆ (Ayodhya Ram Mandir) ಮುನ್ನ ನಗರದಲ್ಲಿ ಮಾಡಲಾಗುತ್ತಿರುವ ವ್ಯವಸ್ಥೆಗಳ ಬಗ್ಗೆ ದಯಾಳ್ ಮಾಹಿತಿ ನೀಡಿದರು. “ಇಲ್ಲಿನ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಿವೆ. ಮುಖ್ಯಮಂತ್ರಿಗಳೂ ಅದನ್ನು ಪರಿಶೀಲಿಸುತ್ತಿದ್ದಾರೆ. ಉನ್ನತ ಮಟ್ಟದ ಸೇವೆಗಳಿಗಾಗಿ, ನಾವು ಇಲ್ಲಿಂದ ಲಕ್ನೋಗೆ ಬ್ಯಾಕಪ್ ಯೋಜನೆಯನ್ನು ಹೊಂದಿದ್ದೇವೆ. ಡಿಸೆಂಬರ್ 30ರಂದು ಪ್ರಧಾನಿ ಬರುತ್ತಿದ್ದಾರೆ. ಮೊದಲ ಹಂತದಲ್ಲಿರುವ ಏರ್‌ಪೋರ್ಟ್ ಮತ್ತು ರೈಲು ನಿಲ್ದಾಣಗಳ ಉದ್ಘಾಟನೆ ನಡೆಯಲಿದೆ. ಅಂದಾಜಿನ ಪ್ರಕಾರ ಜನವರಿ 22ರ ನಂತರ 50,000-55,000 ಜನ ಪ್ರತಿದಿನ ಅಯೋಧ್ಯೆಗೆ ಬರಬಹುದು. ಆಡಳಿತವು ಅದಕ್ಕೆ ತಯಾರಿ ನಡೆಸುತ್ತಿದೆ” ಎಂದು ದಯಾಳ್ ಹೇಳಿದರು.
“ಪ್ರಧಾನಿ ರೈಲುಗಳಿಗೆ ಹಸಿರು ಬಾವುಟ ತೋರಿಸಲಿದ್ದಾರೆ. ನಂತರ ವಿಮಾನ ನಿಲ್ದಾಣದ ಮುಂದಿನ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ. ಅವರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗುತ್ತಿದೆ” ಎಂದು ಅಯೋಧ್ಯೆಯ ಆಯುಕ್ತರು ತಿಳಿಸಿದ್ದಾರೆ.
Maharshi Valmiki International Airport, Ayodhya, is all set for tomorrow's inauguration by PM Shri @narendramodi Ji.
— Tejasvi Surya (@Tejasvi_Surya) December 29, 2023
Built with state-of-the-art facilities incorporating the city's cultural heritage, the Airport is a shining example of how development & cultural preservation… pic.twitter.com/jhYOnYbOJa
ಜನವರಿ 22ರಂದು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಭಗವಾನ್ ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಉತ್ತರ ಪ್ರದೇಶ ಸರ್ಕಾರವು ಡಿಸೆಂಬರ್ 30ರಿಂದ ಜನವರಿ ವರೆಗೆ ನಡೆಯುವ ಕಾರ್ಯಕ್ರಮಗಳ ಸರಣಿಯ ರಾಮೋತ್ಸವಕ್ಕಾಗಿ ₹100 ಕೋಟಿ ಬಜೆಟ್ ಅನ್ನು ನಿಗದಿಪಡಿಸಿದೆ. ಈ ಮಹತ್ವದ ಧಾರ್ಮಿಕ ಕಾರ್ಯಕ್ರಮಕ್ಕೆ ಮುಂಚಿತವಾಗಿ, ಆಡಳಿತವು ನಗರದ ಸೌಂದರ್ಯೀಕರಣ ಅಭಿಯಾನವನ್ನು ಪ್ರಾರಂಭಿಸಿದೆ. ರಸ್ತೆಗಳನ್ನು ಅಗಲೀಕರಣಗೊಳಿಸಲಾಗುತ್ತಿದೆ ಮತ್ತು ಮೂಲಸೌಕರ್ಯಗಳನ್ನು ನವೀಕರಿಸಲಾಗುತ್ತಿದೆ. ಸಮಾರಂಭಕ್ಕೆ 3000 ವಿವಿಐಪಿಗಳು ಸೇರಿದಂತೆ 7000 ಜನರನ್ನು ಆಹ್ವಾನಿಸಲಾಗಿದೆ.
