Site icon Vistara News

PM Narendra Modi: ಹೊಸ ಸಿಎಂ ನಿತೀಶ್ ಕುಮಾರ್‌‌ಗೆ ಪಿಎಂ ನರೇಂದ್ರ ಮೋದಿ ಹೇಳಿದ್ದೇನು?

PM Narendra Modi wishes new cm Nitish kumar

ನವದೆಹಲಿ: ನಿತೀಶ್ ಕುಮಾರ್ (Nitish Kumar) ಅವರು ದಾಖಲೆಯ 9ನೇ ಬಾರಿಗೆ ಮುಖ್ಯಮಂತ್ರಿಯಾಗಿ (Chief Minister) ಅಧಿಕಾರ ಸ್ವೀಕರಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೊಸ ತಂಡಕ್ಕೆ ಶುಭಾಶಯಗಳನ್ನು ಕೋರಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿಯಿಂದ ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ ಸಿನ್ಹಾ ಅವರಿಗೆ ಎಕ್ಸ್ ವೇದಿಕೆಯ ಮೂಲ ಕಂಗ್ರಾಟ್ಸ್ ಹೇಳಿದರು.

ಎನ್‌ಡಿಎ ಸರ್ಕಾರವು ರಚನೆಯಾಗಿದೆ. ಬಿಹಾರದ ಅಭಿವೃದ್ಧಿಗೆ ದೊರೆಯುವ ಯಾವುದೇ ಅವಕಾಶಗಳನ್ನು ಬಿಡುವುದಿಲ್ಲ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುತ್ತೇವೆ. ಮುಖ್ಯಮಂತ್ರಿಯಾಗುತ್ತಿರುವ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಸಾಮ್ರಾಟ್ ಚೌಧರಿ ಮತ್ತು ವಿಜಯ ಸಿನ್ಹಾ ಅವರಿಗೆ ಶುಭಾಶಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮೋದಿ ಅವರ ಶುಭಾಶಯಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರೂ ಪ್ರತಿ ಶುಭಾಶಯ ಕೋರಿದ್ದಾರೆ.
ನನ್ನ ಪರವಾಗಿ ಮತ್ತು ಬಿಹಾರದ ಎಲ್ಲಾ ಜನರ ಪರವಾಗಿ, ನಾನು ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳಿಗಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಅವರ ಸಹಕಾರಕ್ಕಾಗಿ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳು. ಬಿಹಾರದಲ್ಲಿ ಹೊಸ ಸರ್ಕಾರವನ್ನು ರಚಿಸಲಾಗಿದೆ. ಎನ್‌ಡಿಎ ಮೈತ್ರಿಕೂಟ, ಸಾರ್ವಜನಿಕರು ಮತ್ತು ಅವರ ಸೇವೆ ನಮ್ಮ ಮೂಲ ಉದ್ದೇಶವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಎನ್‌ಡಿಎ ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ವೇಗವನ್ನು ಪಡೆಯುತ್ತವೆ ಮತ್ತು ರಾಜ್ಯದ ಜನರಿಗೆ ಪ್ರಯೋಜನವಾಗಲಿದೆ ಎಂದು ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ನಿತೀಶ್ ಕುಮಾರ್ ಇಂಡಿಯಾ ಕೂಟ ತೊರೆಯಲು ಅಸಲಿ ಕಾರಣ ಇದು!

ಬಿಹಾರದಲ್ಲಿ ಉಂಟಾಗಿದ್ದ ನಾಲ್ಕೈದು ದಿನಗಳ ರಾಜಕೀಯ ಉಹಾಪೋಹಕ್ಕೆ (Bihar Politcs) ಭಾನುವಾರ ತೆರೆ ಬಿದ್ದಿದೆ. ರಾಷ್ಟ್ರೀಯ ಜನತಾ ದಳದ (RJD) ಸಖ್ಯ ತೊರೆದಿರುವ ಜೆಡಿಯು ನಾಯಕ ನಿತೀಶ್ ಕುಮಾರ್ (Nitish Kumar) ಮತ್ತೊಮ್ಮೆ ಬಿಜೆಪಿ ಜತೆಗೆ (BJP Party) ಕೈ ಜೋಡಿಸಿ, ಬಿಹಾರ ಸಿಎಂ ಆಗಿದ್ದಾರೆ(Bihar CM). ಒಂದು ದಶಕದಲ್ಲಿ ಅವರು ಇದು ಐದನೇ ಬಾರಿಗೆ ಮೈತ್ರಿ ಪಕ್ಷವನ್ನು ಬದಲಿಸಿದಂತಾಗಿದೆ. ಆರ್‌ಜೆಡಿಯನ್ನು ಕೈಬಿಡುವ ಮೂಲಕ ಅವರು ಇಂಡಿಯಾ ಕೂಟದಿಂದಲೂ (INDIA Bloc) ಹೊರ ಬಂದಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂಬ ಕುತೂಹಲವಿದೆ. ನಿತೀಶ್ ಕುಮಾರ್ ಅವರೇ ಮುಂದಾಗಿ, ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಇಂಡಿಯಾ ಕೂಟವನ್ನು ರಚಿಸಿದ್ದರು. ಈಗ ಅವರೇ ಅದನ್ನು ತೊರೆದಿದ್ದಾರೆ. ಇದಕ್ಕೆ ಕಾರಣ ಏನು?

ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ ಮತ್ತು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಜೊತೆ ಕೆಲಸ ಮಾಡಲು ಸಾಧ್ಯವಾಗದ ಪರಿಣಾಮ ನಿತೀಶ್ ರಾಜಕುಮಾರ್ ನೀಡಿದರು. ಪಕ್ಷದ ಸದಸ್ಯರೊಂದಿಗೆ ಸಮಾಲೋಚಿಸಿದ ನಂತರ, ಸಮ್ಮಿಶ್ರದಲ್ಲಿ ಅಸಮರ್ಥನೀಯ ಪರಿಸ್ಥಿತಿಯ ಕಾರಣದಿಂದ ಕೆಳಗಿಳಿಯಲು ಸಲಹೆ ಪಡೆದರು ಎಂದು ನಿತೀಶ್ ಕುಮಾರ್ ಅವರೇ ಹೇಳಿಕೊಂಡಿದ್ದಾರೆ. ಆದರೆ, ಮತ್ತೊಂದೆಡೆ ಜೆಡಿಯು ಕಾಂಗ್ರೆಸ್ ಪಕ್ಷವೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎಂದು ಹೇಳಿದೆ.

ಸಂಯುಕ್ತ ಜನತಾ ದಳದ ವರ್ತಾರ ಕೆ ಸಿ ತ್ಯಾಗಿ ಅವರು, ಇಂಡಿಯಾ ಕೂಟದ ನಾಯಕತ್ವವನ್ನು ಹೈಜಾಕ್ ಮಾಡಲು ಯತ್ನಿಸಿತು. ಹಾಗಾಗಿಯೇ ಜೆಡಿಯುವ ಇಂಡಿಯಾ ಕೂಟದಿಂದ ಹೊರ ಬರಬೇಕಾಯಿತು ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಜತೆಗೂಡಿ ಸಂಚು ರೂಪಿಸಿದ ಕಾಂಗ್ರೆಸ್ ನಾಯಕತ್ವವನ್ನು ಪಡೆದುಕೊಳ್ಳಲು ಹವಣಿಸಿತು ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ 19ರಂದು ನಡೆದ ಇಂಡಿಯಾ ಮೈತ್ರಿ ಕೂಟದ ಸಭೆಯಲ್ಲಿ ಸಂಚಿನ ಮೂಲಕವೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಹುದ್ದೆಗೆ ಪ್ರಕಟಿಸಲಾಯಿತು. ಪಿತೂರಿಯ ಮೂಲಕ, ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮುಖವಾಗಿ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ ಪಕ್ಷದ ವಿರುದ್ಧ ಇತರ ಎಲ್ಲಾ ಪಕ್ಷಗಳು ಹೋರಾಟದ ಮೂಲಕ ತಮ್ಮದೇ ಆದ ಗುರುತನ್ನು ಮಾಡಿಕೊಂಡಿವೆ ಎಂದು ತ್ಯಾಗಿ ಅವರು ಹೇಳಿದರು.

ಸೀಟು ಹಂಚಿಕೆ ಪ್ರಕ್ರಿಯೆಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿತ್ತು ಮತ್ತು ಸೂಕ್ತವಲ್ಲದ ಬೇಡಿಕೆಗಳನ್ನು ಮಾಡುತ್ತಿತ್ತು. ಇದರಿಂದ ಪ್ರಾದೇಶಿಕ ನಾಯಕರು ಅಸಮಾಧಾನಕ್ಕೊಳಗಾದರು. ಕಾಂಗ್ರೆಸ್ ನಡೆದುಕೊಳ್ಳುತ್ತಿದ್ದ ರೀತಿ ಇಂಡಿಯಾ ಮೈತ್ರಿ ಕೂಟ ಒಗ್ಗಟ್ಟು ಮತ್ತು ಪರಿಣಾಮಕಾರಿಯಾಗುವುದಕ್ಕೆ ಹಾನಿಕಾರವಾಗಿತ್ತು ಎಂದು ತ್ಯಾಗಿ ಅವರು ಹೇಳಿದ್ದಾರೆ. ತಕ್ಷಣಕ್ಕೆ ಸೀಟ್ ಷೇರಿಂಗ್ ಆಗಬೇಕು ಎಂದು ನಾವು ಒತ್ತಾಯಿಸುತ್ತಿದ್ದೆವು. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ಈ ಪ್ರಕ್ರಿಯೆಯನ್ನು ಎಳೆಯುತ್ತಾ ಕಾಲಹರಣ ಮಾಡುತ್ತಿತ್ತು. ಬಿಜೆಪಿ ವಿರುದ್ಧ ಇಂಡಿಯಾ ಕೂಟಕ್ಕೆ ಹೋರಾಡಲು ಯೋಜನೆಗಳೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Nitish Kumar: ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟದ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ

Exit mobile version