ಅಯೋಧ್ಯಾ ರೈಲು ನಿಲ್ದಾಣಕ್ಕೆ ಮರು ನಾಮಕರಣ
ಅಯೋಧ್ಯೆ ರೈಲು ನಿಲ್ದಾಣವನ್ನು, ಸಿಟಿ ಅಯೋಧ್ಯಾ ಜಂಕ್ಷನ್‌ಗೆ (Ayodhya Railway Station) ಬದಲಿಗೆ ಅಯೋಧ್ಯಾ ಧಾಮ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ(Ayodhya Dham Junction).
ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯಾ ಧಾಮ ಜಂಕ್ಷನ್ ಅನ್ನು ಡಿಸೆಂಬರ್ 30ರಂದು ಉದ್ಘಾಟನೆ ಮಾಡಲಿದ್ದಾರೆ. ಈ ರೈಲು ನಿಲ್ದಾಣವನ್ನು ಮೂರು ಹಂತದಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ರೈಲು ನಿಲ್ದಾಣ ಉದ್ಘಾಟನೆ ಹೊತ್ತಿಗೆ ಮೊದಲ ಹಂತದ ಅಭಿವೃದ್ದಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ. ಅಯೋಧ್ಯ ರೈಲು ನಿಲ್ದಾಣ ಮರುನಾಮಕರಣದ ಉತ್ತರ ಪ್ರದೇಶದ ಪ್ರಸ್ತಾಪವನ್ನು ರೈಲ್ವೆ ಇಲಾಖೆ ಒಪ್ಪಿಕೊಂಡಿದೆ. ಹಾಗಿದ್ದೂ, ಸ್ಟೇಷನ್ ಕೋಡ್‌ನೇಮ್‌ನಲ್ಲಿ ಬದಲಾವಣೆ ಮಾಡುತ್ತಿಲ್ಲ.
ರಾಮ ಮಂದಿರ ನಿರ್ಮಾಣಕ್ಕಾಗಿ ರಾಜಸ್ಥಾನದ ಭಾರತಪುರ್ ಜಿಲ್ಲೆಯಿಂದಲೇ ಕಲ್ಲುಗಳನ್ನು ತರಿಸಲಾಗಿತ್ತು. ಈ ಅಯೋಧ್ಯೆ ರೈಲು ನಿಲ್ದಾಣ ಅಭಿವೃದ್ಧಿಗೂ ಅಲ್ಲಿಂದಲೇ ಕಲ್ಲುಗಳನ್ನು ತರಿಸಲಾಗಿದೆ. ಗುಣಮಟ್ಟ ಮತ್ತು ಅನುಕೂಲತೆಯ ದೃಷ್ಟಿಯಿಂದ ವಿಮಾನ ನಿಲ್ದಾಣದ ಸೌಲಭ್ಯಗಳನ್ನು ಸಹ ಮೀರಿಸುವಂತಹ ಅದರ ನಿಖರವಾದ ಯೋಜಿತ ನಿಲ್ದಾಣವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಶಿಶುಪಾಲನಾ ಕೇಂದ್ರ, ಆನಾರೋಗ್ಯರಿಗೆ ಪ್ರತ್ಯೇಕ ಕೋಣೆ, ಪ್ರವಾಸಿ ಮಾಹಿತಿ ಕೇಂದ್ರ, ಅಗ್ನಿ ಅವಘಡ ನಿರ್ಗಮನ ದ್ವಾರ ಮತ್ತು ದೇಶದಲ್ಲೇ ಅತಿ ದೊಡ್ಡ ಎನ್ನಬಹುದಾದ ಅಂಗಣ ಸೇರಿದಂತೆ ಅನೇಕ ಸೌಲಭ್ಯಗಳು ಈ ರೈಲ್ವೆ ನಿಲ್ದಾಣದಲ್ಲಿ ದೊರೆಯಲಿವೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Ayodhya Ram Mandir: ಕಾಶಿಯ ಭಿಕ್ಷುಕರಿಂದ ಅಯೋಧ್ಯೆ ರಾಮ ಮಂದಿರಕ್ಕೆ ರೂ.4 ಲಕ್ಷ ದೇಣಿಗೆ!